'ಮಾಸ್ಟರ್ ಪೀಸ್'ನಲ್ಲಿ ಯಶ್ 
ಸಿನಿಮಾ ಸುದ್ದಿ

'ಮಾಸ್ಟರ್ ಪೀಸ್'ಗೆ ದಿನಗಣನೆ

ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್'ಗೆ ಸೆನ್ಸಾರ್ ಮಂಡಲಿಯಿಂದ 'ಯು/ಎ' ಪ್ರಮಾಣಪತ್ರ ದೊರಕಿರುವುದಕ್ಕೆ ಚೊಚ್ಚಲ ನಿರ್ದೇಶಕ ಮಂಜು

ಬೆಂಗಳೂರು: ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್'ಗೆ ಸೆನ್ಸಾರ್ ಮಂಡಲಿಯಿಂದ 'ಯು/ಎ' ಪ್ರಮಾಣಪತ್ರ ದೊರಕಿರುವುದಕ್ಕೆ ಚೊಚ್ಚಲ ನಿರ್ದೇಶಕ ಮಂಜು ಮಾಂಡವ್ಯ ಅವರಿಗೆ ಸಂತಸವಾಗಿದೆಯಂತೆ. "ಅವರು ಒಂದೆರಡು ಸರಳ ಕಟ್ ಗಳನ್ನು ಸೂಚಿಸಿದರು ಹಾಗೂ ಒಂದೆರಡು ಕಡೆ ಬ್ಲರ್ ಮಾಡಲು ಹೇಳಿದರು. ನಾವು ಯಾವುದೇ ಸಂಭಾಷಣೆಗೆ ಕತ್ತರಿ ಹಾಕಿಲ್ಲ ಎಂಬುದು ಖುಷಿಯ ಸಂಗತಿ ಮತ್ತು ಸಿನೆಮಾ ನೋಡಿದ ಸದಸ್ಯರು ಒಳ್ಳೆಯ ವಿಮರ್ಶೆ ನೀಡಿದರು" ಎನ್ನುತ್ತಾರೆ.

ಚಿತ್ರೀಕರಣ ಪ್ರಾರಂಭವಾದಾಗಲಿಂದಲು ಹೈಪ್ ಮಾಡುತ್ತಾ ಬಂದಿದೆ ಈ ಸಿನೆಮಾ. "ಈ ಸಿನೆಮಾ ಎಷ್ಟು ಸುದ್ದಿ ಮಾಡಿತ್ತೆಂದರೆ ವಿತರಕರು ಅತಿ ಹೆಚ್ಚಿನ ಬೆಲೆಗೆ ಸಿನೆಮಾ ಹಕ್ಕುಗಳನ್ನು ಖರೀದಿಸಲು ಸಿದ್ಧರಿದ್ದರು. ಕರ್ನಾಟಕದ ವಿವಿಧ ಭಾಗಗಳಲ್ಲಿ ವಿತರಣೆಗೆ ಬೇಡಿಕೆ ಬಂದಿದ್ದು, ಅದರ ಒಟ್ಟು ಮೊತ್ತ ೩೪ ಕೋಟಿ ಆಗುತ್ತದೆ. ಅದು ನಿರ್ಮಾಪಕರಿಗೆ ಬಿಟ್ಟ ವಿಷಯ. ಟಿ ವಿ ಹಕ್ಕುಗಳಿಗೆ ಖಾಸಗಿ ವಾಹಿನಿಯೊಂದು ೬ ಕೋಟಿಗೆ ಹಕ್ಕುಗಳನ್ನು ಖರೀದಿಸಲು ಮುಂದಾಗಿದೆ. ಇದು ಕೂಡ ಇನ್ನೂ ನಿರ್ಧಾರವಾಗಬೇಕಿದೆ. ಆಡಿಯೊ ಹಕ್ಕುಗಳನ್ನು ೭೫ ಲಕ್ಷಕ್ಕೆ ಮಾರಾಟ ಮಾಡಲಾಗಿದೆ" ಎನ್ನುತ್ತಾರೆ ಮಂಜು. ಖಳನಾಯಕನೂ ಒಳಗೊಂಡಂತೆ ಹಲವಾರು ಶೇಡ್ ಗಳಲ್ಲಿ ಯಶ್ ಕಾಣಿಸಿಕೊಂಡಿರುವುದು ಸಿನೆಮಾ ಇಷ್ಟೊಂದು ಸುದ್ದಿ ಮಾಡಲು ಕಾರಣವಾಗಿದೆಯಂತೆ.

ಕಳೆದ ವರ್ಷ ಡಿಸೆಂಬರ್ ಕ್ರಿಸ್ಮಸ್ ಸಮಯಕ್ಕೆ ಬಿಡುಗಡೆಯಾದ ಯಶ್ ಅವರ 'ಮಿ ಅಂಡ್ ಮಿಸೆಸ್ ರಾಮಾಚಾರಿ' ಭಾರಿ ಯಶಸ್ಸು ಕಂಡು ಶತದಿನೋತ್ಸವ ಪೂರೈಸಿತ್ತು. ಇದನ್ನು ಮರುಕಳಿಸುವ ನಿಟ್ಟಿನಲ್ಲಿ 'ಮಾಸ್ಟರ್ ಪೀಸ್' ಕೂಡ ಡಿಸೆಂಬರ್ ೨೪ ರಂದು ಬಿಡುಗಡೆಯಾಗಲಿದೆ. ಜಯಣ್ಣ ವಿತರಣಾ ಹಕ್ಕುಗಳನ್ನು ಖರೀದಿಸಿದ್ದು, ನಿರ್ಮಾಪಕರು ಕರ್ನಾಟಕ ಮತ್ತು ಇತರೆ ರಾಜ್ಯಗಳನ್ನು ಸೇರಿ ೨೨೫ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ಜನವರಿ ಅಂತ್ಯಕ್ಕೆ ವಿಶ್ವದಾದ್ಯಂತ ಬಿಡುಗಡೆ ಮಾಡುವ ಯೋಜನೆಗಳು ಕೂಡ ಇವೆ.

ಶಾನ್ವಿ ಶ್ರೀವಾಸ್ತವ್ ನಾಯಕ ನಟಿ. ಸುಹಾಸಿನಿ, ಅಚ್ಯುತ್ ಕುಮಾರ್ ಸಹ ನಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT