ಸಿನಿಮಾ ಸುದ್ದಿ

ಗ್ರಾಮೀಣ ಬದುಕು-ಬೈಗುಳಗಳನ್ನು ಕಲಿಯುತ್ತಿರುವ ಶ್ವೇತಾ

Guruprasad Narayana

ಬೆಂಗಳೂರು: ನಿರ್ದೇಶಕ ಸುಮನಾ ಕಿತ್ತೂರು ಅವರ ಮತಹತ್ವಾಕಾಂಕ್ಷೆಯ ಯೋಜನೆ, ಖ್ಯಾತ ಬರಹಗಾರ ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಆಧಾರಿತ 'ಕಿರಗೂರಿನ ಗಯ್ಯಾಳಿಗಳು' ಸಿನೆಮಾ ನಟಿ ಶ್ವೇತಾ ಶ್ರೀವಾತ್ಸವ್ ಅವರಿಗೆ ಗ್ರಾಮೀಣ ಜೀವನವನ್ನು ಕಲಿಯುವಂತೆ ಮಾಡಿದೆ. ಚಿತ್ರ ತಂಡ ಚಿತ್ರೀಕರಣ ನಡೆಸಿರುವ ಕನಕಪುರ ಗ್ರಾಮೀಣ ಪ್ರದೇಶಕ್ಕೆ ಈ 'ಸಿಂಪಲ್ ಆಗ್ ಒಂದು ಲವ್ ಸ್ಟೋರಿ' ನಟಿ ಹೋಗಿ ಬಂದು ಮಾಡುತ್ತಿದ್ದಾರೆ. "ಸುಮನಾ ಬೆಂಗಳೂರಿನ ಹೊರವಲಯಗಳಲ್ಲಿ ಚಿತ್ರೀಕರಣಕ್ಕೆ ಕೆಲವು ಸೂಕ್ತ ಪ್ರದೇಶಗಳನ್ನು ಗುರುತಿಸಿದ್ದಾರೆ. ನನಗೆ ಗ್ರಾಮೀಣ ಜೀವನ ಹೊಸದಾದ್ದರಿಂದ ಅದನ್ನು ಬಹಳ ಸಂತಸದಿಂದ ಅನುಭವಿಸುತ್ತಿದ್ದೇನೆ. ಅಲ್ಲದೆ ನಾನು ಗಯ್ಯಾಳಿ ಪಾತ್ರ ವಹಿಸುತ್ತಿರುವುದರಿಂದ ಬಹಳ ವಿವರವಾಗಿ ಚಿತ್ರೀಕರಣಗೊಳ್ಳುತ್ತಿದೆ" ಎನ್ನುತ್ತಾರೆ ಶ್ವೇತಾ.

ಹಳ್ಳಿಯ ಮಹಿಳೆಯರ ದಿನಗೆಲಸಗಳನ್ನು ಕೂಡ ಶ್ವೇತಾ ಕಲಿಯುತ್ತಿದ್ದಾರಂತೆ. "ನಾನು ಹಳ್ಳಿಯ ಮಹಿಳೆಯರು ಮಾಡುವ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೇನೆ ಹಾಗೆಯೇ ಹಳ್ಳಿ ಭಾಷೆಯನ್ನು ಕಲಿಯಲು ನನಗೆ ಅಲ್ಲಿನ ಮಹಿಳೆಯರೆಲ್ಲಾ ಸಹಾಯ ಮಾಡುತ್ತಿದ್ದಾರೆ. ನಾನು ಅವರಲ್ಲಿ ಒಬ್ಬಳಾಗಿ ಬದುಕುವುದನ್ನು ಕಲಿತಿದ್ದೇನೆ" ಎನ್ನುವ ನಟಿ ಈ ಪಾತ್ರದಲ್ಲಿ ನನ್ನ ಗ್ಲ್ಯಾಮರ್ ಎಲ್ಲ ಕಾಣೆಯಾಗುತ್ತದೆ. ಬಹಳ ಸವಾಲಿನ ಕೆಲಸವೆಂದರೆ ಹಳ್ಳಿಯ ಶೈಲಿಯಲ್ಲಿ ಬೈಯ್ಯುವುದು. "ಗಯ್ಯಾಳಿಯಾಗಿ ಬಯ್ಯುವುದನ್ನು ಕೂಡ ಕಲಿತುಕೊಳ್ಳುತ್ತಿದ್ದೇನೆ" ಎನ್ನುತ್ತಾರೆ.

೩೫ ದಿನಗಳವರೆಗೆ ನಿರಂತರ ಚಿತ್ರೀಕರಣ ನಡೆಸಿ ಪೂರ್ಣಗೊಳಿಸಲು ಸುಮನ ನಿರ್ಧರಿಸಿದ್ದಾರೆ ಎನ್ನುತ್ತಾರೆ ಶ್ವೇತಾ. 

SCROLL FOR NEXT