ನೂತನ ಮುಂಗಾರು ಮಳೆ ಹುಡುಗಿ ನೇಹಾ ಶೆಟ್ಟಿ 
ಸಿನಿಮಾ ಸುದ್ದಿ

ಸಿಕ್ಕಳೋ ಸಿಕ್ಕಳಪ್ಪ ಮುಂಗಾರು ಹುಡುಗಿ-ಬೆಡಗಿ

ಮುಂಗಾರು ಮಳೆ-೨ ಕ್ಕೆ ನಡೆಯುತ್ತಿದ್ದ ನಾಯಕ ನಟಿಯ ಶೋಧಕ್ಕೆ ಅಂತ್ಯ ಕಾಣಿಸಿದ್ದಾರೆ ನಿರ್ದೇಶಕ ಶಶಾಂಕ್. ಈಗಾಗಲೇ ಗಣೇಶ್ ಮತ್ತು ರವಿಚಂದ್ರನ್ ಅವರನ್ನು

ಬೆಂಗಳೂರು: ಮುಂಗಾರು ಮಳೆ-೨ ಕ್ಕೆ ನಡೆಯುತ್ತಿದ್ದ ನಾಯಕ ನಟಿಯ ಶೋಧಕ್ಕೆ ಅಂತ್ಯ ಕಾಣಿಸಿದ್ದಾರೆ ನಿರ್ದೇಶಕ ಶಶಾಂಕ್. ಈಗಾಗಲೇ ಗಣೇಶ್ ಮತ್ತು ರವಿಚಂದ್ರನ್ ಅವರನ್ನು ಅಂತಿಮಗೊಳಿಸಿದ್ದ ನಿರ್ದೇಶಕ ಈಗ ಹೊಸ ಮುಖ ನೇಹಾ ಶೆಟ್ಟಿ ಅವರನ್ನು ನಾಯಕ ನಟಿಯಾಗಿ ಆಯ್ಕೆ ಮಾಡಿದ್ದಾರೆ.

"ನೇಹಾ ಶೆಟ್ಟಿ ನೂತನ ಮುಂಗಾರು ಮಳೆ ಹುಡುಗಿ. ಅವಳು ಕನ್ನಡತಿ ಮತ್ತು ಮಿಸ್ ಮಂಗಳೂರು ಹಾಗೂ ಮಿಸ್ ದಕ್ಷಿಣ ಭಾರತ ಸ್ಪರ್ಧೆಯಲ್ಲಿ ಎರಡನೆ ಸ್ಥಾನದಲ್ಲಿದ್ದವಳು" ಎಂದು ನಿರ್ದೇಶಕ ಶಶಾಂಕ್ ತಿಳಿಸಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ದಿನಪತ್ರಿಕೆಯೊಂದರಲ್ಲಿ ನೇಹಾ ಅವರ ಫೋಟೋ ನೋಡಿದ್ದರಂತೆ ಶಶಾಂಕ್. ಆದರೆ ನೇಹಾ ಅವರಿಗೆ ಪಿಯುಸಿ ಪರೀಕ್ಷೆ ಇದ್ದದ್ದರಿಂದ ಹಾಗು ಸಿನೆಮಾ ಚಿತ್ರೀಕರಣ ಕೂಡ ಮುಂದೆ ಹೋದದ್ದರಿಂದ ಈಗ ಒಟ್ಟಿಗೆ ಕಾಲ ಕೂಡಿಬಂದಿದೆಯಂತೆ.

ರವಿಶಂಕರ್ ಮತ್ತು ಸಾಧುಕೋಕಿಲಾ ಕೂಡ ನಟಿಸುತ್ತಿರುವ ಈ ಸಿನೆಮಾದ ಚಿತ್ರೀಕರಣ ಜುಲೈ ೨೮ರಿಂದ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶನಿವಾರ ಶಾಸಕಾಂಗ ಪಕ್ಷದ ಸಭೆ, ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

Karnataka CM News LIVE Updates | ಸಿದ್ದರಾಮಯ್ಯ ರಾಜೀನಾಮೆ; ಸಿಎಲ್‌ಪಿ ಸಭೆ ಶನಿವಾರ; ಅಂದೇ ನೂತನ ಸಿಎಂ ಪ್ರಮಾಣ ವಚನ ಸಾಧ್ಯತೆ!

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

ನಿಮ್ಮ ಪ್ರೀತಿಗೆ ಧನ್ಯವಾದ: ರಾಜೀನಾಮೆ ನೀಡಿದ ಬಳಿಕ ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಭಾವುಕ ಪೋಸ್ಟ್!

ಸೌದಿಯಲ್ಲಿ ಗಲ್ಲು ಶಿಕ್ಷೆ: 20 ವರ್ಷಗಳ ಬಳಿಕ ಕೊನೆಗೂ ತಾಯಿಯ ಮಡಿಲು ಸೇರಿದ ಕೇರಳ ವ್ಯಕ್ತಿ, 28 ದಿನಗಳಲ್ಲೇ ಬದಲಾದ ಬದುಕು, ಅತೀ ದೊಡ್ಡ ಕ್ರೌಡ್ ಫಂಡಿಂಗ್ ಅಭಿಯಾನ!

SCROLL FOR NEXT