ಸಿನಿಮಾ ಸುದ್ದಿ

ಮುಸ್ಸಂಜೆಯಲ್ಲಿ ಲಾಂಗ್ ಸ್ಟೋರಿ

ಪ್ರತಿ ತಾಯಿ ತನ್ನ ಮಗ ಬೆಳ್ಳಿಯಂತೆ ಬೆಳೆಯಲಿ ಅಂತ ಆಸೆ ಪಡುತ್ತಾಳೆ. ಚಿತ್ರದಲ್ಲೂ ನಾಯಕನ ತಾಯಿಗೆ ತನ್ನ ಮಗ ಬೆಳ್ಳಿಯಂತೆ..

ಒಬ್ಬ ಮನುಷ್ಯ ತನ್ನ ಶೈನಿಂಗ್ ಕಳೆದುಕೊಂಡಾಗ, ಅವನನ್ನೇ ಅವನು ಅಳತೆ ಮಾಡಿಕೊಂಡಾಗ, ಬದುಕು ರಿಯಾಲಿಟಿಗೆ ಇಳಿದರೆ ಹೇಗಿರುತ್ತದೆ ಎಂಬುದನ್ನು ಈ ಪಾತ್ರದಲ್ಲಿ ತೋರಿಸಲಾಗಿದೆ. ನೀವು ಆ ಮುಖವನ್ನು ತೆರೆ ಮೇಲೆ ನೋಡಿದಾಗಲೇ ಅದರ ಮಹತ್ವ ತಿಳಿಯುವುದು...

ಹಾವಿನ ದ್ವೇಷ 12 ವರ್ಷ ಆದರೆ, ಹಣೆ ಬರಹ ರೀರೈಟ್ ಮಾಡೋ ಕಾಂಟ್ರಾಕ್ಟ್ ಈ ಬೆಳ್ಳಿ ಹತ್ರಾ ಇದೆ...
ಯಾಕೋ ನಿನ್ನೆ ಕೊಟ್ಟಿದ್ ಮಾಂಜಾ ಸಾಕಾಗಿಲ್ವಾ?
ಕೊಟ್ಟಿದ್ದನ್ನು ಇಟ್ಕೋಬೇಡ, ವಾಪಸ್ಸು ಕೊಟ್ ಬಿಡು ಅಂತೇಳಿ ನಮ್ಮವ್ವ ಕಲಿಸಿದ್ದು...
ಫಸ್ಟ್ ಟೈಮ್ ಈ ಬೆಳ್ಳಿ ಬದುಕೋಕೆ ಬಿಡ್ತಾನೆ. ಬಿಟ್ಟವನು ಬೆನ್ನಿಗ್ ಗೂಟ ಇಡೋಕ್ ಬಂದ್ರೆ, ಬಿಲ ತೊಡ್ತಾನೆ...


ಮಚ್ಚು, ಲಾಂಗಿಗಿಂತ ಪವರ್‌ಫುಲ್ ಡೈಲಾಗ್‌ಗಳು. ಗುಂಡಿಗಿಂತ ಶಾರ್ಪ್ ಆದ ನೋಟ, ಏಟಿಗಿಂತ ಮಾತೇ ಜೋರು ಮತ್ತು ಅಬ್ಬರ. ವಿಲನ್‌ಗಳ ಖದರು, ನಾಯಕನ ಸವಾಲು, ಅದ್ದೂರಿ ಮೇಕಿಂಗ್, ಮೈನವಿರೇಳಿಸುವ ಸಾಹಸಗಳು, ನಾಯಕನ ಅಕ್ಕ-ಪಕ್ಕ ನಿಂತ ಕಿರಿ ಹೀರೋಗಳು, ಒಂದು ಮಾಸ್ ಮತ್ತು ಕಮರ್ಷಿಯಲ್ ಚಿತ್ರಕ್ಕೆ ಇದಕ್ಕಿಂತ ಇನ್ನೇನು ಬೇಕು? ಹೀಗಾಗಿ ಈ ಶುಕ್ರವಾರ, 'ಶಿವ'ನ ವಾರ. ಹೌದು, ಇಲ್ಲಿ ಹೇಳುತ್ತಿರುವ ನಟ ಶಿವರಾಜ್‌ಕುಮಾರ್ ಅಭಿನಯದ 'ಬೆಳ್ಳಿ' ಚಿತ್ರದ ಕುರಿತು. ಈ ವಾರ ಪ್ರೇಕ್ಷಕರ ಮುಂದೆ ಬರುತ್ತಿದೆ. ಮುಸ್ಸಂಜೆ ಮಹೇಶ್ ನಿರ್ದೇಶಿಸಿ, ಹೆಚ್.ಆರ್.ರಾಜೇಶ್ ನಿರ್ಮಾಣ ಮಾಡಿರುವ ಈ ಚಿತ್ರ ಈಗಾಗಲೇ ತನ್ನ ಟ್ರೈಲರ್‌ಗಳಿಂದಲೇ ಶಿವಣ್ಣರ ಅಭಿಮಾನಿಗಳ ಗಮನ ಸೆಳೆದಿದೆ. ಒಂದೇ ಕೈಯಲ್ಲಿ ನಾಲ್ಕೈದು ಮಚ್ಚುಗಳು, ವಿಚಿತ್ರವಾಗಿರುವ ನಟ ಶಿವರಾಜ್‌ಕುಮಾರ್ ಅವರ ಬೋಳು ತಲೆ, ಮೆಲೋಡಿ ಚಿತ್ರಗಳ ಸೂತ್ರಧಾರನ ಚಿತ್ರದಲ್ಲಿ ಮಚ್ಚುಗಳದ್ದೇ ಅಬ್ಬರ ಎನಿಸುವಷ್ಟರ ಮಟ್ಟಿಗೆ 'ಲಾಂಗ್‌' ಸ್ಟೋರಿ.

ಹಾಗಾದರೆ 'ಓಂ' ಹಾಗೂ 'ಜೋಗಿ' ಚಿತ್ರಗಳನ್ನೂ ಮೀರಿಸುವ ಭೂಗತ ಜಗತ್ತು ಇಲ್ಲಿದೆಯೇ? ಮುಸ್ಸಂಜೆ ಮಹೇಶ್ ತುಂಬಾ ವರ್ಷಗಳ ನಂತರ ಆಕ್ಷನ್ ಕಟ್ ಹೇಳಿರುವುದರಿಂದ ಈ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲ, ಅಳಕು ಮಹೇಶ್ ಅವರಿಗೂ ಇದೆ. ಇನ್ನೂ ಒಬ್ಬ ಮೆಲೋಡಿ ನಿರ್ದೇಶಕ, ಶಿವಣ್ಣರ ಕೈಗೆ ಕೊಟ್ಟಿರುವ ಮಚ್ಚುಗಳತ್ತ ಪ್ರೇಕ್ಷಕ ಕೂಡ ಅಚ್ಚರಿ ನೋಟ ಬೀರಿದ್ದಾನೆ. ಇದರ ನಡುವೆ ಶ್ರೀಧರ್ ವಿ.ಸಂಭ್ರಮ್ ಅವರ ಸಂಗೀತ ಹಾಗೂ ವಿ.ನಾಗೇಂದ್ರ ಪ್ರಸಾದ್, ಕವಿರಾಜ್‌ರ ಸಾಹಿತ್ಯ ಇದೆ. ಕೃತಿ ಕರಬಂಧ ಎಂಬ ಬೆಳ್ಳಗಿನ ಬಳ್ಳಿಯಂತ ಹುಡುಗಿ ಇಲ್ಲಿ ನಾಯಕಿ. ಶಿಷ್ಯ ದೀಪಕ್, ಸರ್ಕಲ್ ರೌಡಿ ವಿನೋದ್ ಪ್ರಭಾಕರ್, ಒರಟ ಪ್ರಶಾಂತ್, ವೆಂಕಟೇಶ್ ಪ್ರಸಾದ್, ಲೋಕಿ 'ಶಿವ'ನ ಗ್ಯಾಂಗ್ 'ಸ್ಟಾರ್‌'ಗಳು. ಈ ಎಲ್ಲ ಕಾರಣಗಳಿಗಾಗಿ 'ಬೆಳ್ಳಿ' ಕುರಿತು ಬಂಗಾರದ ಮಾತುಗಳು ಕೇಳಿ ಬರುತ್ತಿವೆ. ಆದರೆ, ತಮ್ಮ 'ಬೆಳ್ಳಿ' ಯಾತ್ರೆ ಬಗ್ಗೆ ಸ್ವತಃ ನಟ ಶಿವರಾಜ್‌ಕುಮಾರ್ ಏನು ಹೇಳಿದ್ದಾರೆ.

ಬೆಳ್ಳಿ ಪ್ರೇಕ್ಷಕನ ಮುಂದೆ ಬರಲು ಕೆಲವೇ ಕ್ಷಣಗಳು ಬಾಕಿ. ಆದರೆ, ಚಿತ್ರದ ಟ್ರೈಲರ್ ನೋಡಿದಾಗ ಲಾಂಗ್‌ಗಿಂತ ಡೈಲಾಗ್‌ಗಲು ಸದ್ದು ಮಾಡಿವೆಯಲ್ಲ?
ಹೌದು ತುಂಬಾ ದಿನ ಆಯಿತು ಈ ರೀತಿಯ ಡೈಲಾಗ್‌ಗಳು ಬಂದು. ನನ್ನ ಬಹುತೇಕ ಮಾಸ್ ಸಿನಿಮಾಗಳಲ್ಲಿ ಸೈಲೆನ್ಸ್ ಇರುತ್ತದೆ. ಆದರೆ, ನಿರ್ದೇಶಕ ಮಹೇಶ್ ಅವರು ಕಥೆ ಹೇಳಿದಾಗ, 'ನೀವು ಮಾತನಾಡಿ ಬಹಳ ವರ್ಷ ಆಯಿತು. ಇಲ್ಲಿ ಒಂಚೂರು ಡೈಲಾಗ್‌ಗಳನ್ನು ಶಾರ್ಪ್ ಮಾಡೋಣ' ಅಂದ್ರು. ಆಯಿತು ಅಂದೆ. ಹಾಗಂತ ಚಿತ್ರದ ತುಂಬಾ ಮಾತುಗಳೇ ಇದ್ದರೆ ಜನಕ್ಕೆ ಬೋರ್ ಹೊಡೆಸುತ್ತದೆ. ನಾಲ್ಕೈದು ಕಡೆ ಇಂಥ ಪವರ್‌ಫುಲ್ ಡೈಲಾಗ್‌ಗಳಿವೆ. ಅದರಲ್ಲೂ ಮನುಷ್ಯ ತನ್ನ ರಿಯಲ್ ಲೈಫ್‌ಗೆ ಮರಳಿದಾಗ ಮೂಡುವ ಮಾತುಗಳು ನಿಜಕ್ಕೂ ಚೆನ್ನಾಗಿವೆ. ಆದರೆ, ಎಲ್ಲೂ ಓವರ್ ಆಗಿಲ್ಲ. ಫ್ರೆಂಟ್ ಸೀಟ್ ಪ್ರೇಕ್ಷಕರು ತುಂಬಾ ಎಂಜಾಯ್ ಮಾಡ್ತಾರೆ.

ಚಿತ್ರಕ್ಕೆ ಬೆಳ್ಳಿ ಅನ್ನೋ ಹೆಸರು ಹೇಗೆ ಮತ್ತು ಯಾಕೆ ಸೂಕ್ತ?
ಇಲ್ಲಿ ಬೆಳ್ಳಿ ಅನ್ನುವುದು ಒಬ್ಬನ ಹೆಸರು. ಹುಟ್ಟುವ ಪ್ರತಿ ಮಗುವಿನ ತಾಯಿಗೂ ತನ್ನ ಮಗ ಬೆಳ್ಳಿಯಂತೆ ಬೆಳೆಯಲಿ ಅಂತ ಆಸೆ ಪಡುತ್ತಾಳೆ. ಚಿತ್ರದಲ್ಲೂ ನಾಯಕನ ತಾಯಿಗೆ ತನ್ನ ಮಗ ಬೆಳ್ಳಿಯಂತೆ ಶೈನ್ ಆಗಬೇಕು ಎನ್ನುವ ಕನಸು ಕಾಣುತ್ತಾಳೆ. ಹೀಗಾಗಿ ತಾಯಿ ಆತನನ್ನು ಬೆಳ್ಳಿ ಅಂತಲೇ ಕರೆಯುತ್ತಾಳೆ. ಅದು ನಿಜವಾದ ಹೆಸರಲ್ಲ. ಅಡ್ಡ ಹೆಸರು. ಹೀಗಾಗಿ ಅಮ್ಮನ ಆಸೆಯೇ ಇಲ್ಲಿ ಟೈಟಲ್ ಆಗಿದೆ. ಕಥೆ ಕೂಡ ಆ ಬೆಳ್ಳಿ ಸುತ್ತಲೇ ಇದೆ.

ನಿಜಕ್ಕೂ 'ಬೆಳ್ಳಿ' ಯಾರು? ಕಥೆಯೋ?, ನಿರ್ದೇಶಕನೋ, ನಾಯಕನೋ?
ಹ್ಹಹ್ಹಹ್ಹ... ಸಿನಿಮಾ ನೋಡಿ ನೀವೇ ಹೇಳಬೇಕು. ನಾನು ಒಬ್ಬ ಕಲಾವಿದನಾಗಿ ಇಲ್ಲಿ ಕೆಲಸ ಮಾಡಿದ್ದೇನೆ. ಉಳಿದಿದ್ದು ನಿಮಗೆ ಬಿಟ್ಟಿದ್ದು. ನಿಮ್ಮ ಹಾಗೆ ನಾನೂ ಕೂಡ ಪ್ರೇಕ್ಷಕನಾಗಿ ಸಿನಿಮಾ ನೋಡುತ್ತೇನೆ.

- ಆರ್.ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

KPSC ನೇಮಕಾತಿ ಹಗರಣ: DGP ಅಲೋಕ್ ಕುಮಾರ್ ಸೇರಿ SIT ತಂಡದಿಂದ ಇಬ್ಬರು ಔಟ್; ಸುಪ್ರೀಂಕೋರ್ಟ್ ಮಹತ್ವದ ಸೂಚನೆ!

ಮಾಜಿ ಸಿಇಸಿಗಳಿಗೆ ರಾಜ್ಯಪಾಲ, ಸಚಿವ ಸ್ಥಾನದ ಗಿಫ್ಟ್: ಕಾಂಗ್ರೆಸ್ ವಿರುದ್ಧ ಹಳೆಯ ಬಹುಮಾನಗಳ ಪಟ್ಟಿ ಬಿಚ್ಚಿಟ್ಟ ಬಿಜೆಪಿ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್