ಸಿನಿಮಾ ಸುದ್ದಿ

ನನಗೆ ನಿಶ್ಚಿತಾರ್ಥವಾಗಿಲ್ಲ: ತ್ರೀಶಾ

ನಿರ್ಮಾಪಕ, ಉದ್ಯಮಿ ವರುಣ್ ಮನಿಯನ್ ಅವರೊಡನೆ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕ್ರಿಷ್ಣನ್...

ಚೆನ್ನೈ: ನಿರ್ಮಾಪಕ, ಉದ್ಯಮಿ ವರುಣ್ ಮನಿಯನ್ ಅವರೊಡನೆ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ನಿಶ್ಚಿತಾರ್ಥವಾಗಿದ್ದು, ತ್ರಿಶಾ ಶೀಘ್ರದಲ್ಲೇ ಹಸೆಮಣೆ ಏರುವ ಸಿದ್ಧತೆಯಲ್ಲಿದ್ದಾರೆ ಎಂಬ ಗಾಳಿ ಮಾತಿಗೆ ತ್ರಿಶಾ ಗರಂ ಆಗಿದ್ದಾರೆ.

ಕನ್ನಡದಲ್ಲಿ ಬಿಡುಗಡೆಯಾದ 'ಪವರ್‌' ಚಿತ್ರದ ಯಶಸ್ಸಿನ ನಂತರ ಮತ್ತೆ ನಟನೆಯಲ್ಲಿ ಬ್ಯುಸಿಯಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ತ್ರೀಶಾ ಅವರಿಗೆ ನಿಶ್ಚಿತಾರ್ಥವಾಗಿದೆ ಎಂಬ ಗಾಳಿ ಮಾತನ್ನು ತ್ರಿಶಾ ತಳ್ಳಿ ಹಾಕಿದ್ದಾರೆ.

ನನಗೆ ನಿಶ್ಚಿತಾರ್ಥವಾಗಿಲ್ಲ. ಇದೊಂದು ವದಂತಿ ಎಂದು ಹೇಳುವ ಮೂಲಕ ಗಾಳಿ ಮಾತಿಗೆ ಎಳ್ಳುನೀರು ಬಿಟ್ಟಿದ್ದಾರೆ.

ತೆಲುಗು ಚಿತ್ರದಲ್ಲಿ ನಟ ಬಾಲಕೃಷ್ಣ ಅವರ ಜೋಡಿಯಾಗಿ ನಟಿಸುತ್ತಿರುವ ತ್ರೀಶಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಚಿತ್ರರಂಗದಲ್ಲಿ ತ್ರಿಶಾಗೆ ನಿಶ್ಚಿತಾರ್ಥವಾಗಿದೆ ಎಂಬ ಗಾಳಿ ಮಾತು ಹಬ್ಬಿದೆ. ನಿನ್ನೆಯಷ್ಟೇ ಟ್ವಿಟರ್‌ನಲ್ಲಿ ತ್ರಿಶಾ ಮತ್ತು ಉದ್ಯಮಿ ವರಣ್ ಮನಿಯನ್ ಜೊತೆ ನಿಶ್ಚಿತಾರ್ಥವಾಗಿದೆ ಎಂದು ಟ್ವೀಟ್ ಮಾಡಲಾಗಿತ್ತು.

ಇದಕ್ಕೆ ಗರಂ ಆಗಿರುವ ತ್ರಿಶಾ ನನಗೆ ನಿಶ್ಚಿತಾರ್ಥವಾಗಿಲ್ಲ. ಇದೆಲ್ಲಾ ಗಾಳಿ ಮಾತು ಎಂದು ಸ್ಪಷ್ಟನೆ ನೀಡಿದ್ದಾರೆ.

ತೆಲುಗು ನಟ ರಾಣಾ ಮತ್ತು ತ್ರಿಶಾ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ ಎಂದು ಇಡೀ ಟಾಲಿವುಡ್‌ಗೆ ಗೊತ್ತಿತ್ತು. ಇತ್ತೀಚೆಗಷ್ಟೇ ಇವರಿಬ್ಬರ ನಡುವೆ ನಟಿ ರಾಗಿಣಿ ಎಂಟ್ರಿಕೊಟ್ಟಿದ್ದಾರೆ ಎಂಬ ವಿಷಯ ಹಬ್ಬುತ್ತಿದ್ದಂತೆ, ಇತ್ತ ತ್ರಿಶಾಗೆ ನಿಶ್ಚಿತಾರ್ಥವಾಗಿದೆ ಎಂಬ ವದಂತಿ ಹರಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತ್ರಿಶಾ ವಿರುದ್ಧ ಡಬಲ್ ಮೀನಿಂಗ್ ಹೇಳಿಕೆ: ವಿಚಾರಣೆ ಬಳಿಕ ಠಾಣೆಯಿಂದ ಉದಯನಿಧಿ ಬಿಡುಗಡೆ, ಅಭಿಮಾನಿಗಳಿಂದ ಸಂಭ್ರಮ!

585.72 ಕೋಟಿ ರೂ. ಬೆಳೆ ವಿಮೆ ಪರಿಹಾರ ವಿತರಣೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಗಜಿನಿ, ಲಗಾನ್ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಖಳನಾಯಕ ಪ್ರದೀಪ್ ರಾವತ್‌ ನಿಧನ

ಅಶ್ಲೀಲ ಜೋಕ್‌ಗಳು ಸ್ವೀಕಾರಾರ್ಹವಲ್ಲ; ಉದಯನಿಧಿ ವಿರುದ್ಧದ ಪೊಲೀಸರ ಕ್ರಮ ಸರಿಯಾಗಿದೆ: ನಟಿ ಕಂಗನಾ ರಣಾವತ್

ದ್ವೇಷ ಭಾಷಣ: ಪಿಎಫ್‌ಐ ನಾಯಕನಿಗೆ ಆರು ತಿಂಗಳು ಜೈಲು ಶಿಕ್ಷೆ