ಸಿನಿಮಾ ಸುದ್ದಿ

'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ತಡೆ

Lingaraj Badiger

ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ 'ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಿಡುಗಡೆಗೆ ತಡೆ ನಗರ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ.

ಚಿತ್ರಕ್ಕೆ ತಡೆ ಕೋರಿ ತಮಿಳು ನಿರ್ಮಾಪಕ ರಾಜು ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಚಿತ್ರ ಬಿಡುಗಡೆಗೆ ತಡೆ ನೀಡಿ ಆದೇಶ ಹೊರಡಿಸಿದೆ. ಚಿತ್ರ ತಂಡ ಈ ತಿಂಗಳ 19ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.

ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಕಥೆಯ ಹಕ್ಕು ತಮಗೆ ಸೇರಿದ್ದು, ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಅವರಿಂದ ತಾನು ಆ ಹಕ್ಕು ಪಡೆದುಕೊಂಡಿದ್ದೇನೆ. ಆದರೆ ವರ್ಮಾ ಅವರು ತಮ್ಮ ಅನುಮತಿ ಪಡೆಯದೆ ಚಿತ್ರ ನಿರ್ಮಿಸಿದ್ದಾರೆ ಎಂದು ರಾಜು ಬೆಂಗಳೂರು ನಗರ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದರು.

SCROLL FOR NEXT