ಸಿನಿಮಾ ಲೇಖನ

ದೇವರ ಸಂಪತ್ತು

ಒಂದಷ್ಟು ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ ಮೇಲೆ ಯಾವ ಮುಲಾಜೂ ಇಲ್ಲದೆ ಸಿನಿಮಾ ನಿರ್ದೇಶಿಸಬಹುದು ಎನ್ನುವುದು ಗಾಂಧಿನಗರದ ಸಾಮಾನ್ಯ ನಿಯಮ. ಇದಕ್ಕೆ ಹೊಸ ಸೇರ್ಪಡೆ ರಾಜ್‌ಮಯೂರ್ ಹಿರೇಮಠ. ಹೆಸರಿನಲ್ಲಿರುವ 'ಹಿರೇಮಠ' ನೋಡಿ 'ಇವರು ಉತ್ತರ ಕರ್ನಾಟಕದ ತಳಿ' ಎಂದುಕೊಂಡರೆ  ನಿಮ್ಮ ಊಹೆ ಸರಿಯಾಗಿದೆ. ಬಿಜಾಪುರದಿಂದ ಸಿನಿಮಾ ಕನಸಿನೊಂದಿಗೆ ಬೆಂಗಳೂರಿಗೆ ಬಂದ ಹಿರೇಮಠ, 12 ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಗಳಿಸಿಕೊಂಡು ಈಗ ಸ್ವತಂತ್ರವಾಗಿ ಚಿತ್ರ ನಿರ್ದೇಶಿಸುತ್ತಿದ್ದಾರೆ. ಇವರ ನಿರ್ದೇಶನದಲ್ಲಿ ಶುರುವಾಗಿರುವ ಚಿತ್ರದ ಹೆಸರು 'ಮರೀಚಿಕೆ'. ನಾಲ್ಕೈದು ಮಂದಿ ಸೇರಿ ಹಣ ತೊಡಗಿಸಿರುವ ಇತ್ತೀಚೆಗೆ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು. ಬಂಡವಾಳ ಹೂಡಿರುವವ ಪೈಕಿ ನಾಯಕ ಸಂಜಯ್ ಹಾಗೂ ನಿರ್ದೇಶಕರೂ ಸೇರಿರುವುದು ವಿಶೇಷ. ಚಿತ್ರದ ನಾಯಕಿ ಮಾನಸ. 'ಮೊಗ್ಗಿನ ಮನಸು' ಚಿತ್ರದ ನಂತರ ಹೆಚ್ಚುಕಮ್ಮಿ ನಾಪತ್ತೆಯಾಗಿದ್ದ ಮಾನಸ ಈ ಚಿತ್ರದ ಮೂಲಕ ನಾ 'ಪತ್ತೆ' ಎನ್ನುತ್ತಿದ್ದಾರೆ.
ತಬಲಾ ನಾಣಿ, ತ್ರಿವೇಣಿ, ಲಕ್ಕಿಶಂಕರ್, ಮೋಹನ್, ಸಂತೋಷ್, ಅರ್ಚನಾ, ರಘು ಮುಂತಾದವರು ಚಿತ್ರದ ಮುಖ್ಯ ಪಾತ್ರಧಾರಿಗಳು. ಕೈಗೆ ಸಿಗದ ವಸ್ತುವಿನ ಹಿಂದೆ ಹೊರಡುವವರ ಕಥೆ ಇಲ್ಲಿದೆ. 'ಚಿತ್ರದ ಕೇಂದ್ರಬಿಂದು ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನದ ಸಂಪತ್ತು. ಇದರ ಹಿಂದೆ ಕಥೆ ಸಾಗುತ್ತದೆ. ಸೌತ್ ಇಂಡಿಯಾದಲ್ಲೇ ಪ್ರಯೋಗಾತ್ಮಕ ಸಿನಿಮಾ ಇದಾಗಲಿದೆ' ಎನ್ನುವುದು ಹಿರೇಮಠರ ಮಾತು. ಆದರೆ, ಯಾವ ದೇವಸ್ಥಾನ ಅಂತ ಮಾತ್ರ ನಿರ್ದೇಶಕರು ಬಿಟ್ಟುಕೊಡಲಿಲ್ಲ. ಇನ್ನು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರುವ ಮನೋಜ್ ಶ್ರೀಲಂಕಾದಿಂದ ಬಂದವರು. ಆದರೆ, ಶ್ರೀಲಂಕಾ ಬದಲಿಗೆ ಯಲಹಂಕ ಅಂತ ಕೇಳಿಸಿತು. 'ಇವರು ಮನೋಜ್ ಅಂತ. ಶ್ರೀಲಂಕಾದಿಂದ ಬಂದಿದ್ದಾರೆ. ಸಂಗೀತದ ಬಗ್ಗೆ ಒಳ್ಳೆಯ ತಿಳವಳಿಕೆ ಇದೆ' ಎಂದರು ನಿರ್ದೇಶಕರು.
ನಾಯಕಿ ಮಾನಸಳಿಗೆ ಕಥೆ ತುಂಬಾ ಇಷ್ಟವಾಗಿದೆ. ಹೊಸ ತಂಡವಾಗಿರುವ ಕಾರಣಕ್ಕೆ ಒಳ್ಳೆಯ ಚಿತ್ರ ಮಾಡುತ್ತಾರೆಂಬ ನಂಬಿಕೆಯಲ್ಲಿ ಚಿತ್ರದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಇಲ್ಲಿ ಜರ್ನಿ ಲವ್ ಎಪಿಸೋಡ್ ಕೂಡ ಇದೆಯಂತೆ.
ಚಿತ್ರದ ನಾಯಕ ಸಂಜಯ್, ಬೆಳಗಾವಿ ಮೂಲದವರು. ಇವರಿಗೆ ಮೊದಲ ಚಿತ್ರ. ಅಭಿನಯಕ್ಕೆ ಬೇಕಾದ ತರಬೇತಿಯನ್ನು ಪಡೆದುಕೊಂಡೇ ಚಿತ್ರರಂಗಕ್ಕೆ ಬಂದಿದ್ದಾರೆ. 'ಸಿನಿಮಾಗಳಲ್ಲಿ ನಟಿಸಬೇಕೆನ್ನುವುದು ನನ್ನ ಆಸೆ. ಹೀಗಾಗಿ ಅಭಿನಯಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ' ಎಂದರು ಸಂಜಯ್. ಚಿತ್ರಕ್ಕೆ ಸಂದೀಪ್ ಹಂಚಿನ್ ಛಾಯಾಗ್ರಾಹಣ ಮಾಡುತ್ತಿದ್ದಾರೆ. ಬೆಂಗಳೂರು, ಕೇರಳ, ತಮಿಳುನಾಡು, ಆಂಧ್ರ ಮುಂತಾದ ಕಡೆ ಚಿತ್ರೀಕರಣ ಮಾಡುವ ಯೋಜನೆ ನಿರ್ದೇಶಕರದ್ದು.

=  ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!