ನವದೆಹಲಿ: ದೆಹಲಿಯಲ್ಲಿ ಡಿ.11ರಿಂದ ಎರಡು ದಿನಗಳ ಕಾಲ ಲಿಂಗ ಆಧಾರಿತ ದೌರ್ಜನ್ಯನ್ನು ಕೇಂದ್ರೀಕರಿಸಿದ ಚಲನಚಿತ್ರೋತ್ಸವ ನಡೆಯಲಿದೆ.
ಅಮೆರಿಕನ್ ಸೆಂಟರ್ ಮತ್ತು ಸಿನ್ದೆರ್ಬಾರ್ ಸಹಭಾಗಿತ್ವದಲ್ಲಿ ಚಲನಚಿತ್ರೋತ್ಸವ ಆಯೋಜನೆಗೊಂಡಿದೆ. ಚಲನಚಿತ್ರೋತ್ಸವದಲ್ಲಿ ಹಾಲಿವುಡ್ ನಟಿಯರಾದ ಜೂಡಿ ಫಾಸ್ಟರ್, ಚಾರ್ಲಿಜ್ ಥರಾನ್, ವೂಫಿ ಗೋಲ್ಡ ಬರ್ಗ್, ಓಪ್ರಾ ವಿನ್ ಫ್ರೇ ಮತ್ತು ಏಂಜೆಲಾ ಬ್ಯಾಸೆಟ್ ಮುಂತಾದವರು ಅಭಿನಯಿಸಿರುವ ಚಿತ್ರಗಳು ಪ್ರದರ್ಶನಗೊಳ್ಳಲಿದೆ.
ದಿ ಅಕ್ಯೂಸ್ಡ್, ನಾರ್ತ್ ಕಂಟ್ರಿ, ದಿ ಕಲರ್ ಪರ್ಪಲ್, ವಾಟ್ಸ್ ಲವ್ ಗಾಟ್ ಟು ಡು ವಿತ್ ಇಟ್ ಹಾಗೂ ಸೇಫ್ ಹೆವೆನ್ ಚಿತ್ರಗಳು ಪ್ರದರ್ಶನಗೊಳ್ಳಲಿರುವ ಪ್ರಮುಖ ಚಿತ್ರಗಳಾಗಿವೆ.