ಮುಂಬೈ: ನಟಿ ದೀಪಿಕ ಪಡುಕೋಣೆ ಹೆಚ್ಚೆಚ್ಚು ಗ್ಲಾಮರಸ್ ಪಾತ್ರಗಳನ್ನು ಮಾಡಬಹುದಾದರೂ, ಹಲವಾರು ಪ್ರಯೋಗಾತ್ಮಕ ಪಾತ್ರಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಅವರ ಧೈರ್ಯವನ್ನು 'ಪೀಕು' ಚಲನಚಿತ್ರದ ಸಹನಟ ಇರ್ಫಾನ್ ಖಾನ್ ಪ್ರಶಂಸಿಸಿದ್ದಾರೆ.
"ದೀಪಿಕಾ ಅವರಿಗೆ ವಿವಿಧ ಪಾತ್ರಗಳಲ್ಲಿ ನಟಿಸುವಾಸೆ ಮತ್ತು ನಟಿಯಾಗಿ ತಮ್ಮನ್ನು ವಿಸ್ತರಿಸಿಕೊಳ್ಳಲು ಅವರಿಗೆ ಇಷ್ಟ.... ಇದು ಬಹಳ ಆಸಕ್ತಿದಾಯಕ. ಉದ್ಯಮದಲ್ಲಿ ಅವರು ನಂಬರ್ ೧ ಸ್ಥಾನದಲ್ಲಿದ್ದರೆ ಮತ್ತು ಚಿತ್ರೋದ್ಯಮದಲ್ಲಿ ತಮ್ಮ ಸ್ಥಾನ ಕಾಯ್ದುಕೊಳ್ಳಲು ಅವರು ಗ್ಲಾಮರಸ್ ಪಾತ್ರಗಳನ್ನು ಅವರು ಮುಂದುವರೆಸಬಹುದು, ಆದರೆ ಅವರು ಪ್ರಯೋಗಾತ್ಮಕವಾಗಿದ್ದಾರೆ" ಎಂದು ಇರ್ಫಾನ್ ಹೇಳಿದ್ದಾರೆ.
ಸುಜಿತ್ ಸರ್ಕಾರ್ ನಿರ್ದೇಶನದ ಜೂಹಿ ಚತುರ್ವೇದಿ ಅವರ ಕಥೆ ಇರುವ 'ಪೀಕು' ಚಲನಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಇರ್ಫಾನ್ ಖಾನ್ ಹೊರತಾಗಿ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದಾರೆ. ಈ ಸಿನೆಮಾ ಮೇ ೮ ರಂದು ಬಿಡುಗಡೆ ಕಾಣಲಿದೆ.