ಬಾಹುಬಲಿ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಆಮೀರ್‌ರ ಧೂಮ್ 3 ದಾಖಲೆ ಸರಿಗಟ್ಟಿ, 9 ದಿನಕ್ಕೆ 300 ಕೋಟಿ ಕ್ಲಬ್ ಸೇರಿದ 'ಬಾಹುಬಲಿ'

ಭಾರತ ಚಿತ್ರರಂಗದ ಸದ್ಯದ ಎಲ್ಲಾ ದಾಖಲೆಗಳನ್ನು ಸರಿಗಟ್ಟುತ್ತಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಕೇಲವ 9 ದಿನಕ್ಕೆ 300 ಕೋಟಿ ಕ್ಲಬ್ ಸೇರುವ...

ಭಾರತ ಚಿತ್ರರಂಗದ ಸದ್ಯದ ಎಲ್ಲಾ ದಾಖಲೆಗಳನ್ನು ಸರಿಗಟ್ಟುತ್ತಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಕೇಲವ 9 ದಿನಕ್ಕೆ 300 ಕೋಟಿ ಕ್ಲಬ್ ಸೇರುವ ಮೂಲಕ ಭಾರತ ನಂಬರ್ ಒನ್ ಮೂವಿ ಎನಿಸಿಕೊಂಡಿದೆ.

ಪಂಚ ಭಾಷೆಗಳಲ್ಲಿ ತೆರೆಕಂಡಿರುವ ಬಾಹುಬಲಿ ಚಿತ್ರ ಮೊದಲ ದಿನವೇ 50 ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿತ್ತು. ಕೇವಲ ಮೂರು ದಿನಗಳಲ್ಲೇ 160 ಕೋಟಿ ಗಳಿಸಿ ಮುನ್ನುಗ್ಗುತ್ತಿದ್ದ ಚಿತ್ರ. ಇದೀಗ ಕೇವಲ 9 ದಿನಗಳಲ್ಲಿ 300 ಕೋಟಿ ಗಳಿಸುವ ಮೂಲಕ ಧೂಮ್ 3 ಚಿತ್ರದ ಎಲ್ಲಾ ದಾಖಲೆಗಳನ್ನು ಸರಿಗಟ್ಟಿದೆ.

ತೆಲುಗಿನ ಆವೃತ್ತಿಯಲ್ಲಿ ಬಾಹುಬಲಿ ಚಿತ್ರ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮೊದಲ ವಾರದಲ್ಲಿ 82.8 ಕೋಟಿ ರುಪಾಯಿ ಗಳಿಸಿದ್ದು. ತೆಲುಗು ಇಂಡಸ್ಟ್ರೀಯ ಆಲ್ ಟೈಮ್ ನಂಬರ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಕ್ಷಿಣ ಭಾರತ ಆಲ್ ಟೈಮ್ ಕಲೆಕ್ಷನ್ ನಲ್ಲಿ ನಂಬರ್ ಒನ್ ಚಿತ್ರ ಎನಿಸಿಕೊಂಡಿದ್ದ ರಜನಿಕಾಂತ್ ಅಭಿನಯದ ಎಂದಿರನ್ ಚಿತ್ರ ಮೊದಲ ಸ್ಥಾನದಲ್ಲಿತ್ತು. ಈ ಎಲ್ಲಾ ದಾಖಲೆಗಳನ್ನು ಬಾಹುಬಲಿ ಕೇವಲ 9 ದಿನಗಳಲ್ಲೇ ಅಳಿಸಿ ಹಾಕಿದೆ.

ಭಾರತದಲ್ಲೇ ಅತಿ ದೊಡ್ಡ ಬಜೆಟ್ ಅಂದರೆ ಸುಮಾರು 250 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಬಾಹುಬಲಿ ದೇಶಾದ್ಯಂತ 4000 ಪರದೆಗಳಲ್ಲಿ ಬಿಡುಗಡೆಯಾಗಿದ್ದು. ಎಲ್ಲಾ ಚಿತ್ರ ಮಂದಿರಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!