ಮುಂಬೈ: ಮೈಕ್ರೋ ಬ್ಲಾಗಿಂಗ್ ಜಾಲ ಟ್ವಿಟ್ಟರ್ ನಲ್ಲಿ ಕಲರವ ಸೃಷ್ಟಿಸಿದ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಈಗ ಮತ್ತೊಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ಕಿನಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಟ್ವಿಟ್ಟರ್ ನಲ್ಲಿ ತನ್ನ ಅಭಿಮಾನಿಗಳಿಗೆ ಒಂದು ಸ್ಪರ್ಧೆ ಏರ್ಪಡಿಸಿರುವ ಅನುಷ್ಕಾ, ತನ್ನ ಫೇಸ್ ಬುಕ್ ಪುಟಕ್ಕೆ ಆಕರ್ಷಕ ಕವರ್ ಫೋಟೋ ವಿನ್ಯಾಸ ಮಾಡುವಂತೆ ತಿಳಿಸಿದ್ದಾಳೆ. ಬಹು ನಿರೀಕ್ಷಿತ 'ಪಿಕೆ' ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಅನುಷ್ಕಾ, ತನ್ನ ಅಭಿಮಾನಿಗಳು ಸಲ್ಲಿಸುವ ಕವರ್ ಫೋಟೊವೊಂದನ್ನು ಆಯ್ಕೆ ಮಾಡಿ ಇಂದು ಬುಧವಾರ ಫೇಸ್ ಬುಕ್ ಗೆ ಅಧಿಕೃತವಾಗಿ ಸೇರಲಿದ್ದಾಳೆ.
'ರಬ್ ದೇ ಬನಾದಿ ಜೋಡಿ' ಚಲಚಿತ್ರದಿಂದ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ನಟಿ, 'ಜಬ್ ತಕ್ ಹೈ ಜಾನ್' ಮತ್ತು 'ಮಟೃ ಕಿ ಬಿಜಲೀ ಕ ಮಂಡೋಲ' ಚಿತ್ರಗಳಲ್ಲೂ ನಟಿಸಿದ್ದಾಳೆ. ತನ್ನ ಅಭಿಮಾನಿಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುವ ಈ ಚೆಲುವೆ ಈಗ ಅಪಾರ ಬೇಡಿಕೆಯ ಮೇರೆಗೆ ಫೇಸ್ ಬುಕ್ ಗೆ ಪಾದಾರ್ಪಣೆ ಮಾಡುತ್ತಿದ್ದಾಳೆ.
ಫ್ಲೂಯೆನ್ಸ್ ಜೊತೆಗೂಡಿ ಟ್ವಿಟ್ಟರ್ ನಲ್ಲಿ ಕವರ್ ಫೋಟೊ ಗಳನ್ನು ಸಲ್ಲಿಸುವಂತೆ ತನ್ನ ಅಭಿಮಾನಿಗಳಿಗೆ ತಿಳಿಸಿದ್ದ ಅನುಷ್ಕಾ, ಈಗ ಫೋಟೋಗಳ ಮಹಾಪೂರವೇ ಹರಿದು ಬಂದಿದೆ ಎಂದಿದ್ದಾರೆ. ಅವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿ ನನ್ನ ಫೇಸ್ ಬುಕ್ ಪುಟದ ರಕ್ಷಾ ಫೋಟೋ ಮಾಡಿಕೊಳ್ಳಬೇಕೊ ತಿಳಿಯುತ್ತಿಲ್ಲ ಎಂದಿದ್ದಾರೆ.
"ಎಷ್ಟು ಸುಂದರ ಚಿತ್ರಗಳು. ನನ್ನ ಪುಟದ ರಕ್ಷಾ ಚಿತ್ರಕ್ಕೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಗೊನದಲವಾಗುತ್ತಿದೆ. ಆದರು ನೀವು ಕಳುಹಿಸುತ್ತಿರಿ. ನೀವು ಪ್ರತಿಭಾವಂತರು #AnushkaOnFB," ಎಂದು ಟ್ವೀಟ್ ಮಾಡಿದ್ದಾಳೆ.
ಈ ನಟಿಗೆ ಟ್ವಿಟ್ಟರ್ ನಲ್ಲಿ ೩.೬ ದಶಲಕ್ಷ ಹಿಂಬಾಲಕರಿದ್ದಾರೆ.