ಮ್ಯಾಗಿ ನೂಡಲ್ಸ್ ರಾಯಭಾರಿ ಮಾಧುರಿ ದೀಕ್ಷಿತ್ 
ಸಿನಿಮಾ ಸುದ್ದಿ

ಮ್ಯಾಗಿ ನೂಡಲ್ಸ್ ರಾಯಭಾರಿ ಮಾಧುರಿ ದೀಕ್ಷಿತ್ ಗೆ ನೋಟಿಸ್

ಬಾಲಿವುಡ್ ನಟಿ ಹಾಗು ನೃತ್ಯ ತಾರೆ ಮಾಧುರಿ ದೀಕ್ಷಿತ್ ಅವರಿಗೆ ಹರಿದ್ವಾರ ಆಹಾರ ಮತ್ತು ಡ್ರಗ್ ನಿಯಂತ್ರಣ ಮಂಡಲಿ ಮ್ಯಾಗಿ ನೂಡಲ್ಸ್ ಪ್ರಚಾರ ಮಾಡುತ್ತಿರುವುದಕ್ಕೆ

ಬಾಲಿವುಡ್ ನಟಿ ಹಾಗು ನೃತ್ಯ ತಾರೆ ಮಾಧುರಿ ದೀಕ್ಷಿತ್ ಅವರಿಗೆ ಹರಿದ್ವಾರ ಆಹಾರ ಮತ್ತು ಡ್ರಗ್ ನಿಯಂತ್ರಣ ಮಂಡಲಿ ಮ್ಯಾಗಿ ನೂಡಲ್ಸ್ ಪ್ರಚಾರ ಮಾಡುತ್ತಿರುವುದಕ್ಕೆ ಕಾನೂನು ನೋಟಿಸ್ ಜಾರಿ ಮಾಡಿದೆ.

ಉತ್ತರ ಪ್ರದೇಶದಲ್ಲಿ ನಡೆದ ಪರೀಕ್ಷೆಯೊಂದರಲ್ಲಿ ಮ್ಯಾಗಿ ನೂಡಲ್ಸ್ ನಲ್ಲಿ ಅಪಾಯಕಾರಿ ಮೋನೋಸೋಡಿಯಮ್ ಗ್ಲೂಟಮೇಟ್ (ಎಂ ಎಸ್ ಜಿ) ಅಂಶ ಹೆಚ್ಚು ಪ್ರಮಾಣದಲ್ಲಿ ಕಂಡುಬಂದದ್ದರಿಂದ ಆ ಉತ್ಪನ್ನದ ಘೋಷಣೆ "ರುಚಿಯೂ ಇದೆ ಆರೋಗ್ಯವು" ಎಂಬುದರ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

೧೫ ದಿನಗಳ ಒಳಗೆ ನಟಿ ಉತ್ತರಿಸದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದು ತಿಳಿದುಬಂದಿದೆ.

ಮ್ಯಾಗಿ ಆರೋಗ್ಯಕ್ಕೆ ಹೇಗೆ ಒಳ್ಳೆಯದು ಮತ್ತು ಇದಕ್ಕೆ ಸಮರ್ಥನೆ ಏನು ಎಂಬುದನ್ನು ನಟಿ ಉತ್ತರಿಸಬೇಕಾಗಬಹುದು.

ಈ ಅಪಾಯಕಾರಿ ವಸ್ತುಗಳು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ವಾಂತಿ, ತಲೆನೋವು, ಹೊಟ್ಟೆ ನೋವು ಮುಂತಾದ ರೋಗಗಳನ್ನು ತರಬಲ್ಲವು ಎಂದಿದ್ದಾರೆ ಆರೋಗ್ಯ ತಜ್ಞರು. ಇದನ್ನು ಅಲ್ಲಗೆಳೆದಿರುವ ಮ್ಯಾಗಿ ಉತ್ಪನ್ನ ಸಂಸ್ಥೆ ನೆಸ್ಲೆ, ನಾವು ಮ್ಯಾಗಿ ನೂಡಲ್ಸ್ ಗೆ ಎಂ ಎಸ್ ಜಿ ಸೇರಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

ಕ್ಷಿಪಣಿ ದಾಳಿ ಆರೋಪ: Iranಗೆ UAE ಶಾಕ್, ಎಲ್ಲಾ ವ್ಯಾಪಾರ-ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ..!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್'ಗೆ VIP ಟ್ರೀಟ್‌ಮೆಂಟ್?: ಕಾನೂನಿನ ಮುಂದೆ ಎಲ್ಲರೂ ಒಂದೇ, ಜೈಲಿನಲ್ಲಿ ಯಾರಿಗೂ ವಿಶೇಷ ಸೌಲಭ್ಯವಿಲ್ಲ; ಸರ್ಕಾರ ಸ್ಪಷ್ಟನೆ