ಬಾರ್ಬಿ ಹಂಡಾ 
ಸಿನಿಮಾ ಲೇಖನ

ಬಾಲಿವುಡ್‌ಗೆ ಬಂದ ಬಾರ್ಬಿ ಬೊಂಬೆ

ಕಪೂರ್, ಖಾನ್, ಬಚ್ಚನ್ ಫ್ಯಾಮಿಲಿಗಳ ನಂತರ ಇದೀಗ ಛೋಪ್ರಾ ಫ್ಯಾಮಿಲಿ...

ಕಪೂರ್, ಖಾನ್, ಬಚ್ಚನ್ ಫ್ಯಾಮಿಲಿಗಳ ನಂತರ ಇದೀಗ ಛೋಪ್ರಾ ಫ್ಯಾಮಿಲಿ ಬಾಲಿವುಡ್‌ನಲ್ಲಿ ದೊಡ್ಡ ಮರವಾಗಿ ಹಬ್ಬುತ್ತಿದೆ. ಪ್ರಿಯಾಂಕಾ ಛೋಪ್ರಾ, ಪರಿಣೀತಿ ಛೋಪ್ರಾರ ಯಶಸ್ಸು ತಂಗಿಯರಾದ(ಕಸಿನ್ಸ್) ಮೀರಾ ಹಂಡ ಹಾಗೂ ಬಾರ್ಬಿ ಹಂಡಾ(ಮನ್ನಾರಾ)ರನ್ನೂ ಚಿತ್ರರಂಗಕ್ಕೆ ಎಳೆತಂದಿದೆ.

ಮೀರಾ ಈಗಾಗಲೇ ತಮಿಳು, ತೆಲುಗುಗಳಲ್ಲಿ ನಟಿಸಿ, ಗ್ಯಾಂಗ್ ಆಫ್ ಗೋಸ್ಟ್ಸ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾಳೆ. ಇನ್ನು ನಾನೇನು ಕಮ್ಮಿ ಎಂದು ಮೊನ್ನೆ ಮೊನ್ನೆ ತನ್ನ ಹೆಸರನ್ನು ಮನ್ನಾರಾ ಎಂದು ಬದಲಿಸಿಕೊಂಡ ಬಾರ್ಬಿ ಕೂಡಾ ಜಿದ್ ಚಿತ್ರದ ಮೂಲಕ ಬಾಲಿವುಡ್ ಬಸ್ಸನ್ನೇರಿದ್ದಾಳೆ.

ಬಾರ್ಬಿಯ ಹಾಟ್ ಎಂಡ್ ಬೋಲ್ಡ್‌ನೆಸ್ ಟ್ರೇಲರ್‌ನಲ್ಲೇ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಇದರ ಜೊತೆಗೆ ಪ್ರಿಯಾಂಕಾ ಕೂಡ ನಾನು ಚಿತ್ರರಂಗಕ್ಕೆ ಬಂದಾಗ ನನಗೆ ಸಹಾಯ ಮಾಡಲು ಯಾರೂ ಇರಲಿಲ್ಲ. ಆದರೆ ನನ್ನ ತಂಗಿಯರಿಗೆ ಆ ಅನಾಥಪ್ರಜ್ಞೆ ಕಾಡಲು ನಾನು ಬಿಡುವುದಿಲ್ಲ. ಅವರಿಗೆಲ್ಲ ರೀತಿಯಲ್ಲೂ ಸಪೋರ್ಟಿಂಗ್ ಆಗಿ ಇರುತ್ತೇನೆ ಎಂದಿರುವುದಲ್ಲದೆ ಬಾರ್ಬಿಯೊಂದಿಗಿನ ತನ್ನ ಫೋಟೋವನ್ನೂ ಟ್ವಿಟ್ಟರ್‌ಗೆ ಹಾಕಿದ್ದಾಳೆ. ಈ ಹಿಂದೆ ಬಾರ್ಬಿ ಪ್ರಿಯಾಂಕಾಳೊಂದಿಗೆ ಡಾಬರ್ ಆಮ್ಲ ಎಣ್ಣೆಯ ಜಾಹಿರಾತಿನಲ್ಲೂ ಕಾಣಿಸಿಕೊಂಡಿದ್ದರು.

ಬಾರ್ಬಿಯನ್ನು ಮಾತಿಗೆಳೆದಾಗ.....

ಚಿತ್ರರಂಗಕ್ಕೆ ಕಾಲಿಡಲು ಕಾರಣವೇನು? ಇದು ನಿಮ್ಮ ಬಾಲ್ಯದ ಕನಸೇ ಅಥವಾ ಅಕ್ಕಂದಿರ ಸಕ್ಸಸ್ ಇಲ್ಲಿಗೆ ಎಳೆತಂದಿತೇ?
ನಾನು ಫ್ಯಾಷನ್ ಡಿಸೈನಿಂಗ್ ಮಾಡಿದೆ. ಡ್ಯಾನ್ಸ್ ಕೂಡಾ ನನಗೆ ಪ್ರಾಣ. ನಂತರ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟೆ. ಈ ಎಲ್ಲ ಹಿನ್ನೆಲೆಗಳು ನನ್ನನ್ನು ಚಿತ್ರರಂಗಕ್ಕೆ ಕರೆತಂದವು.

ನಿಮ್ಮ ಕರಿಯಲ್ ಕಂಡುಕೊಳ್ಳುವಲ್ಲಿ ಪರಿಣೀತಿ ಛೋಪ್ರಾ ಮತ್ತು ಪ್ರಿಯಾಂಕ ಛೋಪ್ರಾರ ಪಾಲೆಷ್ಟಿದೆ?
ಮನೆಯಲ್ಲಿ ಯಾರೇ ಈ ರಂಗದಲ್ಲಿದ್ದರೂ ನಮ್ಮ ಹಾರ್ಡ್‌ವರ್ಕ್ ಮಾತ್ರ ನಮಗೆ ಅವಕಾಶಗಳನ್ನು ನೀಡಬಲ್ಲದು. ಆದರೆ ಅಕ್ಕಂದಿರ ಹೆಸರು ನನ್ನನ್ನು ನಾನು ಬೇಗ ಗುರುತಿಸಿಕೊಳ್ಳಲು ಸಹಾಯ ಮಾಡಿದೆ.

ಸೆಲೆಬ್ರಿಟಿ ಕಸಿನ್ ಸಿಸ್ಟರ್ಸ್‌ಗಳೊಂದಿಗೆ ನಿಮ್ಮ ಬಾಲ್ಯದ ನೆನಪುಗಳೇನಿವೆ?
ನಮ್ಮದು ತುಂಬಾ ದೊಡ್ಡ ಪಂಜಾಬಿ ಕುಟುಂಬ. ಪ್ರಿಯಾಂಕ, ಪರಿಣೀತಿ, ನಾನು, ಮೀರಾ ಎಲ್ಲರೂ ಎಂಬಾಲದಲ್ಲಿರುವ ಮನೆಯಲ್ಲಿ ಒಟ್ಟಿಗೇ ಆಡುತ್ತಿದ್ದೇವು. ಅಂದಿನಿಂದ ಇಂದಿನವರೆಗೂ ಆ ಬಾಂಧವ್ಯ ಹಾಗೇ ಉಳಿದು ಬೆಳೆದು ಬಂದಿದೆ.

ಬಾಲಿವುಡ್‌ನಲ್ಲಿ ಇನ್ನಿಂಗ್ಸ್ ಆರಂಭಿಸಿದ್ದೀರಿ. ಜಿದ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕಂಗ್ರಾಟ್ಸ್ ಇದರಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ...
ಥ್ಯಾಂಕ್ಯೂ. ಇದರಲ್ಲಿ ನನ್ನದು 18-19 ವಯಸ್ಸಿನ ಬಬ್ಲಿ ಹುಡುಗಿಯ ಪಾತ್ರ. ಆ ಹುಡುಗಿ ಮೂಡಿ ಕೂಡಾ. ತನ್ನ ಹುಡುಗನ ಬಗ್ಗೆ ವಿಪರೀತ ಪೊಸೆಸಿವ್, ಆಬ್ಸೆಸಿವ್ ಆಗಿ ಅವನಿಗಾಗಿ ಏನನ್ನೂ ಮಾಡಬಲ್ಲೆನೆಂಬಷ್ಟು ಪ್ರೀತಿ. ಇದು ಮ್ಯೂಸಿಕಲ್ ಮತ್ತು ಸೈಕಾಲಜಿಕಲ್ ಥ್ರಿಲ್ಲರ್ ಆಗಿದ್ದು, ಲವ್‌ಸ್ಟೋರಿಗಳನ್ನು ಇಷ್ಟಪಡುವವರಿಗೆ ಖಂಡಿತಾ ಇಷ್ಟವಾಗುತ್ತದೆ.

ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ನಿಮ್ಮ ಅನುಭವ ಹೇಗಿತ್ತು?
ತುಂಬಾ ಚೆನ್ನಾಗಿತ್ತು. 'ಪ್ರೇಮಾ ಗೀಮಾ ಜಾಂತಾ ನಯಿ' ನಾನು ಅಭಿನಯಿಸಿದ ತೆಲುಗು ಚಿತ್ರ ಮತ್ತು ನನ್ನ ಮೊದಲ ಚಿತ್ರ. ನನ್ನ ತುಂಬಾ ಚೆನ್ನಾಗಿ ನಡೆಸಿಕೊಂಡ್ರು. ಪ್ರೊಡ್ಯೂಸರ್, ನಿರ್ದೇಶಕರು ಎಲ್ಲರೂ ನನ್ನ ಹೆಚ್ಚು ಕಂಫರ್ಟ್‌ನಟ್ಟಿದ್ದರು.

ಇನ್ನೊಮ್ಮೆ ಸೌತ್ ಇಂಡಿಯನ್ ಚಿತ್ರಗಳಿಂದ ಆಫರ್ ಬಂದರೆ ಮಾಡ್ತೀರಾ?

ಭಾಷೆ ನಟನೆಗೆ ಎಂದಿಗೂ ಒಂದು ತಡೆಯಾಗಿರಬಾರದು. ಚಿತ್ರಕತೆ, ಪಾತ್ರ ಚೆನ್ನಾಗಿದ್ದರೆ ಖಂಡಿತ ಮತ್ತೆ ನಟಿಸ್ತೀನಿ.

ನಿಮ್ಮ ಕನಸಿನ ಪಾತ್ರ ಯಾವುದು?

ನನ್ನನ್ನು ಚಾಲೆಂಜ್‌ಗೆ ಒಡ್ಡುವಂತ, ನನ್ನನ್ನು ನಾನೇ ಕಂಡುಕೊಳ್ಳುವಂಥ ಎಲ್ಲ ಪಾತ್ರಗಳನ್ನೂ ಮಾಡುವಾಸೆ ಇದೆ. ನನ್ನಕ್ಕಂದಿರನ್ನು ಪ್ರೀತಿಯಿಂದ ಬರ ಮಾಡಿಕೊಂಡಂತೆಯೇ ಬಾಲಿವುಡ್ ನನಗೂ ಸ್ವಲ್ಪ ಜಾಗ ನೀಡಲಿ ಅಂತ ಕೇಳಿಕೊಳ್ಳುತ್ತೇನೆ.

ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಹೇಳಿ...
ಸದ್ಯ ಜಿದ್ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದೀನಿ. ಚಿತ್ರದ ಪ್ರಮೋಶನ್‌ಗಳಲ್ಲಿ ತೊಡಗಿಸಿಕೊಂಡಿದ್ದೀನಿ. ನಂತರವಷ್ಟೇ ಮುಂದಿನ ಯೋಚನೆ.



-ರೇಶ್ಮಾ ರಾವ್


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT