ಮುಂಬೈ: ಜಾತಿ ಮತ್ತು ಧರ್ಮಗಳನ್ನು ಬದಿಗಿಟ್ಟು ಮೇಲೇರುವ ಸಂದೇಶವಿರುವ ನರೇಂದ್ರ ಮೋದಿ ಸರ್ಕಾರದ ಜಾಹಿರಾತು ಪ್ರಚಾರದಲ್ಲಿ ನಟಿಸಲು ನನಗೆ ಆಹ್ವಾನ ಬಂದಿಲ್ಲ ಎಂದು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸ್ಪಷ್ಟಪಡಿಸಿದ್ದಾರೆ.
ಈ ವಿಷಯ ಸ್ಪಷ್ಟಪಡಿಸಲು ಟ್ವಿಟ್ಟರ್ ನಲ್ಲಿ ಅವರು ಹೀಗೆ ಬರೆದಿದ್ದಾರೆ.
"ಪ್ರಧಾನಿ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯ ಅವರ ಹೊಸ ಜಾಹೀರಾತು ಪ್ರಚಾರಕ್ಕೆ ನನ್ನನು ಸಂಪರ್ಕಿಸಿದ್ದಾರೆ ಎಂಬ ಸುದ್ದಿ ತಪ್ಪು!! ದಯವಿಟ್ಟು ತಿದ್ದಿಕೊಳ್ಳಿ.. ಧನ್ಯವಾದಗಳು!" ಎಂದು ಟ್ವೀಟ್ ಮಾಡಿದ್ದಾರೆ.