ಸಿನಿಮಾ ಸುದ್ದಿ

ಡೆಂಗ್ಯೂ ತಡೆ ಪ್ರಚಾರಕ್ಕೆ ಕ್ರೇಜಿ ಸ್ಟಾರ್

Guruprasad Narayana

ಬೆಂಗಳೂರು: ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಮತ್ತು ಚಿಕನ್ ಗುನ್ಯ ರೋಗದ ಬಗ್ಗೆ ಅರಿವು ಮೂಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರನ್ನು ತೊಡಗಿಸಿಕೊಂಡಿದೆ.

ಈ ಅರಿವು ಪ್ರಚಾರ ಕಾರ್ಯಕ್ರಮದ ಬೆಗ್ಗ ಚರ್ಚಿಸಲು ಬಿಬಿಎಂಪಿ ಕಮಿಷನರ್ ಜಿ ಕುಮಾರ್ ನಾಯಕ್ ಮತ್ತು ಆರೋಹ್ಯ ತಪಾಸಣಾ ಅಧಿಕಾರಿ ಹಾಗು ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಶಂಕರಪ್ಪ ಖಾಂಡ್ರೆ ಈ ನಟನ ರಾಜಾಜಿನಗರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದ್ದಾರೆ.

"ರವಿಚಂದ್ರನ್ ಸಿನೆಮಾ, ನೃತ್ಯ, ರಿಯಾಲಿಟಿ ಕಾರ್ಯಕ್ರಮ ಮತ್ತು ರೇಡಿಯೊ ಶೋಗಳಲ್ಲಿ ಕಾಣಿಸಿಕೊಳ್ಳುವುದರಿಂದ ಜನ ಅವರನ್ನು ಅನುಸರಿಸುತ್ತಾರೆ. ಆವರು ವ್ಯಾಪಕವಾಗಿ ಜನರನ್ನು ತಲುಪಬಲ್ಲರು" ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ರವಿಚಂದ್ರನ್ ಒಳಗೊಂಡ, ರೋಗಗಳ ಬಗ್ಗೆ ಅರಿವು ಮೂಡಿಸಬಲ್ಲ ಈ ವಿಡಿಯೊ ಮತ್ತು ಆಡಿಯೋ ಕ್ಲಿಪ್ ಗಳನ್ನು ಚಿತ್ರಮಂದಿರಗಳಲ್ಲಿ, ಟಿವಿ ಜಾಹಿರಾತುಗಳಲ್ಲಿ, ರೇಡಿಯೋಗಳಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT