ವರುಣ್ ಮಣಿಯನ್-ತ್ರಿಶಾ 
ಸಿನಿಮಾ ಸುದ್ದಿ

ತ್ರಿಶಾ-ವರುಣ್ ನಡುವೆ ಹಳಸಿದ ಸಂಬಂಧ: ಮುರಿದು ಬಿದ್ದ ನಿಶ್ಚಿತಾರ್ಥ?

ಕಳೆದ ಜನವರಿಯಲ್ಲಿ ಉದ್ಯಮಿ ವರುಣ್ ಮಣಿಯನ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಬಹು ಭಾಷಾ ನಟಿ ತ್ರಿಶಾ ಅವರ ನಡುವಿನ ಸಂಬಂಧ ಹಳಸಿದ್ದು...

ಕಳೆದ ಜನವರಿಯಲ್ಲಿ ಉದ್ಯಮಿ ವರುಣ್ ಮಣಿಯನ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಬಹು ಭಾಷಾ ನಟಿ ತ್ರಿಶಾ ಅವರ ನಡುವಿನ ಸಂಬಂಧ ಹಳಸಿದ್ದು, ಪರಿಣಾಮ ವಿವಾಹ ಸಂಬಂಧ ಮುರಿದು ಬಿಳಲಿದೆ ಎನ್ನಲಾಗಿದೆ.

ಜನವರಿ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಇದೇ ವರ್ಷದ ಕೊನೆಯಲ್ಲಿ ಸಪ್ತಪದಿ ತುಳಿಯುವುದಾಗಿ ತಿಳಿಸಿದ್ದರು.

ಉದ್ಯಮಿ ವರುಣ್ ಮಣಿಯನ್ ತಮ್ಮ ಭಾವಿ ಪತ್ನಿಗಾಗಿ ಸಿನಿಮಾವೊಂದರ ನಿರ್ಮಾಣಕ್ಕೆ ಮುಂದಾಗಿದ್ದು, ಇದು ತಮ್ಮ ಪತ್ನಿಗೆ ನೀಡುತ್ತಿರುವ ಉಡುಗೊರೆ ಎಂದಿದ್ದರು. ಆದರೆ ಇದೀಗ ಇವರಿಬ್ಬರ ನಡುವಿನ ಸಂಬಂಧ ಬಿರುಕು ಬಿಟ್ಟಿದೆ ಎನ್ನಲಾಗಿದ್ದು ಕಳೆದ ಒಂದು ತಿಂಗಳಿನಿಂದ ಇವರ ಮದುವೆ ಬಗ್ಗೆಯಾಗಲಿ ಯಾವುದೇ ಟ್ವೀಟ್ ಮಾಡಿಕೊಂಡಿಲ್ಲ.

ವರುಣ್ ನಿರ್ಮಾಣದಲ್ಲಿ ಮೂಡಿಬರಲಿದ್ದ ಸಿನಿಮಾದಿಂದ ತ್ರಿಶಾ ಸಹ ಹೊರಬಂದಿದ್ದು, ತನಗೆ ಡೇಟ್ಸ್ ಸಮಸ್ಯೆಯಾಗಿದೆ ಎನ್ನುವ ಮೂಲಕ ಭಿನ್ನ ರಾಗ ಹಾಡಿದ್ದಾರೆ. ಆದರೆ ಈ ಜೋಡಿಯಾಗಲೀ ಅಥವಾ ಅವರ ಕುಟುಂಬ ವರ್ಗದವರಾಗಲೀ ಯಾರೂ ಸಹ ಈ ಬಗೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ವೈಮಾನಿಕ ದಾಳಿಗೆ ತತ್ತರಿಸಿದ ಲೆಬನಾನ್: 16 ಮಂದಿ ಬಲಿ; ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

ಏರ್ ಫೋರ್ಸ್ ಒನ್'ಗೆ ಟ್ರಂಪ್ ಗುಡ್ ಬೈ; ಇನ್ನುಮುಂದೆ ಕತಾರ್ ಗಿಫ್ಟ್ ನೀಡಿದ ವಿಮಾನದಲ್ಲೇ ಅಮೆರಿಕ ಅಧ್ಯಕ್ಷರ ಪ್ರಯಾಣ!

NEET ಭದ್ರತೆಗೆ ಆದ್ಯತೆ; ದೇಶಾದ್ಯಂತ Telegram app ತಾತ್ಕಾಲಿಕ ನಿಷೇಧ, ಕೇಂದ್ರದ ಆದೇಶ ಎತ್ತಿಹಿಡಿದ Delhi ಹೈಕೋರ್ಟ್..!

ಚಿಕ್ಕಮಗಳೂರು: ನಡು ರಸ್ತೆಯಲ್ಲಿ ಲಾಂಗ್​ನಿಂದ ಕೇಕ್‌ ಕತ್ತರಿಸಿ ಬರ್ತಡೇ ಸೆಲೆಬ್ರೇಷನ್‌; ಪುಡಾರಿ ವಿರುದ್ಧ FIR

NEET UG 2026ಗೆ ಮತ್ತೊಂದು ಬಲಿ; ಮರು ಪರೀಕ್ಷೆಗೂ ಮುನ್ನ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ