'ರಥಾವರ'ದಲ್ಲಿ ಶ್ರೀಮುರಳಿ 
ಸಿನಿಮಾ ಸುದ್ದಿ

ಯಶಸ್ಸು ಪುನರಾವರ್ತನೆಯ ಭರವಸೆಯಲ್ಲಿ ಶ್ರೀಮುರಳಿ

'ಉಗ್ರಂ' ಮೂಲಕ ಭಾರಿ ಯಶಸ್ಸು ಕಂಡ ಶ್ರೀಮುರಳಿ ಅದನ್ನು ಮರುಕಳಿಸುವ ಭರವಸೆಯಲ್ಲಿದ್ದಾರೆ. ಬಿಡುಗಡೆಯಾಗಲಿರುವ ತಮ್ಮ ಮುಂದಿನ ಸಿನೆಮಾ 'ರಥಾವರ'ದಲ್ಲಿ

ಬೆಂಗಳೂರು: 'ಉಗ್ರಂ' ಮೂಲಕ ಭಾರಿ ಯಶಸ್ಸು ಕಂಡ ಶ್ರೀಮುರಳಿ ಅದನ್ನು ಮರುಕಳಿಸುವ ಭರವಸೆಯಲ್ಲಿದ್ದಾರೆ. ಬಿಡುಗಡೆಯಾಗಲಿರುವ ತಮ್ಮ ಮುಂದಿನ ಸಿನೆಮಾ 'ರಥಾವರ'ದಲ್ಲಿ ತನು-ಮನವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ ಎನ್ನುವ ಮುರಳಿ, ಜನಮೆಚ್ಚುಗೆ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕನಟಿ. "ನಾನು ಸಿನೆಮಾ ನಿರ್ದೇಶನದಲ್ಲಿ ಹಸ್ತಕ್ಷೇಪ ಮಾಡಲಿಲ್ಲ ಆದರೆ ಭಾಗಿಯಾಗಿದ್ದೆ. ನಾನು ಎಲ್ಲರಲ್ಲೂ ಸಂಪೂರ್ಣ ವಿಶ್ವಾಸ ಇಡುತ್ತೇನೆ. ಹಾಗೆಯೇ ಇಡೀ ತಂಡ ಒಟ್ಟಿಗೆ ಕೆಲಸ ಮಾಡಿದೆ" ಎನ್ನುತ್ತಾರೆ ಶ್ರೀಮುರಳಿ.

ಒಮ್ಮೆ ಯಶಸ್ಸು ಕಂಡ ನಂತರ ಅದನ್ನು ಪುನರಾವರ್ತಿಸುವುದು ಒತ್ತಡ ಎಂದು ಒಪ್ಪಿಕೊಳ್ಳುವ ಮುರಳಿ "ಎಲ್ಲರೂ ಮತ್ತೆ ಮತ್ತೆ ಯಶಸ್ಸು ಗಳಿಸಲು ಬಯಸುತ್ತಾರೆ. ಕಷ್ಟ ಪಟ್ಟು ಕೆಲಸ ಮಾಡಿದಾಗ ಅದು ಸಹಜ ನಿರೀಕ್ಷೆ. ಇದರ ಜೊತೆಗೆ ಸ್ವಲ ಅದೃಷ್ಟವೂ ಜೊತೆಗಿರಬೇಕು. ನನಗೆ ಭಯವಿಲ್ಲ ಆದರೆ ಒತ್ತಡವಿದೆ" ಎನ್ನುತ್ತಾರೆ.

ಚಿತ್ರೋದ್ಯಮದಲ್ಲಿರುವ ತೀವ್ರ ಸ್ಪರ್ಧೆಯ ಬಗ್ಗೆ ಮಾತನಾಡುವ ಮುರಳಿ "ಎಲ್ಲರೂ ಉತ್ತಮಗೊಳ್ಳುತ್ತಿದ್ದಾರೆ, ಇದು ಉಳಿದುಕೊಳ್ಳಲು ಅತಿ ಅವಶ್ಯಕ. ಇದರಿಂದ ಕಲಿಯುವುದು ಏನೆಂದರೆ ಯಾವುದರಲ್ಲಿ ತೊಡಗಿಸಿಕೊಂಡರು ಅದರಲ್ಲಿ ಶ್ರದ್ಧೆ ಅತಿ ಮುಖ್ಯ. ಅದನ್ನು ನಾನು ಅನುಸರಿಸುತ್ತಿದ್ದೇನೆ. ಕೊನೆಗೆ ಗಲ್ಲಾಪೆಟ್ಟಿಯ ಗಳಿಕೆಯೇ ಅಂತಿಮ. ನಿರ್ಮಾಪಕನಿಗೆ ಖುಷಿಯಾದರೆ ಕೆಲಸ ಮಾಡಿದವರಿಗೂ ಸಂತಸ. ಸದ್ಯಕ್ಕೆ ನನ್ನ ಗಮನ ಇರುವುದು ನಿರ್ಮಾಪಕ ಮತ್ತು ಪ್ರೇಕ್ಷಕರನ್ನು ಖುಷಿಗೊಳಿಸುವುದು" ಎನ್ನುತ್ತಾರೆ ಮುರಳಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT