ಆರ್.ಮಾಧವನ್ 
ಸಿನಿಮಾ ಸುದ್ದಿ

ಬಾಲಿವುಡ್ ಗೆ ನನ್ನ ನಿಜವಾದ ಸಾಮರ್ಥ್ಯವನ್ನು ಇನ್ನೂ ತೋರಿಸಿಲ್ಲ: ಮಾಧವನ್

ನನ್ನ ನಿಜವಾದ ಪ್ರತಿಭೆಯನ್ನು ಬಾಲಿವುಡ್ ಸಿನಿಮಾ ತಯಾರಕರಿಗೆ ಪ್ರದರ್ಶಿಸಿಲ್ಲ : ಮಾಧವನ್

ಮುಂಬೈ : ತನು ವೆಡ್ಸ್ ಮನು ರಿಟನ್ಸ್ ಚಿತ್ರದ ಯಶಸ್ಸಿನಲ್ಲಿರುವ  ನಟ ಆರ್.ಮಾಧವನ್ ತಮ್ಮ ನಿಜವಾದ ಪ್ರತಿಭೆಯನ್ನು ಬಾಲಿವುಡ್ ಸಿನಿಮಾ ತಯಾರಕರಿಗೆ ಪ್ರದರ್ಶಿಸಿಲ್ಲ ಎಂದು ಹೇಳಿದ್ದಾರೆ.

ರೆಹನಾ ಹೈ ತೇರೆ ದಿಲ್ ಮೆ ಚಿತ್ರದ ಮೂಲಕ ಬಾಲಿವುಡ್  ಚಿತ್ರರಂಗ ಪ್ರವೇಶಿಸಿದ್ದ ಮಾಧವನ್,  ರಂಗ್ ದೇ ಬಸಂತಿ, ತನು ವೆಡ್ಸ್ ಮನು ಹಾಗೂ ತ್ರಿ ಇಡಿಯಟ್ಸ್ ಚಿತ್ರಗಳಲ್ಲಿ ಸ್ಮರಣೀಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈಗ ತನು ವೆಡ್ಸ್ ಮನು ರಿಟನ್ಸ್  ಚಿತ್ರದ ಮೂಲಕ ಮತ್ತೊಮ್ಮೆ ಬಾಲಿವುಡ್ ನಲ್ಲಿ ಯಶಸ್ಸು ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಾಧವನ್, ತಮ್ಮ  ನಿಜವಾದ ಸಾಮರ್ಥ್ಯವನ್ನು ಬಾಲಿವುಡ್ ನಲ್ಲಿ ಇನ್ನೂ ಪ್ರದರ್ಶಿಸಿಲ್ಲ ಎಂದು ಹೇಳಿದ್ದಾರೆ.

ಪ್ರತಿ ಮೂರು ತಿಂಗಳಿಗೆ ಒಂದು ಸಿನಿಮಾ ಮಾಡಬೇಕೆಂದುಕೊಳ್ಳುತ್ತೇನೆ, ಆದರೆ  ಅಂತಿಮವಾಗಿ ಮಾಡಿದ ಕೆಲಸ ತೃಪ್ತಿ ನೀಡಬೇಕು, ಕೇವಲ  ಹಣಕ್ಕಾಗಿ ಸಿನಿಮಾ ಮಾಡಿದರೆ  ಯಾವುದೇ ಪ್ರಯೋಜನ  ಇಲ್ಲ ಎಂದು  ಮಾಧವನ್  ಅಭಿಪ್ರಾಯಪಟ್ಟಿದ್ದಾರೆ. ಒಳ್ಳೆಯ ಚಿತ್ರಗಳನ್ನು ಮಾಡುವುದು ಕಷ್ಟ ಆದರೆ ತಾವು ಬಾಲಿವುಡ್ ನ  ಯಾವುದೇ ನಟರೊಂದಿಗೂ ಪೈಪೋಟಿ  ನಡೆಸುತ್ತಿಲ್ಲ, ಒಳ್ಳೆಯ ಸಿನಿಮಾಗಳನ್ನು ಮಾಡುವುದಷ್ಟೇ ತಮ್ಮ ಗುರಿ ಎಂದು  ಮಾಧವನ್ ತಿಳಿದ್ದಾರೆ.

ಇದೇ ವೇಳೆ ಪ್ರಶಸ್ತಿಗಳ ಬಗ್ಗೆಯೂ ಮಾತನಾಡಿರುವ ಮಾಧವನ್, ಪ್ರಶಸ್ತಿಗಳನ್ನು ಪಡೆಯುವುದರಿಂದ ಅಧಿಕಾರ ಸಿಗುವುದಿಲ್ಲ, ಭಾರತದಲ್ಲಿ  ಪ್ರಶಸ್ತಿ ಗೆಲ್ಲುವುದು ಅರ್ಥಹೀನ, ಅದು ಕೇವಲ ಸುದ್ದಿಗೆ ಮಾತ್ರ ಅರ್ಥವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತನು ವೆಡ್ಸ್  ಮನು ಚಿತ್ರದ ಸೀಕ್ವೆಲ್  ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವಿತ್ತು ಅಂತೆಯೇ ಚಿತ್ರದ ಪಾತ್ರವೂ ಕಠಿಣವಾಗಿತ್ತು, ತನು ವೆಡ್ಸ್ ಮನು ಚಿತ್ರದ ಸೀಕ್ವೆಲ್ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುತ್ತಿದೆ ಎಂದು ಮಾಧವನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!