ವರುಣ್ ಮನಿಯನ್ ಜತೆ ತ್ರಿಶಾ 
ಸಿನಿಮಾ ಸುದ್ದಿ

ಜ.23ಕ್ಕೆ ನಟಿ ತ್ರಿಶಾ ನಿಶ್ಚಿತಾರ್ಥ

ನಟಿ ತ್ರಿಶಾ ಮದ್ವೆಯಾಗುತ್ತಿದ್ದಾಳೆ! ಹೌದು, ಜನವರಿ 23ಕ್ಕೆ ಬಹುಭಾಷಾ ನಟಿ...

ನಟಿ ತ್ರಿಶಾ ಮದ್ವೆಯಾಗುತ್ತಿದ್ದಾಳೆ! ಹೌದು, ಜನವರಿ 23ಕ್ಕೆ ಬಹುಭಾಷಾ ನಟಿ ತ್ರಿಶಾ ನಿಶ್ಚಿತಾರ್ಥ ನಡೆಯಲಿದೆ. ತನ್ನ ಬಾಯ್  ಫ್ರೆಂಡ್  ವರುಣ್ ಮನಿಯನ್ ಜತೆ ತ್ರಿಶಾ ನಿಶ್ಚಿತಾರ್ಥ ನಡೆಯಲಿದ್ದು, ಈ ಸಮಾರಂಭಕ್ಕೆ ಕುಟುಂಬ ಹಾಗೂ ಆಪ್ತರಿಗಷ್ಟೇ ಆಮಂತ್ರಣ ನೀಡಲಾಗಿದೆ.

ಈ ವರ್ಷಾಂತ್ಯಕ್ಕೆ ತ್ರಿಶಾ ಹಸೆಮಣೆಯೇರಲಿದ್ದಾಳೆ ಎಂಬ ವದಂತಿ ಈ ಹಿಂದೆ ಹಬ್ಬಿತ್ತು. ಇದಕ್ಕೆ ಉತ್ತರಿಸಿದ ತ್ರಿಶಾ, ನನ್ನ ಅಭಿಮಾನಿಗಳಿಗೆ, ಸ್ನೇಹಿತರಿಗೆ ಮತ್ತು ಮಾಧ್ಯಮದವರಿಗೆ ಒಂದು ವಿಷಯ ಹೇಳಬೇಕಿದೆ. ಅದೇನೆಂದರೆ ನಾನು ವರುಣ್ ಅವರ ಜತೆ ಜ. 23ಕ್ಕೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, ಈ ಖಾಸಗಿ ಸಮಾರಂಭದಲ್ಲಿ ನಮ್ಮಿಬ್ಬರ ಕುಟುಂಬದವರು ಮಾತ್ರ ಭಾಗವಹಿಸುತ್ತಾರೆ. ದಯವಿಟ್ಟು ಈಗಲೇ ನನ್ನ ಮದ್ವೆ ದಿನವನ್ನು ಊಹಿಸಿ ನಿಗದಿ ಪಡಿಸುವುದು ಬೇಡ. ಇದು ನಿಶ್ಚಿತಾರ್ಥ, ಮದ್ವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಈ ಬಗ್ಗೆ ನಾನೇ ನಿಮಗೆ ತಿಳಿಸುತ್ತೇನೆ ಎಂದಿದ್ದಾಳೆ.

ಅದೇ ವೇಳೆ ಮದುವೆಯ ನಂತರವೂ ನಾನು ಸಿನಿಮಾದಲ್ಲಿ ಅಭಿನಯಿಸಲಿದ್ದು, ಸಿನಿಮಾಗೆ ಗುಡ್ ಬೈ ಹೇಳುವ ಯೋಚನೆ ಇಲ್ಲ ಎಂದು ತ್ರಿಶಾ ಹೇಳಿದ್ದಾಳೆ. ಮಾತ್ರವಲ್ಲದೆ, 2015ರಲ್ಲಿ ಇನ್ನೆರಡು ಸಿನಿಮಾಗಳಿಗೆ ನಾನು ಸಹಿ ಹಾಕಿದ್ದೇನೆ ಎಂದು ಆಕೆ ಹೇಳಿದ್ದಾಳೆ.

ಕಳೆದ ವರ್ಷ ತ್ರಿಶಾ -ರಾಣಾ ದುಗ್ಗುಬಾಟಿ ನಡುವೆ ಬ್ರೇಕ್ ಅಪ್ ಸುದ್ದಿಯಾಗಿತ್ತು. ಇದಾದನಂತರ ಕಳೆದ ನವೆಂಬರ್ ನಲ್ಲಿ ಚೆನ್ನೈ ಮೂಲದ ಉದ್ಯಮಿ ವರುಣ್ ಜತೆ ತ್ರಿಶಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ ಎಂಬುದೂ ಸುದ್ದಿಯಾಗಿತ್ತು. ಆವಾಗ ತ್ರಿಶಾ, ನಾನು ಯಾರ ಜತೆಯೂ ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ದಿಢೀರನೆ ನಾನು ನಿಶ್ಚಿತಾರ್ಥ ಮಾಡಿಕೊಳ್ಳಲ್ಲ. ನಾನು ಕೆಲಸ ಒಪ್ಪಿಕೊಂಡಿರುವ ವ್ಯಕ್ತಿಗಳಿಗೆ ಮತ್ತು ನಿರ್ಮಾಪಕರಿಗೆ ವಿಷಯ ತಿಳಿಸಿಬೇಕಾದ ಜವಾಬ್ದಾರಿ ನನಗಿದೆ. ನಿಶ್ಚಿತಾರ್ಥ ಖುಷಿಯ ವಿಷಯ. ಅದನ್ನು ಕದ್ದು ಮುಚ್ಚಿ ಮಾಡಿಕೊಳ್ಳಬೇಕಾದ ಅಗತ್ಯ ನನಗಿಲ್ಲ. ಯಾವೊಬ್ಬ ಹುಡುಗಿಯೂ ನಿಶ್ಚಿತಾರ್ಥ ನಡೆದರೆ ಅದನ್ನು ಮುಚ್ಚಿಡುವುದಿಲ್ಲ. ಹೀಗಿರುವಾಗ ನಾನ್ಯಾಕೆ ಮುಚ್ಚಿಡಲಿ? ಎಂದು ಕೇಳಿದ್ದಳು.

ಇದೆಲ್ಲ ಮುಗಿದ ನಂತರ ಇತ್ತೀಚೆಗೆ ತ್ರಿಶಾ, ವರುಣ್ ಮತ್ತು ಆಕೆಯ ಗೆಳೆಯರು ಆಗ್ರಾ ಹೋಗಿ ರಜಾಕಾಲ ಕಳೆದಿದ್ದರು. ಆವಾಗಲೇ ತ್ರಿಶಾ ಮತ್ತು ವರುಣ್ ಕೇವಲ ಫ್ರೆಂಡ್ಸ್ ಮಾತ್ರ ಅಲ್ಲ ಅವರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ ಎಂಬ ವದಂತಿ ಹರಡಿತ್ತು. ಈಗ ವರುಣ್ ಮತ್ತು ತ್ರಿಶಾ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯನ್ನು ಸ್ವಯಂ ತ್ರಿಶಾಳೇ ಹೇಳಿದ್ದಾಳೆ. ಹೀಗಿರುವಾಗ ತ್ರಿಶಾ-ವರುಣ್ಗೆ ಶುಭ ಹಾರೈಕೆ ಮಾಡುವ ಸರದಿ ಆಕೆಯ ಅಭಿಮಾನಿಗಳದ್ದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT