ನಿಧಿ ಸುಬ್ಬಯ್ಯ 
ಸಿನಿಮಾ ಸುದ್ದಿ

ನಿಧಿ ಮಸ್ತಿ

ನಿಧಿ ಸುಬ್ಬಯ್ಯ, ಪ್ರತಿಭೆ ಹಾಗೂ ಚೆಲುವಿನ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಅನಘ್ರ್ಯ ನಿಧಿ ಎಂದು ನಂಬಲಾಗಿತ್ತು...

ನಿಧಿ ಸುಬ್ಬಯ್ಯ, ಪ್ರತಿಭೆ ಹಾಗೂ ಚೆಲುವಿನ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಅನಘ್ರ್ಯ ನಿಧಿ ಎಂದು ನಂಬಲಾಗಿತ್ತು.

ಅದಕ್ಕೆ ತಕ್ಕಂತೆ ಆಕೆ `ಪಂಚರಂಗಿ ಪಾಂವ್ ಪಾಂವ್' ಅನ್ನುತ್ತ ದಿಗಂತ್ ಜತೆ ಮಿಂಚಿದ್ದಳು. ನಂತರ ಸರಿಯಾಗಿ ಸಂಭಾವನೆ ಕೊಡದ ಕನ್ನಡ ನಿರ್ಮಾಪಕರ ಸಹವಾಸ ಸಾಕೆನಿಸಿಂಯೋ ಸೂಕ್ತ ಪಾತ್ರಗಳು ಸಿಗುತ್ತಿಲ್ಲ ಅನಿಸಿಯೋ, ಅಂತೂ ಬಾಲಿವುಡ್ ಹೋಗುತ್ತೇನೆಂದು ಆಕೆ ಹೇಳತೊಡಗಿದಳು. ನಂಬುವವರು ನಂಬಿದರು. ಕೈಗೆಟುಕದ ದ್ರಾಕ್ಷಿ ಹುಳಿ ಅನ್ನುತ್ತಾರಲ್ಲ, ಹಾಗೇ ಈಕೆಯ ಎತ್ತರಕ್ಕೆ ಸುದೀಪ್ ಹೊರತುಪಡಿಸಿ ಇನ್ನಾರೂ ಸರಿ ಹೊಂದೋಲ್ಲ ಎಂಬ ಕಂಪ್ಲೇಂಟುಗಳನ್ನು ಕೆಲ ನಿರ್ದೇಶಕರು ಉದುರಿಸಿದರು.

ಅವೆಲ್ಲ ಹಳೇ ಮಾತು. ನಂತರ ಆಕೆ ಅಕ್ಷಯ್ ಕುಮಾರ್ ಜೊತೆಗೆ `ಓ ಮೈ ಗಾಡ್' ಚಿತ್ರದಲ್ಲಿ ಕಾಣಿಸಿಕೊಂಡಳು. ನಿಧಿಯ ಮಾತು ನಿಜ ಅಂತ ನಂಬುವಂತಾಯಿತು. ಅದಾಗಿ ಎರಡು ವರ್ಷವಾಯಿತು. ಕನ್ನಡದಲ್ಲೂ ಯಾವುದೇ ಚಿತ್ರದಲ್ಲಿ ಆಕೆ ಕಾಣಿಸಲಿಲ್ಲ. ಈಗ ಮತ್ತೆ ಬಾಲಿವುಡ್ ಮಾತು. `ಗ್ರಾಂಡ್ ಮಸ್ತಿ 3' ಎಂಬ ಹಿಂದಿ ಚಿತ್ರದಲ್ಲಿ ತಾನು ನಟಿಸುತ್ತಿದ್ದೇನೆ ಎಂದು ನಿಧಿ ಹೇಳಿಕೊಂಡಿದ್ದಾರೆ.

ಇದು ಮಸ್ತಿ, ಗ್ರಾಂಡ್ ಮಸ್ತಿ ನಂತರದ ಸರಣಿಯ ಮೂರನೇ ಚಿತ್ರ. ನಿರ್ದೇಶಕ ಇಂದ್ರ ಕುಮಾರ್. ನಿಧಿ ಸಂತೋಷಪಡಲು ಕಾರಣವಿದೆ- ಆಕೆ ಇದರಲ್ಲಿ ರಿತೇಶ್ ದೇಶಮುಖ್‍ಗೆ ನಾಯಕಿ. ಚಿತ್ರೀಕರಣ ಆರಂಭವಾಗಿದೆ. ಕನ್ನಡದ ಪ್ರತಿಭೆಗಳು ಬೇರೆ ಭಾಷೆಗಳಿಗೆ ಹೋದರೆ ಪರವಾಗಿಲ್ಲ. ಆದರೆ ಇಲ್ಲೂ ಬಂದು ಮುಖ ಕಾಣಿಸಲಿ ಎಂಬುದು ನಮ್ಮ ಆಶಯ. ಆದರೆ ಇಲ್ಲಿನವರೇ ಅವಕಾಶ ನೀಡದಿದ್ದರೆ? ಕನ್ನಡದ ನಿರ್ಮಾಪಕರಿಗೆ ಹೊರಗಿನವರೇ ಬೇಕು. ಆಗ ನಮ್ಮ ಪ್ರತಿಭೆಗಳೂ ಇಲ್ಲಿಂದಲ್ಲಿಗೆ ಜಿಗಿಯುವುದು ಅನಿವಾರ್ಯವಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT