ಸುದೀಪ್ 
ಸಿನಿಮಾ ಸುದ್ದಿ

ಮತ್ತೆ ಬಿಗ್ ಬಿ ಮತ್ತು ಸುದೀಪ್ ಜೋಡಿ?

ಸದ್ಯಕ್ಕೆ ತಮ್ಮ ತ್ರಿಭಾಷಾ ಚಿತ್ರ 'ಹೆಬ್ಬುಲಿ' ನಟ ಸುದೀಪ್ ಒಪ್ಪಿಗೆ ನೀಡಿದ್ದು..

ಬೆಂಗಳೂರು: ಸದ್ಯಕ್ಕೆ ತಮ್ಮ ತ್ರಿಭಾಷಾ ಚಲನಚಿತ್ರ 'ಹೆಬ್ಬುಲಿ'ಗೆ ನಟ ಸುದೀಪ್ ಒಪ್ಪಿಗೆ ನೀಡಿದ್ದು ಉಳಿದ ತಾರಾಗಣಕ್ಕೆ ಮಾತುಕತೆ ನಡೆಸುತ್ತಿದ್ದೇನೆ ಎಂದು ನಿರ್ದೇಶಕ ಎಸ್ ಕೃಷ್ಣ ತಿಳಿಸಿದ್ದಾರೆ. ಕನ್ನಡ, ತಮಿಳು ಮತ್ತು ತೆಲಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ.

ಈಗಾಗಲೇ ವದಂತಿ ಹಬ್ಬಿರುವಂತೆ ಈ ಸಿನೆಮಾಗೆ ಅಮಿತಾಬ್ ಬಚ್ಚನ್ ಮತ್ತು ಅರ್ಜುನ್ ರಾಂಪಾಲ್ ಅವರು ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ಅಲ್ಲಗೆಳೆಯದ ಎಸ್ ಕೃಷ್ಣ, "ಅಮಿತಾಬ್-ಸುದೀಪ್ ಜೋಡಿಯನ್ನು ಮತ್ತೆ ಬೆಳ್ಳಿ ತೆರೆಯ ಮೇಲೆ ತರಬೇಕೆಂಬುದು ನನ್ನಿಷ್ಟ. ನನ್ನಿಬ್ಬರು ಗೆಳೆಯರ ಮೂಲಕ ಅಮಿತಾಬ್ ಬಚ್ಚನ್ ಅವರನ್ನು ತಲುಪಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇದಿನ್ನೂ ಅಧಿಕೃತವಲ್ಲ. ಅರ್ಜುನ್ ರಾಂಪಾಲ್ ಅವರನ್ನು ಕೂಡ ಇನ್ನೂ ಭೇಟಿ ಮಾಡಿಲ್ಲ" ಎಂದಿದ್ದಾರೆ ನಿರ್ದೇಶಕ ಕೃಷ್ಣ.

ಮೊದಲ ಹಂತದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯಲಿದ್ದು, ಮೂರೂ ಭಾಷೆಯ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ದಕ್ಷಿಣ ಭಾರತದ ನಟಿಯನ್ನು ಹುಡುಕುತ್ತಿದ್ದೇನೆ. ಹಾಗೆಯೇ ಕ್ಲೈಮ್ಯಾಕ್ಸ್ ಗಾಗಿ ಸ್ಥಳವನ್ನೂ ಹುಡುಕುತ್ತಿದ್ದೇನೆ ಎಂದಿದ್ದಾರೆ ಕೃಷ್ಣ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್‌ ಜೊತೆಗಿನ ಹಳೆಯ ನಂಟು ಸ್ಮರಿಸಿ, ‘ನಮ್ಮದು ನಿಜಕ್ಕೂ ಅದ್ಭುತ ಸ್ನೇಹ’ ಎಂದ ಟ್ರಂಪ್‌..!

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್