ಇಳಯರಾಜ 
ಸಿನಿಮಾ ಸುದ್ದಿ

ನನಗೆ ರಾಯಧನ ಸರಿಯಾಗಿ ಬಂದಿದ್ದರೆ ಬಿಲ್ ಗೇಟ್ ಆಗಿಬಿಡುತ್ತಿದ್ದೆ: ಇಳಯರಾಜ

ಯಾವುದೇ ವೆಬ್ಸೈಟ್ ಆಗಲಿ ಮೊಬೈಲ್ ಸೇವಾ ಸಂಸ್ಥೆಯಾಗಲಿ ಇಳಯರಾಜ ನೀಡಿರುವ ೪೫೦೦ ಟ್ಯೂನ್ ಗಳನ್ನು ಬಳಸಿಕೊಳ್ಳುವಂತಿಲ್ಲ

ಚೆನ್ನೈ: ಯಾವುದೇ ವೆಬ್ಸೈಟ್ ಆಗಲಿ ಮೊಬೈಲ್ ಸೇವಾ ಸಂಸ್ಥೆಯಾಗಲಿ ಇಳಯರಾಜ ನೀಡಿರುವ ೪೫೦೦ ಟ್ಯೂನ್ ಗಳನ್ನು ಬಳಸಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ನೀಡಿರುವ ತೀರ್ಪಿಗೆ ಹರ್ಷ ವ್ಯಕ್ತ ಪಡಿಸಿರುವ ಚೆನ್ನೈ ಮೂಲದ ಸಂಗೀತ ನಿರ್ದೇಶಕ ಇಳಯರಾಜ ನನಗೆ ಸಿಗಬೇಕಿದ್ದ ರಾಯಧನ ಸಾರಿಯಾಗಿ ಬಂದಿದ್ದಾರೆ ಈ ಸಮಯಕ್ಕೆ ಬಿಲ್ ಗೇಟ್ ಆಗಿಬಿಡುತ್ತಿದ್ದೆ ಎಂದಿದ್ದಾರೆ.

ಯಾವುದೇ ವೆಬ್ಸೈಟ್ ನಲ್ಲಿ ಅಥವಾ ಧ್ವನಿಮುದ್ರಕ ಸಂಸ್ಥೆ ತಮ್ಮ ಟ್ಯೂನ್ ಗಳನ್ನು ಅನಧಿಕೃತವಾಗಿ ಬಳಸಿಕೊಳ್ಳುವುದರ ವಿರುದ್ಧ ಕಳೆದ ವರ್ಷ ಇಳಯರಾಜ ಹೈಕೋರ್ಟ್ ಮೊರೆ ಹೋಗಿದ್ದರು. ಎಕೋ ರೆಕಾರ್ಡಿಂಗ್ ಸಂಸ್ಥೆಯ ವಿರುದ್ಧ ಕೂಡ ದೂರಿದ್ದರು. ಐದು ಧ್ವನಿಮುದ್ರಕ ಸಂಸ್ಥೆಗಳ ವಿರುದ್ಧ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಅದನ್ನು ನೆನ್ನೆ ನ್ಯಾಯಾಧೀಶ ಆರ್ ಸುಬ್ಬಯ್ಯ ತೀರ್ಪಾಗಿ ಪರಿವರ್ತಿಸಿದ್ದಾರೆ. ಇಳಯರಾಜ ಪರವಹಿಸಿರುವ ಕೋರ್ಟ್, ಟ್ಯೂನ್ ಗಳ ಹಕ್ಕುಗಳನ್ನು ಪಡೆದ ಮೇಲೆ ಅದು ಐದು ವರ್ಷವಷ್ಟೇ ಜಾರಿಯಲ್ಲಿರುತ್ತದೆ ಎಂದಿದೆ.

ಉದಾಹರಣೆಗೆ ರಾಜಾ ಸಿನೆಮಾದ ಹಿಟ್ ಹಾಡುಗಳು ೭೦ ಮತ್ತು ೮೦ ರ ದಶಕದಲ್ಲಿ ಒಪ್ಪಂದ ಮಾಡಿಕೊಂಡಿದ್ದು. ಈಗ ಯಾರಾದರೂ ಅವನ್ನು ಬಳಸಬೇಕೆಂದರೆ ನಿರ್ಮಾಪಕರಿಂದ ಹಾಗೂ ನನ್ನಿಂದ ಮತ್ತೆ ಪರವಾನಗಿ ಪಡೆಯಬೇಕು ಇಲ್ಲ ಪರಿಣಾಮ ಎದುರಿಸಬೇಕು ಎಂದಿದ್ದಾರೆ ಇಳಯರಾಜ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT