ಪುನೀತ್ ರಾಜಕುಮಾರ್ - ಭಾವನ 
ಸಿನಿಮಾ ಸುದ್ದಿ

`ಮೈತ್ರಿ' ಈ ವಾರ ಬಿಡುಗಡೆ

ಓಂಕಾರ್ ಮೂವೀಸ್ ಅಡಿಯಲ್ಲಿ ಈ ವಾರ ಬಿಡುಗಡೆ ಆಗುತ್ತಿರುವ `ಮೈತ್ರಿ' ಹಲವಾರು ವಿಶೇಷಗಳನ್ನು ಹೊಂದಿದೆ. ಇದು ಮಧುರ `ಮೈತ್ರಿ' ಯೂ ಹೌದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಅಪೂರ್ವ ಸಂಗಮ ಈ `ಮೈತ್ರಿ' ಮೂಲಕ ಸಾಧ್ಯವಾಗಿದೆ.

ಈ ಚಿತ್ರದ ನಿರ್ಮಾಪಕರು ಎನ್.ಎಸ್ ರಾಜಕುಮಾರ್, ನಿರ್ದೇಶಕ ಬಿ.ಎಂ ಗಿರಿರಾಜ್ ಅವರ ವಿನೂತನ ಕಥೆ ಇಲ್ಲಿದೆ. ಈ ಚಿತ್ರಕ್ಕೆ ನಾದ ಬ್ರಹ್ಮ, ಸಂಗೀತ ಮಾಂತ್ರಿಕ ಇಳಯರಾಜ ಅವರ ಸುಮಧುರ ಸಂಗೀತ ಮತ್ತಷ್ಟು ಆಕರ್ಷಣೆ ತಂದುಕೊಟ್ಟಿದೆ.

`ಮೈತ್ರಿ' ಸಿನಿಮಾದಲ್ಲಿ ಮೋಹಲ್ ಲಾಲ್ ಅವರದು ರಕ್ಷಣಾ ಇಲಾಖೆಯ ವಿಜ್ಞಾನಿ ಪಾತ್ರ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲೇ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಲ್ಲಿ `ನವಿಲಾದವರು, ಅದ್ವೈತ, ಜಟ್ಟ ಸಿನಿಮಾಗಳ ನಿರ್ದೇಶಕರಾದ ಗಿರಿರಾಜ್ ಇದೆ ಎನ್. ಎಸ್ ರಾಜಕುಮಾರ್ ಅವರೊಂದಿಗೆ ಎರಡನೇ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಎ. ವಿ ಕೃಷ್ಣ ಕುಮಾರ್ ಅವರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ, ಮದನ್ ಹರಿಣಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಮೋಹನ್ ಲಾಲ್, ಪುನೀತ್ ರಾಜಕುಮಾರ್ ಅವರ ಜೊತೆಗೆ ಅರ್ಚನ (ಆ ದಿನಗಳು), ಭಾವನ ಮೆನನ್ ಅಲ್ಲದೆ ಅನೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಬಾಲ ನಟರಾಗಿ ಆದಿತ್ಯ, ಸಮರ್ಥ, ಕುಶಾಲ್, ದೇವು ಹಾಗೂ ಇನ್ನಿತರರು ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT