ಅರ್ಜುನ್ ಜನ್ಯ ಅವರ ಜಾಗ್ವಾರ್ ಕಾರು 
ಸಿನಿಮಾ ಸುದ್ದಿ

ಜಾಗ್ವಾರ್ ಕಾರನ್ನು ನೊಂದಣಿ ಮಾಡಿಸದೆ ದಂಡ ಕಟ್ಟಿದ ಅರ್ಜುನ್ ಜನ್ಯ

ಜಾಗ್ವಾರ್ ಎಂಬ ಐಶಾರಾಮಿ ಕಾರು ಕೊಂಡು ಅದಕ್ಕೆ ರಸ್ತೆ ತೆರಿಗೆ ಕಟ್ಟದೆ, ನೊಂದಣಿ ಮಾಡಿಕೊಳ್ಳದೆ ಓಡಾಡಿಸುತ್ತಿದ್ದಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು...

ಬೆಂಗಳೂರು: ಜಾಗ್ವಾರ್ ಎಂಬ ಐಶಾರಾಮಿ ಕಾರು ಕೊಂಡು ಅದಕ್ಕೆ ರಸ್ತೆ ತೆರಿಗೆ ಕಟ್ಟದೆ, ನೊಂದಣಿ ಮಾಡಿಕೊಳ್ಳದೆ ಓಡಾಡಿಸುತ್ತಿದ್ದಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ದುಬಾರಿ ದಂಡ ಕಟ್ಟಿದ್ದಾರೆ.

ನೆನ್ನೆ ಗೊರಗುಂಟೆಪಾಳ್ಯದ ಬಳಿ ಜಾಗ್ವಾರ್ ಕಾರೊಂದನ್ನು ನಿಲ್ಲಿಸಲಾಗಿದೆ. ಅದರ ತಾತ್ಕಾಲಿಕ ನೊಂದಣಿ ಸಂಖ್ಯೆಯ ಅವಧಿ ಮುಗಿದಿದೆ. ಆದುದರಿಂದ ಕಾರಿನ ಸಾಮಾನ್ಯ ನೊಂದಣಿಗೆ ೬೫೦೦೦ ರೂ ದಂಡದೊಂದಿಗೆ ೧೦.೨೫ ಲಕ್ಷ ರೂ ತೆತ್ತಬೇಕಾಗಿ ಬಂದಿದೆ ಅರ್ಜುನ್ ಜನ್ಯ ಅವರಿಗೆ.

"ನಾನು ಜಾಗ್ವಾರ್ ಕಾರನ್ನು ಮೂರು ತಿಂಗಳ ಹಿಂದೆ ೫೫ ಲಕ್ಷಕ್ಕೆ ಕೊಂಡಿದ್ದೆ. ರಸ್ತೆ ತೆರಿಗೆ ಕಟ್ಟಲು ಅವರು ಒಂದು ತಿಂಗಳ ಸಮಯ ನೀಡುತ್ತಾರೆ.

"ನನಗೆ ನೊಂದಣಿಗೆ ಫ್ಯಾನ್ಸಿ ಸಂಖ್ಯೆ ಬೇಕಾಗಿತ್ತು. ಅದು ೫. ಆದರೆ ವಿವಿಧ ಆರ್ ಟಿ ಒ ಅಧಿಕಾರಿಗಳು ವಿವಿಧ ಬೆಲೆ ನಿಗದಿಪಡಿಸಿದ್ದರು. ಆದುದರಿಂದ ಗೊಂದಲವಾಗಿತ್ತು" ಎಂದು ಜನ್ಯ ಹೇಳಿದ್ದಾರೆ.

ದುಬಾರಿ ಕಾರು ಕೊಳ್ಳುವವರು ತಾತ್ಕಾಲಿಕ ನೊಂದಣಿ ಸಂಖ್ಯೆ ಉಳಿಸಿಕೊಂಡು ರಸ್ತೆ ತೆರಿಗೆಯನ್ನು ಕಟ್ಟದೆ ಇರುವುದು ಸಾಮಾನ್ಯವಾಗಿಬಿಟ್ಟಿದೆ ಎಂದು ತಿಳಿಸುವ ರಸ್ತೆ ಸಾರಿಗೆ ಅಧಿಕಾರಿ ರಾಮೇ ಗೌಡ, ಈ ನಿಟ್ಟಿನಲ್ಲಿ ವಿಶೇಶ ತಂಡವನ್ನು ರಚಿಸಿ ೧.೯೭ ಲಕ್ಷ ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಅವುಗಳಲ್ಲಿ ೩% ಐಶಾರಾಮಿ ಕಾರುಗಳು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!