ಡಿಕೆ ಚಿತ್ರದಲ್ಲಿ ಪ್ರೇಮ್- ಸನ್ನಿ ಲಿಯೋನ್ 
ಸಿನಿಮಾ ಸುದ್ದಿ

ರಾಜಕೀಯದ ಸುತ್ತ 'ಡಿಕೆ' ಹಾಡು

ಆ ಹಾಡಿನ ಸಾಲುಗಳು ಹೀಗಿವೆ... ಸೋನಿಯ-ಮೋದಿ ಒಂದಾದ್ರಲ್ಲಪ್ಪೊ...

ನಿರ್ದೇಶಕ ಪ್ರೇಮ್ ಅವರಿಗೆ ಸಿಕ್ಕಾಪಟ್ಟೆ ಧೈರ್ಯ. ಅವರು ಇಂತಹ ಧೈರ್ಯ ಮಾಡುತ್ತಿರುವುದು ಇದೇ ಮೊದಲಲ್ಲವಾದರೂ ಈ ಬಾರಿ ಅವರು ನೇರವಾಗಿ ರಾಜಕಾರಣಿಗಳ ವಿಚಾರಕ್ಕೇ ಕೈಯಿಟ್ಟಿದ್ದಾರೆ!

ಹೌದು. ಈಗಷ್ಟೇ ಸಿದ್ದಗೊಳ್ಳುತ್ತಿರುವ `ಡಿಕೆ ಚಿತ್ರದಲ್ಲಿ ಸಂಪೂರ್ಣವಾಗಿ ರಾಜಕಾರಣಿಗಳ ಕುರಿತೇ ರಚಿಸಿರುವ ಹಾಡನ್ನು ಬಳಸಿಕೊಂಡಿದ್ದಾರೆ. ಆ ಹಾಡಿನ ಸಾಲುಗಳು ಹೀಗಿವೆ...
`ಇಂಡಿಯ ಪಾಕಿಸ್ತಾನ ಒಂದಾಗೋಯ್ತಲ್ಲಪ್ಪೊ.... ಸೋನಿಯ-ಮೋದಿ ಒಂದಾದ್ರಲ್ಲಪ್ಪೊ... ಕರುಣಾನಿಧಿ ಕಣ್ ಹೊಡೆದ್ರು ಜಯಲಲಿತಕ್ಕ ಒಳಗ್ ಹೊದ್ರಲ್ಲಪ್ಪ.... ಹೀಗೆ ಆರಂಭವಾಗುವ  ಹಾಡನ್ನು ಹೇಮಂತ್ ಕುಮಾರ್ ಅವರು ಹಾಡಿದ್ದಾರೆ. ಈ ಹಾಡನ್ನು ಚಿತ್ರದ ಸಂದರ್ಭಕ್ಕೆ ಸರಿಯಾಗಿ ಬಳಸಿಕೊಳ್ಳಲಾಗಿದೆ. ಈ ಹಿಂದೆ ಜೋಗಿ ಚಿತ್ರದಲ್ಲಿ ಬಿನ್ ಲಾಡೆನ್, ಲಾಲೂ ಮುಂತಾದವರನ್ನು ತಮ್ಮ ಹಾಡಿನಲ್ಲಿ ಬಳಸಿಕೊಂಡಿದ್ದ ಪ್ರೇಮ್ ಈ ಬಾರಿ ಮೋದಿಯಿಂದ ಹಿಡಿದು ಕರುಣಾನಿಧಿ ತನಕ ಅನೇಕರ ಹೆಸರನ್ನು ಪ್ರಸ್ತಾಪಿಸಿರೋದು ವಿಶೇಷ.
ಈ ಹಿಂದೆ ಉದಯ್ ಪ್ರಕಾಶ್ ಎಂದೇ ಖ್ಯಾತರಾಗಿದ್ದ ನಿರ್ದೇಶಕರು `ಡಿಕೆ ಚಿತ್ರದ ಮೂಲಕ ವಿಜಯ್ ಹಂಪಾಳಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಮಾತ್ರವಲ್ಲ, ನಿರ್ದೇಶನದ ಜೊತೆಗೆ ಚಿತ್ರದ ಚಿತ್ರಕಥೆ, ಸಂಭಾಷಣೆ ಎಲ್ಲ ಜವಾಬ್ದಾರಿಗಳನ್ನೂ ತಮ್ಮ ಹೆಗಲಿಗೇ ಏರಿಸಿಕೊಂಡಿದ್ದಾರೆ.

ಅಜರ್ುನ್ ಜನ್ಯ ಅವರು ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಸುದರ್ಶನ್ ಮೂರು ಹಾಡುಗಳನ್ನು ರಚಿಸಿದ್ದಾರೆ. ಆನಂದ್, ಮಾಸ್ ಮಾದ, ಶ್ರೀನಿವಾಸ್ ಪಿ ಬಾಬು, ನಾಗೇಶ್, ಪ್ರಭು, ಭದ್ರಿ, ಡ್ಯಾನಿ, ಬಾಬು, ಸೋಮು, ಮಂಜು, ರವಿ ತಾಂತ್ರಿಕ ವರ್ಗದಲ್ಲಿ ಹಾಗೂ ಸಹಾಯಕರಾಗಿ ಜೊತೆಯಾಗಿದ್ದಾರೆ.

'ಆಬ್ ಕಿ ಬಾರ್ ಮೇರೆ ಸಕರ್ಾರ್ ಅಡಿಬರಹ ಹೊಂದಿರುವ `ಡಿ ಕೆ ಚಿತ್ರವನ್ನು ಜೆ ಜೆ ಸಿನಿ ಪ್ರೊಡಕ್ಷನ್ ಸಂಸ್ಥೆಯ ಗ್ಲೆನ್ ಡಿಯಸ್ ಅವರು ಚಿತ್ರವನ್ನು ತೆರೆಗೆ ಅಪರ್ಿಸುತ್ತಿದ್ದಾರೆ. ಪ್ರೇಮ್ ಜೊತೆಗೆ ಚೈತ್ರ ನಾಯಕಿಯಾಗಿ ನಟಿಸುತ್ತಿದ್ದಾರೆ. ಶೋಭರಾಜ್, ಶರತ್ ಲೋಹಿತಾಶ್ವ, ಋಷಿಕುಮಾರ ಸ್ವಾಮೀಜಿ ಹಾಗೂ ಇತರರು ತಾರಾ ಬಳಗದಲ್ಲಿ ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!