ಸಿನಿಮಾ ಸುದ್ದಿ

ತಮ್ಮ ಸಂಗೀತ ದುರ್ಬಳಕೆಯಾಗದಂತೆ ತಡೆಯಲು ಪೊಲೀಸರಿಗೆ ಇಳಯರಾಜ ಮನವಿ

Guruprasad Narayana

ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಮದ್ರಾಸ್ ಹೈಕೋರ್ಟ್ ಸೂಚಿಸಿರುವಂತೆ ತಾವು ನಿರ್ದೇಶಿಸಿದ ಸಂಗೀತವನ್ನು ಒಪ್ಪಿಗೆ ಇಲ್ಲದೆ ಬಳಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ಶನಿವಾರ ಅವರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ ಜನಪ್ರಿಯ ಎಫ್ ಎಂ ರೇಡಿಯೋ ಮಿರ್ಚಿಯ ಜನಪ್ರಿಯ ತಡರಾತ್ರಿ ಕಾರ್ಯಕ್ರಮ 'ನೀಂಗಾ, ನಾ, ರಾಜಾ ಸರ್' ನಿಲ್ಲಿಸುವಂತೆಯೂ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

"ನಾನು ಸಂಗೀತ ನೀಡಿರುವ ಹಾಡುಗಳನ್ನು ನನ್ನ ಅನುಮತಿ ಇಲ್ಲದೆ ನಕಲು ಮಾಡಿ ದುಡ್ಡು ಮಾಡುತ್ತಿರುವುದನ್ನು ಅಭಿಮಾನಿಗಳು ನನ್ನ ಗಮನಕ್ಕೆ ತಂಇದಿದ್ದಾರೆ. ಆದುರಿಂದ ಈ ವರ್ಷ ಮಾರ್ಚ್ ನಲ್ಲಿ ಮದ್ರಾಸ್ ಹೈಕೋರ್ಟ್ ಸೂಚಿಸಿರುವಂತೆ ತಾವು ನಿರ್ದೇಶಿಸಿದ ಸಂಗೀತವನ್ನು ಒಪ್ಪಿಗೆ ಇಲ್ಲದೆ ಬಳಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾ ನಿರ್ದೇಶಕ, ಚೆನ್ನೈ ಪೊಲೀಸ್ ಕಮಿಷನರ್, ಮತ್ತು ಪೊಲೀಸ್ ಸುಪರಿಂಟೆಂಡೆಂಟ್ ಅವರುಗಳಿಗೆ ಅರ್ಜಿ ಸಲ್ಲಿಸಿದ್ದೇನೆ" ಎಂದು ಕೂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಮ್ಮ ಬರವಣಿಗೆಯಲ್ಲಿ ಅನುಮತಿ ಪಡೆಯದೆ ಯಾವುದೇ ಲಾಭಕ್ಕೆ ಅವರ ಹೆಸರು ಅಥವಾ ಫೋಟೊ ಕೂಡ ಬಳಸಬಾರದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

SCROLL FOR NEXT