ಬಾಲಿವುಡ್ ಚಿತ್ರೋದ್ಯಮದಲ್ಲಿ ಏನು ಮಾಡಿದರೂ ಸುದ್ದಿ, ಲಿಪ್ ಲಾಕ್ ಮಾಡಿದರೂ, ಬಟ್ಟೆ ಬಿಚ್ಚಿದರೂ, ಮೈತುಂಬಾ ಬಟ್ಟೆ ಹಾಕಿಕೊಂಡರೂ ಎಲ್ಲವೂ ಸುದ್ದಿ. ಕಳೆದ ಕೆಲವು ವರ್ಷಗಳಿಂದ ಹಿಂದಿ ಚಿತ್ರೋದ್ಯಮದಲ್ಲಿ ವರ್ಷದ ಕೆಟ್ಟ ನಟ, ನಟಿಯರನ್ನು ಆಯ್ಕೆ ಮಾಡಿ ಅಂತಹ ಪುಣ್ಯಾತ್ಮರಿಗೆ ಪ್ರಶಸ್ತಿ ಕೊಡವ ವಿಶಿಷ್ಟ ಸಂಪ್ರದಾಯವಿದೆ.
ಗೋಲ್ಡನ್ ಖೇಲಾ ಹೆಸರಿನಲ್ಲಿ ನಡೆಯುವ 2014ರ ಸಾಲಿನ ಈ ಪ್ರಶಸ್ತಿ ಪ್ರದನಾ ಸಮಾರಂಭ ಮುಂಬೈನಲ್ಲಿ ಮೊನ್ನೆ ನಡೆದಿದೆ.
2009ರಿಂದ ಆರಂಭವಾಗಿರುವ ಈ ಪ್ರಶಸ್ತಿ ಪಟ್ಟಿಯಲ್ಲಿ ಕೆಟ್ಟ ನಟ, ನಟಿ, ಚಿತ್ರ ನಿದ್ರೇಶಕ, ಸಹನಟ, ಸಹನಟಿ, ಕಿರಿಕಿರಿಯಾಗವು ಹಾಡು, ಸಾಹಿತ್ಯ ವಿಭಾಗದಲ್ಲಿನ ಕೆಟ್ಟ ಸಾಧನೆಗಾಗಿ ಪ್ರಶಸ್ತಿ ನೀಡಲಾಗುತ್ತದೆ. ಹಾಗಂತ ಚಿತ್ರ ಜಗತ್ತಿನಲ್ಲಿ ಇವರುಗಲು ಅಂಬೆಗಾಲಿಡುತ್ತಿರುವರಂತೂ ಅಲ್ಲವೇ ಅಲ್ಲ. ಘಟಾನುಗಟಿಗಳ ಹೆಸರೂ ಈ ಪಟ್ಟಿಯಲ್ಲಿದೆ.
2014ರ ಸಾಲಿನ ಕೆಟ್ಟ ನಟಿ ಪ್ರಶಸ್ತಿಗೆ ಭಾಜನರಾದವರು ಸೋನಾಕ್ಷಿ ಸಿನ್ಹಾ. ಸೋನಾಕ್ಷಿ ಈ ವಿಭಾಗದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದಾರೆ. ಕಳೆದ ವರ್ಷದ ಲಿಂಗಾ, ಆಕ್ಷನ್ ಜ್ಯಾಕ್ಷನ್, ಹಾಲಿಡೇ ಚಿತ್ರದ ಕಳಪೆ ನಟನೆಗಾಗಿ ಸೋನಾಕ್ಷಿಗೆ ಈ ಪ್ರಶಸ್ತಿ ಲಭಿಸಿದೆ.