'ಮಿಂಚಾಗಿ ನೀನು ಬರಲು' ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

ಈ ವಾರವೂ ೫ ಕನ್ನಡ ಚಿತ್ರಗಳ ಬಿಡುಗಡೆ

ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಕನ್ನಡ ಚಿತ್ರಗಳ ಪ್ರವಾಹವೇ ಹರಿದಿದೆ. ಕಳೆದ ಮೂರು ವಾರಗಳಲ್ಲಿ ೧೫ ಕ್ಕೂ ಹೆಚ್ಚು ಕನ್ನಡ ಸಿನೆಮಾಗಳು ಬಿಡುಗಡೆಯಾಗಿದ್ದರೆ ಈ ವಾರ

ಬೆಂಗಳೂರು: ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಕನ್ನಡ ಚಿತ್ರಗಳ ಪ್ರವಾಹವೇ ಹರಿದಿದೆ. ಕಳೆದ ಮೂರು ವಾರಗಳಲ್ಲಿ ೧೫ ಕ್ಕೂ ಹೆಚ್ಚು ಕನ್ನಡ ಸಿನೆಮಾಗಳು ಬಿಡುಗಡೆಯಾಗಿದ್ದರೆ ಈ ವಾರ ಕೂಡ ಕನಿಷ್ಠ ೫ ಚಲನಚಿತ್ರಗಳ ಬಿಡುಗಡೆ ಕಾಣಲಿವೆ. ನಾಳೆ ನಿಮ್ಮ ಸಿನೆಮಾ ಆಯ್ಕೆಗಾಗಿ ಈ ಪಟ್ಟಿ.

ರಥಾವರ: 'ಉಗ್ರಂ'ನ ಭಾರಿ ಯಶಸ್ಸಿನ ನಂತರ ಅಂತಹುದೇ ಒಂದು ನಿರೀಕ್ಷೆಯೊಂದಿಗೆ 'ರಥಾವರ'ದ ಮೂಲಕ ಶ್ರೀಮುರಳಿ ಹಿಂದಿರುಗಿದ್ದಾರೆ. ರಚಿತಾರಾಮ್ ನಾಯಕನಟಿಯಾಗಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ಒದಗಿಸಿದ್ದಾರೆ. ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಕ.

ಮಿಂಚಾಗಿ ನೀನು ಬರಲು: ದೂದ್ ಪೇಡ ದಿಗಂತ್ ಬಾಲಿವುಡ್ ನಲ್ಲೂ ಮಿಂದು ಕನ್ನಡ ಚಿತ್ರೋದ್ಯಮಕ್ಕೆ ಮರಳಿದ್ದಾರೆ. ಕನ್ನಡದ ಚೆಲುವೆ ಕೃತಿ ಕರಬಂಧ ಅವರ ಜೊತೆ ನಟಿಸಿರುವ ಈ ಸಿನೆಮಾಗೆ ಆಕ್ಷನ್ ಕಟ್ ಹೇಳಿರುವವರು ಬಾಲಿವುಡ್ ನಲ್ಲಿ ಸಹನಿರ್ದೇಶಕನಾಗಿ ದುಡಿದಿರುವ ರಣದೀಪ್ ಶಾಂತಾರಾಮ್ ಮಹಾದಿಕ್. ನಿರ್ದೇಶಕನಾಗಿ ಚೊಚ್ಚಲ ಸಿನೆಮಾ.

ಕೇರ್ ಆಫ್ ಫುಟ್ ಪಾತ್-೨
: ಆಸ್ಕರ್ ಪ್ರಶಸ್ತಿ ರೇಸ್ ಗೆ 'ಲ್ಯಾಟರಲ್ ನಾಮಕರಣ' ಪಡೆದ ಖ್ಯಾತಿಯಲ್ಲಿ ಕಿಶನ್ ನಿರ್ದೇಶನದ ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ. ಕಾರ್ತಿಕ್ ಜಯರಾಮನ್, ಮತ್ತು ಬಾಲಿವುಡ್ ಖ್ಯಾತಿಯ ಇಶಾ ಡಿಯೋಲ್ ಜೊತೆಗೆ ಕಿಶನ್ ಕೂಡ ಸಿನೆಮಾದಲ್ಲಿ ನಟಿಸಿದ್ದಾರೆ.

ಗೌಡ್ರುಡುಗ್ರು
: ವೆಂಕಟೇಶ್ವರ ರೆಡ್ಡಿ ನಿರ್ದೇಶನದ ಈ ಸಿನೆಮಾಗೆ ಹೊಸ ನಾಯಕ ಮತ್ತು ನಟಿ. ತಾರಾಗಣದಲ್ಲಿ ಸಂತೋಷ್‌, ಗೋಪಿ, ರವಿಶಂಕರ್‌, ಬುಲೆಟ್‌ ಪ್ರಕಾಶ್‌, ಟೆನ್ನಿಸ್‌ ಕೃಷ್ಣ, ಹೊನ್ನವಳ್ಳಿ ಕೃಷ್ಣ, ನರಸಿಂಹಮೂರ್ತಿ ರಾಜಘಟ್ಟ ಮುಂತಾದವರು ಇದ್ದಾರೆ.

ಮಾನಿತ: ಸವಿತಾ ಬರ್ನಾಡ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಕ್ಕಳ ಚಿತ್ರ ಇದು. ಶೈಲೇಶ್ ಬಾಲ ನಟನಾಗಿ ಕಾಣಿಸಿಕೊಂಡಿದ್ದಾರೆ. ಸಾಜನ್ ಥಾಮಸ್ ಮತ್ತು ನಂದು ಜೆ. ಜೇಬೆಟ್ ಸಂಗೀತ ಸಂಯೋಜಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT