ಸಿನಿಮಾ ಸುದ್ದಿ

ಪರೀಕ್ಷೆಯಿಂದ 'ಆಟಗಾರ'ನ ಮೊದಲ ಶೋ ವಂಚಿತಳಾದ ಮೇಘನಾ

Guruprasad Narayana

ಬೆಂಗಳೂರು: ಕಳೆದ ವಾರ ಬಿಡುಗಡೆಯಾದ ಕೆ ಎಂ ಚೈತನ್ಯ ನಿರ್ದೇಶನದ 'ಆಟಗಾರ'ದ ಸಹನಟಿ ಮೇಘನಾ ರಾಜ್ ಮೊದಲ ದಿನದ ಮೊದಲ ಶೋಗೆ ಬರಲಾಗಲಿಲ್ಲವಂತೆ ಕಾರಣ ಶುಕ್ರವಾರ ಬೆಳಗ್ಗೆ ತಮ್ಮ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿದ್ದರಂತೆ.

"ಗುರುವಾರ ರಾತ್ರಿ ನನಗೆ ವಿಪರೀತ ಭಯವಾಗಿತ್ತು ಏಕೆಂದರೆ ಶುಕ್ರವಾರ ಆಟಗಾರ ಬಿಡುಗಡೆ ಮತ್ತು ನನ್ನ ಪರೀಕ್ಷೆ. ಆದರೆ ಚಿತ್ರದ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿದ್ದೆ" ಎನ್ನುತ್ತಾರೆ ಮೇಘನಾ.

ರಾಜ್ಯಶಾಸ್ತ್ರ ದ ಪದವಿಗೆ ಅಧ್ಯಯನ ಮಾಡುತ್ತಿರುವ ಮೇಘನಾ "ಮೊದಲ ಶೋ ನಡೆಯುವಾಗ ನಾನು ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವತ್ತ ಗಮನ ಹರಿಸಿದ್ದೆ. ಸಿನೆಮಾಗೆ ವೀಕ್ಷಕರ ಪ್ರತಿಕ್ರಿಯೆ ಹೇಗಿತ್ತು ಎಂದು ತಿಳಿಯುತ್ತಿರಲಿಲ್ಲ. ಆದರೆ ನಂತರ ಪರೀಕ್ಷೆ ಕೊಠಡಿಯಂದ ಹೊರಗೆ ಓಡಿ ಬಂದು, ನಮ್ಮ ತಾಯಿಗೆ ಕರೆ ಮಾಡಿ ಸಿನೆಮಾಗೆ ಪ್ರತಿಕ್ರಿಯೆಗಳ ಬಗ್ಗೆ ಕೇಳಿ ಥ್ರಿಲ್ ಆದೆ" ಎನ್ನುತ್ತಾರೆ.

ಸೆಪ್ಟಂಬರ್ ೭ ರಂದು ತಮ್ಮ ಅಂತಿಮ ವರ್ಷದ ಪರೀಕ್ಷೆಗಳು ಮುಗಿಯುತ್ತವೆ ಎನ್ನುವ ಅವರು "ನಾನು ಸಿನೆಮಾದಲ್ಲಿ ನಟಿಸುತ್ತಿದ್ದರೂ ವಿದ್ಯಾಭ್ಯಾಸ ಅತ್ಯಗತ್ಯ ಎಂದು ನಂಬಿದ್ದೇನೆ. ಸಿನೆಮಾದಲ್ಲಿ ವೃತ್ತಿಜೀವನ ನಡೆಸುವುದೆಂದರೆ ಏರು ಪೇರು ಎಂದು ನಮ್ಮ ತಂದೆಯವರು ಯಾವಗಲೂ ಹೇಳುತ್ತಾರೆ. ಅದು ನಿಜ ಹಾಗು ನನಗೆ ವೈಯಕ್ತಿಕವಾಗಿ ಅದರ ಅನುಭವಾಗಿದೆ. 'ರಾಜ ಹುಲಿ'ಯ ನಂತರ ಅವಕಾಶಗಳಿಲ್ಲದೇ ಸುಮ್ಮನಿದ್ದೆ. ಈಗ ಆಟಗಾರ ಮಾಡಿದ್ದೇನೆ. ಚಿತ್ರರಂಗ ನನ್ನ ಜೀವನಪೂರ್ತಿ ಆಯ್ಕೆಯಲ್ಲ" ಎನ್ನುತ್ತಾರೆ.

ಪರೀಕ್ಷೆಗಳ ನಂತರ ನಾಗಭರಣ ನಿರ್ದೇಶನದ 'ಅಲ್ಲಮಪ್ರಭು' ಸಿನೆಮಾ ತಂಡಕ್ಕೆ ಸೆಪ್ಟಂಬರ್ ೮ ರಂದು ಮೇಘನಾ ಸೇರಲಿದ್ದಾರೆ. "ಇದು ಬಹಳ ಆಸಕ್ತಿದಾಯಕ ವಿಷಯ ಎಕೆಂದರ ಅದಕ್ಕೆ ಇತಿಹಾಸ ಇದೆ. ಇಡಿ ಸೆಪ್ಟಂಬರ್ ಪೂರ್ತಿ ಈ ಸಿನೆಮಾಗೆ ಮೀಸಲಿಟ್ಟಿದ್ದೇನೆ" ಎನ್ನುತ್ತಾರೆ. ಅಲ್ಲದೆ 'ಭುಜಂಗ' ಮತ್ತು 'ಲಕ್ಷ್ಮಣ' ಸಿನೆಮಾಗಳಲ್ಲು ನಟಿಸುತ್ತಿದ್ದು, ಮತ್ತೊಂದು ಸಿನೆಮಾ 'ವಂಶೋದ್ಧಾರಕ' ಬಿಡುಗಡೆಗೆ ಸಿದ್ಧವಾಗಿದೆ.

SCROLL FOR NEXT