ಸಿನಿಮಾ ಲೇಖನ

ಪಾರು ಪತ್ತೆಯಾದಳು

ಹಿರಿಯ ನಟಿ ಹಾಗೂ ನಿರ್ಮಾಪಕಿ ಜಯಮಾಲ ಪುತ್ರಿ ಸೌಂದರ್ಯ ಚಿತ್ರರಂಗಕ್ಕೆ ಬರುತ್ತಾರೆ ಎಂದಾಗ ಚಂದನವನಕ್ಕೆ...

ನಟಿ ಸೌಂದರ್ಯ ಜಯಮಾಲ ಅವರಿಗೆ ಬಿಡುಗಡೆಯ ಸಂಭ್ರಮ. ಆರಂಭದಲ್ಲಿ ಭರವಸೆ ಮೂಡಿಸಿದ ಈ ನಟಿಗೆ ಅವಕಾಶಗಳು ಬರಲಿಲ್ಲ. 'ಗಾಡ್‌ಫಾದರ್‌' ಕೂಡಾ ಕೈ
ಹಿಡಿಯಲಿಲ್ಲ. ಹಿರಿಯ ನಟಿ ಪುತ್ರಿ ನಾಪತ್ತೆಯಾದಳು ಎಂದುಕೊಳ್ಳುವಾಗಲೇ ನಾ 'ಪತ್ತೆ' ಎನ್ನುತ್ತಿದ್ದಾಳೆ.



ಹಿರಿಯ ನಟಿ ಹಾಗೂ ನಿರ್ಮಾಪಕಿ ಜಯಮಾಲ ಪುತ್ರಿ ಸೌಂದರ್ಯ ಚಿತ್ರರಂಗಕ್ಕೆ ಬರುತ್ತಾರೆ ಎಂದಾಗ ಚಂದನವನಕ್ಕೆ ಮತ್ತೊಂದು ಸ್ಟಾರ್ ಎಂಟ್ರಿ ಆಯಿತು ಎಂದುಕೊಂಡವರೇ ಹೆಚ್ಚು. ಅದಕ್ಕೆ ಕಾರಣ ಸೌಂದರ್ಯ ಹೆಸರಿನೊಂದಿಗೆ ಅಮ್ಮನ ಬ್ರಾಂಡ್ ಇದ್ದಿದ್ದು. ಇನ್ನು 'ಗಾಡ್‌ಫಾದರ್‌' ಚಿತ್ರಕ್ಕೆ ನಾಯಕಿಯಾಗುವ ಮೂಲಕ ಮೊದಲ ಚಿತ್ರದಲ್ಲೇ ಸ್ಟಾರ್ ನಟನ ಜೊತೆಗೆ ಹೆಜ್ಜೆ ಹಾಕುವ ಅವಕಾಶಕ್ಕೆ ಪಾತ್ರರಾಗಿದ್ದು. ಹೀಗಾಗಿ ಸೌಂದರ್ಯ ಗಾಂಧಿನಗರದಲ್ಲಿ ಜೋರಾಗಿಯೇ ಮಿಂಚುತ್ತಾಳೆ ಎನ್ನುವ ಅಂದಾಜು ಮಾಡಲಾಯಿತು. ಆದರೆ, 'ಗಾಡ್‌ಫಾದರ್‌' ನಂತರ ಸೌಂದರ್ಯಕ್ಕೆ ಮತ್ತೊಂದು ಚಿತ್ರ ಸಿಗಲಿಲ್ಲ.
 ಸ್ಟಾರ್ ನಟನ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರೂ ಯಾಕೋ ನಟಿ ಸೌಂದರ್ಯಳ ಕಡೆ ಗಾಂಧಿನಗರ ತಿರುಗಿ ನೋಡಲಿಲ್ಲ. ಅಂದಹಾಗೆ ಕನ್ನಡದಲ್ಲಿ 'ಗಾಡ್‌ಫಾದರ್‌' ಚಿತ್ರದ ನಂತರ ತೆಲುಗಿನಲ್ಲಿ 'ಮಿ.ಪ್ರೇಮಿಕುಡು' ಎನ್ನುವ ಚಿತ್ರಕ್ಕೆ ನಾಯಕಿಯಾದಳು ಸೌಂದರ್ಯ. ಆದರೆ, ಆ ಚಿತ್ರದ ನಾಯಕ ಯಶೋ ಸಾಗರ್ ರಸ್ತೆ ಅಪಘಾತದಲ್ಲಿ ತೀರಿಕೊಂಡ ಮೇಲೆ 'ಮಿ. ಪ್ರೇಮಿಕುಡು' ಅರ್ಧಕ್ಕೆ ನಿಂತುಕೊಂಡಿತು. ಸೌಂದರ್ಯ ಮತ್ತೆ ಬೆಂಗಳೂರಿಗೆ ವಾಪಸ್ಸು ಬಂದಳು. ನಟ ಯಶೋಸಾಗರ್ ಬೇರ್ಯೂರು ಅಲ್ಲ, ಈ ಹಿಂದೆ 'ಉಲ್ಲಾಸಂಗ ಉತ್ಸಾಹಂಗ' ಎನ್ನುವ ಚಿತ್ರದಲ್ಲಿ ನಾಯಕನಾಗಿದ್ದ ಕನ್ನಡದ ಹುಡುಗ.
ಸ್ಟಾರ್ ನಟಿಯ ಪುತ್ರಿಯಾದರೂ ಸೌಂದರ್ಯಳಿಗೆ ಹೆಚ್ಚು ಅವಕಾಶಗಳು ಬರುತ್ತಿಲ್ಲ ಯಾಕೆ? ಎನ್ನುವ ಪ್ರಶ್ನೆ ಸಹಜ. ಯಾಕೆಂದರೆ ಕನ್ನಡದ ಮಟ್ಟಿಗೆ ಸ್ಟಾರ್ ಮಕ್ಕಳು ಮೂಲೆ ಸೇರಿದ್ದು ಕಡಿಮೆ.
 ಹೀಗೆ ಕೆಲಸವಿಲ್ಲದೆ ಕೂತಿದ್ದ ನಟಿ ಸೌಂದರ್ಯಳನ್ನು ಕ್ಯಾಮೆರಾ ಮುಂದೆ ನಿಲ್ಲಿಸಿದ್ದು 'ಪಾರು w/oದೇವದಾಸ್‌' ಚಿತ್ರ. ಕಿರಣ್ ಗೋವಿ ನಿರ್ದೇಶನದ ಈ ಚಿತ್ರದ ನಾಯಕ ಶ್ರೀನಗರ ಕಿಟ್ಟಿ. ಇದೇ ಶುಕ್ರವಾರ (ಜೂ.27) ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ನಾಪತ್ತೆಯಾದಂತೆ ಕಂಡ ಸೌಂದರ್ಯ ಮತ್ತೆ ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾಳೆ. 'ನಿರ್ದೇಶಕ ಕಿರಣ್‌ಗೋವಿ 'ಪಾರು w/o ದೇವದಾಸ್‌' ಚಿತ್ರವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಹೀಗಾಗಿ ಈ ಚಿತ್ರ ನನಗೆ ಹೆಸರು ತಂದುಕೊಡುತ್ತದೆ' ಎನ್ನುತ್ತಾಳೆ ಸೌಂದರ್ಯ. ಒಟ್ಟಿನಲ್ಲಿ ನಾಪತ್ತೆಯಾಗಿದ್ದವಳು ಈಗ ಪತ್ತೆಯಾಗುತ್ತಿದ್ದಾಳೆ ಎನ್ನುವುದೇ ಸುದ್ದಿ.

-ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!