ಸಿನಿಮಾ ಸುದ್ದಿ

ಆಸ್ಕರ್ ರೇಸ್ ನಲ್ಲಿರುವ ಕನ್ನಡ ಸಿನೆಮಾಗೆ ಸೆನ್ಸಾರ್ ಕಟ್

Guruprasad Narayana

ಬೆಂಗಳೂರು: ಆಸ್ಕರ್ ಸ್ಪರ್ಧೆಗೆ 'ಲ್ಯಾಟರಲ್ ಪ್ರವೇಶ' ಪಡೆದಿರುವ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿರುವ 'ಕೇರ್ ಆಫ್ ಫುಟ್ಪಾತ್-೨' ಗೆ ಭಾರತೀಯ ಸೆನ್ಸಾರ್ ಮಂಡಲಿ ಹಲವಾರು ಕತ್ತರಿ ಹಾಕಿದೆ. ಭಾರತದಲ್ಲಿ ಬಿಡುಗಡೆಗೂ ಮುಂಚಿತವಾಗಿ ಸೂಚಿಸಿರುವ ಎಲ್ಲ ಭಾಗಗಳನ್ನು ತೆಗೆದು ಹಾಕುವಂತೆ ಚಿತ್ರತಂಡಕ್ಕೆ ಸೂಚಿಸಿದೆ.

ಕಿಶನ್ ಶ್ರೀಕಾಂತ್ ನಿರ್ದೇಶಿಸಿರುವ ಈ ಸಿನೆಮಾ ಮಕ್ಕಳ ಅಪರಾಧಗಳ ಸುತ್ತ ಸುತ್ತುವ ಕಥೆ. ಈ ವಿಷಯ ಸೆನ್ಸಾರ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದೆ. ಸೆನ್ಸಾರ್ ಮಂಡಲಿ ಪ್ರಾದೇಶಿಕ ಅಧಿಕಾರಿ ನಾಗೇಂದ್ರ ಸ್ವಾಮಿಯವರ ಪ್ರಕಾರ, ಈ ಕಥೆ ೨೦೧೨ರ ದೆಹಲಿ ರೇಪ್ ಪ್ರಕರಣವನ್ನು ಹೋಲುತ್ತದೆ. "ಈ ದುರಂತ ಪ್ರಕರಣವನ್ನು ಹೋಲುವ ಕಥೆ, ಕೊನೆಗೆ ಇದು ಸಣ್ಣ ತಪ್ಪು ಅಪರಾಧವಲ್ಲ ಎಂದು ಹೇಳುವ ಮಟ್ಟಕ್ಕೆ ಬೆಳೆಯುತ್ತದೆ" ಎಂದು ಅವರು ವಿವರಿಸುತ್ತಾರೆ.

ರೇಪ್ ಪ್ರಕರಣ ಮತ್ತು ನ್ಯಾಯಮೂರ್ತಿ ವರ್ಮಾ ವರದಿಗೆ ಸಂಬಂಧಸಿದ ಸಂಪೂರ್ಣ ನಿರೂಪಣೆಯನ್ನು ಅಳಿಸಿಹಾಕುವಂತೆ ಸಮಿತಿ ಸೂಚಿಸಿದೆ. "ನಿರ್ಮಾಪಕರು ಈ ಭಾಗಗಳಿಗೆ ಕತ್ತರಿ ಹಾಕಲು ಒಪ್ಪಿದ್ದಾರೆ. ಇದಲ್ಲದೆ ಸುಮಾರು ೭-೮ ಕಡೆ ಬದಲಾವಣೆ ಸೂಚಿಸಲಾಗಿದೆ" ಎನ್ನುತ್ತಾರೆ ನಾಗೇಂದ್ರ.

ಇದರ ನಂತರ 'ಕೇರ್ ಆಫ್ ಫುಟ್ಪಾತ್-೨' ಯು/ಎ ಪ್ರಮಾಣ ಪತ್ರ ಸಿಗಲಿದೆ. ಸಿನೆಮಾದ ಎರಡು ಆವೃತ್ತಿಗಳು ಬಿಡುಗಡೆಯಾಗಲಿವೆ. ಒಂದು ಭಾರತದ ಬಿಡುಗಡೆಗೆ. ಮತ್ತೊಂದು ಆಸ್ಕರ್ ಅಕಾಡೆಮಿ ಅನುಮೋದನೆ ನೀಡಿರುವ ಆವೃತ್ತಿ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ.

ಇಶಾ ಡಿಯೋಲ್, ಕಾರ್ತಿಕ್ ಜಯರಾಂ,  ಕಿಶನ್ ಸಿನೆಮಾದಲ್ಲಿ ನಟಿಸಿದ್ದಾರೆ.

SCROLL FOR NEXT