ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಅವರು ಇದೀಗ ಚಿತ್ರ ನಿರ್ಮಾಣದತ್ತ ಮುಖ ಮಾಡಿದ್ದಾರೆ ಎನ್ನುತ್ತಿದೆ ಮೂಲಗಳು!
ತಮ್ಮ ಕಂಠ ಸಿರಿಯ ಮೂಲಕ ಇತರ ನಾಯಕ ನಟರ ಚಿತ್ರಗಳಿಗೆ ಹಾಡಿದ್ದ ಪುನೀತ್, ಇದೀಗ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಅದು ಅವರು ಅಭಿನಯದ ಚಿತ್ರಗಳ ನಿರ್ಮಾಣದ ಬದಲು ಹೊಸ ಪ್ರತಿಭೆಗಳಿಗೆ ಉತ್ತಮ ಅವಕಾಶ ನೀಡಲು ಚಿಂತನೆ ನಡೆಸಿದ್ದಾರೆ. ಇದಕ್ಕಾಗಿ ಹೊಸದೊಂದು ನಿರ್ಮಾಣ ಸಂಸ್ಥೆಯನ್ನು ಪುನೀತ್ ಆರಂಭಿಸುತ್ತಿಲ್ಲ. ತಮ್ಮದೇ ಹೋಂ ಬ್ಯಾನರ್ ಆದ ವಜ್ರೇಶ್ವರಿ ಕಂಬೈನ್ಸ್‌ನ್ನೇ ಬಳಸಿಕೊಳ್ಳುತ್ತಿದ್ದಾರೆ.
ಇಲ್ಲಿಯವರೆಗೂ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಡಾ. ರಾಜ್ ಕುಟುಂಬದವರ ಚಿತ್ರಗಳನ್ನು ಮಾತ್ರ ನಿರ್ಮಿಸಲಾಗುತ್ತಿತ್ತು. ಆದರೆ ಹೊಸ ಪ್ರತಿಭೆಗಳೊಂದಿಗೆ ಕನ್ನಡ ಚಿತ್ರರಂಗದ ಇತರ ನಾಯಕರಿಗೂ ಪುನೀತ್ ನಟನೆಯ ಅವಕಾಶ ನೀಡಲಿದ್ದಾರೆ. ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ರಾಜ್ ಕುಟುಂಬದವರನ್ನು ಹೊರತು ಪಡಿಸಿ ಇನ್ನುಳಿದ ಯಾವ ನಾಯಕ ನಟನಿಗೆ ಅಭಿನಯಿಸುವ ಅವಕಾಶ ಸಿಗಲಿದೆಯೇ ಕಾದು ನೋಡಬೇಕಿದೆ. 2015ರಲ್ಲಿ ಹೊಸ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ.