ಕುಮಾರಸ್ವಾಮಿ-ಶಮಿಕಾ - ರಾಧಿಕಾ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ನನ್ನ ಮಗಳಿಗೆ ನಟಿಯಾಗುವ ಎಲ್ಲ ಲಕ್ಷಣಗಳಿವೆ: ರಾಧಿಕಾ ಕುಮಾರಸ್ವಾಮಿ

ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿ...

ಬೆಂಗಳೂರು: ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ರಾಧಿಕಾ ಕುಮಾರಸ್ವಾಮಿ ಅವರಿಗೆ ಬಹಳ ಸಂತೋಷದ ದಿನ. ಒಂದೇ ಸಮಯಕ್ಕೆ ಎರಡು ಸಿನೆಮಾಗಳ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವ ರಾಧಿಕಾ ಅವರನ್ನು, ಎರಡೂ ಚಿತ್ರ ತಂಡ ಇಂದು ಚಿತ್ರೀಕರಣಕ್ಕೆ ಅರ್ಧರ್ಧ ದಿನದ ಸಮಯವನ್ನು ಕೇಳಿಕೊಂಡಿವೆ. ಆ ಎರಡು ಚಿತ್ರಗಳು 'ರುದ್ರತಾಂಡವ' ಮತ್ತು 'ನಿಮಗಾಗಿ'. ಎರಡೂ ಚಲನಚಿತ್ರದ ಇಂದಿನ ಚಿತ್ರೀಕರಣ ದೃಶ್ಯಾವಳಿಗಳಲ್ಲಿ, ರಾಧಿಕಾ ಹುಟ್ಟುಹಬ್ಬದ ದಿನ ಮಾಡುವ ಚಟುವಟಿಕೆಗಳೇ ಇರುವುದು ಅವರನ್ನು ಚಕಿತಗೊಳಿಸಿವೆ. "'ನಿಮಗಾಗಿ' ಚಲನಚಿತ್ರದಲ್ಲಿ ಅನಾಥೆಯ ಪಾತ್ರವನ್ನು ಮಾಡುತ್ತಿದ್ದೇನೆ ಮತ್ತು ಅನಾಥಾಶ್ರಮದಲ್ಲಿರುತ್ತೇನೆ. ಈ ದೃಶ್ಯಾವಳಿ ಇಂದು ಚಿತ್ರೀಕರಣಗೊಳ್ಳುತ್ತದೆ. 'ರುದ್ರತಾಂಡವ'ದಲ್ಲಿ ನನ್ನದು ಶಿಕ್ಷಕಿಯ ಪಾತ್ರ. ಅದರಲ್ಲಿನ ಒಂದು ದೃಶ್ಯಾವಳಿಲ್ಲಿ ಕುಷ್ಟ ರೋಗಿಗಳ ಜೊತೆ ಒಂದು ದಿನ ಸಮಯ ಕಳೆಯುವ ಸನ್ನಿವೇಶ. ಕಾಕತಾಳೀಯದಂತೆ ಪ್ರತಿವರ್ಷ ನಾನು ಅಂತಹ ಜಾಗಗಳಿಗೆ ಹೋಗಿ ನಿರ್ಗತಿಕರಿಗೆ ಅನ್ನದಾನ ಮಾಡುತ್ತೇನೆ. ಈ ಬಾರಿ ಒಂದೇ ವ್ಯತ್ಯಾಸ ಎಂದರೆ ಈ ಕೆಲಸವನ್ನು ತೆರೆಯ ಮೇಲೆ ಕೂಡ ಮಾಡುತ್ತಿದ್ದೇನೆ. ನಂತರ ನಾನು ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲಿದ್ದೇನೆ" ಎಂದಿದ್ದಾರೆ.

ನಂದ ಕಿಶೋರ್ ಸಿನೆಮಾದಲ್ಲಿ ನಟಿಸಲಿರುವ ಇನ್ನೂ ಹೆಸರಿಡಬೇಕಾದ ಚಿತ್ರಕ್ಕಾಗಿ ರಾಧಿಕಾ ಕುದುರೆ ಸವಾರಿ ಕಲಿಯುತ್ತಿದ್ದಾರೆ. ಸದ್ಯಕ್ಕೆ ಸುದೀಪ್ ಅವರ "ರನ್ನ" ಚಲನಚಿತ್ರ ನಿರ್ದೇಶನದಲ್ಲಿ ಕಾರ್ಯನಿರತರಾಗಿರುವ ನಂದ ಕಿಶೋರ್ 'ರನ್ನ'ನ ನಂತರ ರಾಧಿಕಾ ಕುಮಾರಸ್ವಾಮಿಯವರ ಚಿತ್ರ ನಿರ್ದೇಶಿಸಲಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಅವರ ಮಗಳು ೫ ವರ್ಷದ ಶಮಿಕಾ ಈಗಾಗಲೇ ನಟಿಯಾಗುವ ಎಲ್ಲ ಲಕ್ಷಣಗಳನ್ನೂ ತೋರಿಸುತ್ತಿರುವುದು ವಿಶೇಷ "ಅವಳು ಪ್ರತಿ ದಿನವೂ ಕನ್ನಡಿ ಮುಂದೆ ನಿಂತು ನಟಿಸುತ್ತಾಳೆ ಮತ್ತು ಕುದುರೆ ಸವಾರಿ ಕಲಿಕೆಗೆ ನನ್ನ ಜೊತೆ ಬರುತ್ತಾಳೆ. ಅವಳಿಗೆ ಶ್ಯಾಮಿಲಿ ಬಾಲನಟಿಯಾಗಿ ನಟಿಸಿರುವ ಎರಡು ಸಿನೆಮಾಗಳನ್ನು ತೋರಿಸಿದ್ದೇನೆ. ಅವಳ ಶಾಲಾ ಸಮಯವನ್ನು ಹಾಳುಮಾಡದೆ ಅವಳಿಗೆ ನಟಿಸುವ ಅವಕಾಶ ಸಿಕ್ಕರೆ ನಾನು ಅದಕ್ಕೆ ತೆರೆದ ಮನಸ್ಸಿನಿಂದ ಇದ್ದೇನೆ " ಎನ್ನುತ್ತಾರೆ ರಾಧಿಕಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

Encounter: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಹತ್ಯೆ!

SCROLL FOR NEXT