ಮುಂಬೈ: ನಾನು ಸೋಲುವುದನ್ನು ದ್ವೇಷಿಸುತ್ತೇನೆ ಆದರೆ ಕ್ವೀನ್ ಚಿತ್ರದ ನಟನೆಗಾಗಿ ಕಂಗನ ರನೌತ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದಿದ್ದರಿಂದ ಅದು ತಮ್ಮ ಕೈತಪ್ಪಿ ಹೋಗಿರುವುದಕ್ಕೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ.
ಮಂಗಳವಾರ ದೇಶದ ರಾಜಧಾನಿಯಲ್ಲಿ ೬೨ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯಾಗಿದೆ. ಸದ್ಯ ಅಮೆರಿಕಾದಲ್ಲಿರುವ ಪ್ರಿಯಾಂಕ ಕಂಗನಾ ಅವರನ್ನು ಅಭಿನಂದಿಸಿದ್ದಾರೆ.
"ನಾನು ಸೋಲುವುದನ್ನು ದ್ವೇಷಿಸುತ್ತೇನೆ. ಆದರೆ ಈ ವರ್ಷ ನಾನು ಯಾರಿಂದಲಾದರೂ ಹಿನ್ನಡೆ ಅನುಭವಿಸಿದ್ದರೆ ಅದು ನಿಮ್ಮಿಂದಲೇ. ಕಂಗನಾ ರನೌತ್ ಅಭಿನಂದನೆಗಳು. ಏಯ್ ಕ್ವೀನ್!" ಎಂದು ೨೦೦೮ರಲ್ಲಿ ಫ್ಯಾಶನ್ ಸಿನೆಮಾಗೆ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಪ್ರಿಯಾಂಕ ಟ್ವೀಟ್ ಮಾಡಿದ್ದಾರೆ.
ಬಾಕ್ಸಿಂಗ್ ಚಾಂಪಿಯನ್ ಎಂ ಸಿ ಮೇರಿ ಕಾಂ ಅವರ ನಿಜ ಜೀವನ ಆಧಾರಿತ ಸಿನೆಮಾ ಪ್ರಿಯಾಂಕ ನಟನೆಯ 'ಮೇರಿ ಕಾಂ' ಮನರಂಜನೆಯ ವಿಭಾಗದಲ್ಲಿ ೨೦೧೪ ರ ಅತ್ಯುತ್ತಮ ಜನಪ್ರಿಯ ಸಿನೆಮಾ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.