ಸಿನಿಮಾ ಸುದ್ದಿ

ರಜನಿ ನಂಬಿದರೆ ಭಿಕ್ಷಾಪಾತ್ರೆಯೇ ಗತಿ: ಲಿಂಗಾ ವಿತರಕರು ಮತ್ತು ಚಿತ್ರಮಂದಿರ ಮಾಲೀಕರು

Guruprasad Narayana

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಲಿಂಗಾ ಸಿನೆಮಾ ವಿತರಣೆಯಿಂದ ತೀವ್ರ ನಷ್ಟ ಅನುಭವಿಸಿರುವ ವಿತರಕರು ಮತ್ತು ಚಲನಚಿತ್ರ ಮಂದಿರ ಮಾಲೀಕರು "ಬೃಹತ್ ಭಿಕ್ಷೆ" ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ರಜನಿಕಾಂತ್ ಸಿನೆಮಾಗಳನ್ನು ನಂಬಿದರ ನಮಗೆ ಬೀದಿಗಳಲ್ಲಿ ಭಿಕ್ಷೆ ಎತ್ತುವ ಸ್ಥಿತಿ ಬರುತ್ತದೆ ಎಂದು ತಿಳಿಸಲು ಸಾಂಕೇತಿಕ ಪ್ರತಿಭಟನೆ ಇದು ಎಂದಿದ್ದಾರೆ.

ಭಿಕ್ಷಾಪಾತ್ರೆಗಳನ್ನು ತೆಗೆದುಕೊಂಡು ಪೋಯೇಸ್ ಗಾರ್ಡನ್ ನಲ್ಲಿರುವ ರಜನಿಕಾಂತ್ ಮನೆಯಿಂದ ಭಿಕ್ಷಾಟನೆ ಪ್ರಾರಂಭಿಸಿ ಲಿಂಗಾ ಸಿನೆಮಾ ತೋರಿಸಿದ ರಾಜ್ಯದ ಎಲ್ಲ ಚಿತ್ರಮಂದಿರಗಳ ಎದುರು ಬಿಕ್ಷಾಟನೆ ಪ್ರತಿಭಟನೆ ನಡೆಸಲಿದ್ದೇವೆ ಎಂದಿದ್ದಾರೆ.

ನಮಗಾಗಿರುವ ನಷ್ಟ ಭರಿಸಿಕೊಡಲು ನಾವು ಕೇಳುತ್ತಿರುವ ಪರಿಹಾರ ಧನ ಕೇವಲ ೩೩.೮೫ ಕೋಟಿ. ನಾವು ಅವರ ಲಾಭದ ಮಾರ್ಜಿನ್ ಕಡಿಮೆ ಮಾಡಿಕೊಳ್ಳಿ ಎಂದಷ್ಟೇ ಕೇಳುತ್ತಿರುವುದು. ಅವರು ಏರೋಸ್ ಇಂಟರ್ನ್ಯಾಶನಲ್ ನಿಂದ ೧೫೭ ಕೋಟಿ ಪಡೆದಿದ್ದಾರೆ ಎಂದು ಕೂಡ ವಿತರಕರು ತಿಳಿಸಿದ್ದಾರೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ವಿತರಕರು ಅನುಭವಿಸಿದ್ದಾರೆ ಎನ್ನಲಾದ ನಷ್ಟದ ೧೦% ಮೊತ್ತವನ್ನು ಭರಿಸಿಕೊಡಲು ಒಪ್ಪಿಕೊಂಡಿದ್ದರು ಎಂದು ತಿಳಿದುಬಂದಿದೆ. ಇದನ್ನು ವಿತರಕರು ನಿರಾಕರಿಸಿದ್ದಾರೆ.

SCROLL FOR NEXT