ಬೆಂಗಳೂರು: ಸರಳ ಚಿತ್ರಕಥೆ ಹಾಗೂ ಸಂಭಾಷಣೆ ಮೂಲಕವೇ ಕನ್ನಡಿಗರ ಮನಸ್ಸು ಸೂರೆ ಮಾಡಿ, ಯಶಸ್ಸಿನ ತುತ್ತ ತುದಿ ಏರಿ ಅದಕ್ಕೆ ಜೋತು ಬೀಳದ ನಿರ್ದೇಶಕ ಯೋಗರಾಜ್ ಭಟ್‌ರ ಬಹು ನಿರೀಕ್ಷಿತ ಚಿತ್ರ 'ವಾಸ್ತು ಪ್ರಕಾರ' ಚಿತ್ರದ ಟೀಸರ್ ಬಿಡುಗಡೆಗೊಂಡಿದೆ.
ಪಡ್ಡೆ ಹುಡುಗರ ನಾಡಿಮಿಡಿತ ಬಲ್ಲ, ವ್ಯಂಗ್ಯ-ಹಾಸ್ಯ ರಸಗಳನ್ನು ಆಸ್ಪಾದಿಸಿ ಕರಗತ ಮಾಡಿಕೊಂಡಿರುವ ಯೋಗರಾಜ್ ಭಟ್ ಇದೇ ಮೊದಲ ಬಾರಿಗೆ ನವರಸ ನಾಯಕ ಜಗ್ಗೇಶ್ ಹಾಗೂ ನಟ ರಕ್ಷಿತ್ ಶೆಟ್ಟಿ ಅವರನ್ನು ಇಟ್ಟು ವಿಭಿನ್ನ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ವಾಸ್ತು ಪ್ರಕಾರ ಚಿತ್ರದ ಟೀಸರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಐದು ನಿಮಿಗಳ ಈ ಟೀಸರ್ ತುಂಬ ಲವಲವಿಕೆಯಿಂದ ಕೂಡಿದೆ.
ಇದೇ 12 ರಂದು ಚಿತ್ರತಂಡ ಆಡಿಯೋ ರಿಲೀಸ್ ಮಾಡಲಿದ್ದು. ಸದ್ಯಕ್ಕೆ ರಿಲೀಸ್ ಆಗಿರುವ ಟೀಸರ್ ನೋಡಿ ಎನ್ ಜಾಯ್ ಮಾಡಿ.