ಪ್ಯಾರ್'ಗೆ ಆಗ್ಬಿಟೈತೆ ಹುಡುಗಿ ಪಾರುಲ್ ಯಾದವ್ ಮೊಣಕಾಲಿಗೆ ಮತ್ತು ಕಾಲಿನ ಬೆರಳಿಗೆ ಪೆಟ್ಟಾಗಿದೆಯಂತೆ.
ರಾಮ್ ಗೋಪಾಲ್ ವರ್ಮಾ ಅವರ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಶೂಟಿಂಗ್ ಸಮಯದಲ್ಲಿ, ಧೂಮ್ 3 ಖ್ಯಾತಿಯ ಸಾಹಸ ನಿರ್ದೇಶಕ ಅಲನ್ ಅಮಿನ್ ಅವರ ಸಂಯೋಜನೆಯ ಸ್ಟಂಟ್ ದೃಶ್ಯದ ಚಿತ್ರೀಕರಣ ಸಂದರ್ಭ, ಶಿವರಾಜ್ ಕುಮಾರ್ ಅವರ ಜೊತೆ ಸಾಹಸ ದೃಶ್ಯದಲ್ಲಿ ಪಾಲ್ಗೊಂಡಿದ್ದಾಗ ಪಾರುಲ್ ಹೆಬ್ಬೆರಳಿಗೆ ಮತ್ತು ಮೊಣಕಾಲಿಗೆ ಗಾಯವಾಗಿದೆ.
ಶಿವರಾಜ್ ಕುಮಾರ್, ರಾಮ್ ಗೋಪಾಲ್ ವರ್ಮಾ ಮತ್ತು ಅಮಿನ್ ಅವರನ್ನು ಕಾಯಿಸಬಾರದೆಂದು ಗಾಯವಾಗಿದ್ದರೂ ಸಹ ಚಿತ್ರೀಕರಣ ಮುಂದುವರಿಸಿದೆ ಎಂದು ಪಾರುಲ್ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ನಾನು ಮಾಡಿರುವ ಕೆಲವು ಸ್ಟಂಟ್ ಗಳು ಆಶ್ಚರ್ಯ ಮೂಡಿಸಿದೆ ಎಂದು ಪಾರುಲ್ ಟ್ವೀಟ್ ಮಾಡಿದ್ದಾರೆ.
Amazed with the amount of stunts I did today with the humid climate in Vizag! Hurt and bruised but all worth it!☺