ಮುಂಬೈ: ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಬಾಲಿವುಡ್ ನಟ ಮನೋಜ್ ಬಾಜ್ಪಾಯಿ ತಮ್ಮ ಮತ್ತು ಟಬು ಅವರ ನಟನೆಯ ಚಲನಚಿತ್ರದ ನಿರ್ಮಾಪಕರಾಗಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ಮನೋಜ್ ಬಾಜ್ಪಾಯಿ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣಗೊಳ್ಳಲಿದೆ.
ಈ ಥ್ರಿಲ್ಲರ್ ಸಿನೆಮಾವನ್ನು ಮುಕುಲ್ ಅಭಯಂಕರ್ ನಿರ್ದೇಶಿಸಲಿದ್ದು, ಅವರಿಗೂ ಇದು ಚೊಚ್ಚಲ ನಿರ್ದೇಶನದ ಚಲನಚಿತ್ರ.
ಮೊದಲ ಬಾರಿಗೆ ಚಲನಚಿತ್ರ ನಿರ್ಮಾಣಕ್ಕೆ ಕಾಲಿಟ್ಟಿರುವ ಮನೋಜ್ "೨೦ ವರ್ಷಗಳಿಂದ ನಟಿಸುತ್ತಿರುವ ನನಗೆ ಚಲನಚಿತ್ರ ನಿರ್ಮಾಣ ಸ್ವಾಭಾವಿಕ ಶ್ರೇಣಿ ಎಂದು ತಿಳಿಯುತ್ತೇನೆ. ಇದು ಥ್ರಿಲ್ಲರ್ ಸಿನೆಮಾ ಆಗಿರುವುದರಿಂದ ಸಿನೆಮಾದ ಬಗ್ಗೆ ಹೆಚ್ಚೇನೂ ಹೇಳಲು ಆಗುವುದಿಲ್ಲ ಏಕೆಂದರೆ ಅದು ಕಥೆಯ ಎಳೆಯನ್ನು ಬಿಟ್ಟುಕೊಡುತ್ತದೆ - ನೀವು ಕಾದು ಸಿನೆಮಾ ನೋಡಬೇಕು" ಎಂದಿದ್ದಾರೆ.