ಗೋಲ್ಡನ್ ಸ್ಟಾರ್ ಗಣೇಶ್ ಅವರ 38 ನೇ ವರ್ಷದ ಹುಟ್ಟುಹಬ್ಬಕ್ಕೆ ಗಣೇಶ್ ಪತ್ನಿ 20 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಕಳೆದ ವರ್ಷದ ಗಣೇಶ್ ಹುಟ್ಟುಹಬ್ಬಕ್ಕೆ ಮರ್ಸಿಡಿಸ್ ಜಿಎಲ್, 350 ಕಾರು ಉಡುಗೊರೆಯಾಗಿ ನೀಡಿದ್ದರು.
ಈ ಬಾರಿ ರಾಜರಾಜೇಶ್ವರಿ ನಗರದಲ್ಲಿ 20 ಕೋಟಿ ರೂಪಾಯಿ ಮೌಲ್ಯದ ಬಂಗಲೆ ನೀಡಿದ್ದಾರೆ. ಈ ಮನೆ ಜಿಮ್ ಮತ್ತು ಸ್ವಿಮ್ಮಿಂಗ್ ಫೂಲ್ ಹಾಗೂ ಮಿನಿ ಥಿಯೇಟರ್ ಒಳಗೊಂಡಿದೆ.ಈ ಬಾರಿಯ ಹುಟ್ಟುಹಬ್ಬವನ್ನು ತಮ್ಮ ಜೊತೆ ಆಚರಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಗಣೇಶ್ ಗೆ ದುಂಬಾಲು ಬಿದ್ದಿದ್ದರು.
ಗಣೇಶ್ ಅಭಿನಯಿಸುತ್ತಿರುವ ಪಟಾಕಿ ಚಿತ್ರ ತಂಡ ಹೊಸ ಮನೆಯಲ್ಲಿ ಗಣೇಶ್ ಗೆ ಸರ್ ಫ್ರೈಸ್ ಆಗಿ ಬರ್ತ್ ಡೇ ಆಚರಣೆ ನಡೆಸಿತ್ತು. ಇನ್ನು ಪಟಾಕಿ ಚಿತ್ರದಲ್ಲಿ ಗಣೇಶ್ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.