ನಟ ಸುದೀಪ್ 
ಸಿನಿಮಾ ಸುದ್ದಿ

ಹೆಬ್ಬುಲಿ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭ

ಸುದೀಪ್ ನಟಿಸಲಿರುವ 'ಹೆಬ್ಬುಲಿ' ಕೊನೆಗೂ ಚಿತ್ರೀಕರಣಕ್ಕೆ ಸಜ್ಜಾಗಿದೆ. ನಿಟ್ಟುಸಿರು ಬಿಟ್ಟಿರುವ ನಿರ್ದೇಶಕ ಎಸ್ ಕೃಷ್ಣ, ತಾರಾ ಬಳಗ ಮಾತು ತಾಂತ್ರಿಕ ಬಳಗದ ಆಯ್ಕೆಯಲ್ಲಿ

ಬೆಂಗಳೂರು: ಸುದೀಪ್ ನಟಿಸಲಿರುವ 'ಹೆಬ್ಬುಲಿ' ಕೊನೆಗೂ ಚಿತ್ರೀಕರಣಕ್ಕೆ ಸಜ್ಜಾಗಿದೆ. ನಿಟ್ಟುಸಿರು ಬಿಟ್ಟಿರುವ ನಿರ್ದೇಶಕ ಎಸ್ ಕೃಷ್ಣ, ತಾರಾ ಬಳಗ ಮಾತು ತಾಂತ್ರಿಕ ಬಳಗದ ಆಯ್ಕೆಯಲ್ಲಿ ನಿರತರಾಗಿದ್ದಾರೆ.

ಫೆಬ್ರವರಿ ಮಧ್ಯದಿಂದ ಚಿತ್ರೀಕರಣ ಪ್ರಾಂಭವಾಗಲಿದ್ದು, ಈಗಾಗಲೇ ಖಳ ನಾಯಕ ರವಿಶಂಕರ್ ನಟಿಸಲು ಒಪ್ಪಿಕೊಂಡಿದ್ದಾರೆ. ತಾಂತ್ರಿಕ ವರ್ಗದಲ್ಲಿ ಅರ್ಜುನ್ ಜನ್ಯ ಸಂಗೀತ ನಿರ್ದೇಶನಕ್ಕೆ ಒಪ್ಪಿಕೊಂಡಿದ್ದರೆ, ಎ ಕರುಣಾಕರ್ ಸಿನೆಮ್ಯಾಟೋಗ್ರಾಫರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿದ್ದು ನಂತರ ಜಮ್ಮು ಕಾಶ್ಮೀರದ ಸೇನಾ ಶಿಬಿರಗಳಲ್ಲಿ ಚಿತ್ರೀಕರಣ ಮುಂದುವರೆಯಲಿದೆಯಂತೆ.

ಸುದೀಪ್ ಅವರು ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಅದಕ್ಕಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರು ಕೋಟಿಗೊಬ್ಬ-೨ ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಮತ್ತು ಜನವರಿಯಲ್ಲಿ 'ಓ ಮೈ ಗಾಡ್' ಹಿಂದಿ ಸಿನೆಮಾದ ಕನ್ನಡ ಅವತರಿಣಿಕೆಯ ಚಿತ್ರೀಕರಣದಲ್ಲಿ ಕೂಡ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!