ಜೆಸ್ಸಿ ಸಿನೆಮಾದಲ್ಲಿ ಧನಂಜಯ್ ಮತ್ತು ಪರುಲ್ ಯಾದವ್ 
ಸಿನಿಮಾ ಸುದ್ದಿ

'ಜೆಸ್ಸಿ' ಪ್ರಿಯತಮೆಯ ಮನದಾಳದ ಮಾತು

ನಿರ್ದೇಶಕ ಪವನ್ ಒಡೆಯರ್ ಮೇಲೆ ನಟಿ ಪರುಲ್ ಯಾದವ್ ಪ್ರಶಂಸೆಯ ಮಳೆಗೆರೆದಿದ್ದಾರೆ. ಕಾರಣ ನಟಿಗೆ ಪವನ್ ಒಡೆಯರ್ ನಿರ್ದೇಶಿಸಿರುವ 'ಜೆಸ್ಸಿ' ಸಿನೆಮಾ ಮೊದಲ ದೊಡ್ಡ ರೋಮ್ಯಾಂಟಿಕ್ ಸಿನೆಮಾ

ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ಮೇಲೆ ನಟಿ ಪರುಲ್ ಯಾದವ್ ಪ್ರಶಂಸೆಯ ಮಳೆಗೆರೆದಿದ್ದಾರೆ. ಕಾರಣ ನಟಿಗೆ ಪವನ್ ಒಡೆಯರ್ ನಿರ್ದೇಶಿಸಿರುವ 'ಜೆಸ್ಸಿ' ಸಿನೆಮಾ ಮೊದಲ ದೊಡ್ಡ ರೋಮ್ಯಾಂಟಿಕ್ ಸಿನೆಮಾ ಅಂತೆ. "ನಾನು ರೊಮ್ಯಾಂಟಿ ಸಿನೆಮಾಗಳ ಹುಚ್ಚು ಪ್ರೇಮಿ. ಡಿ ಡಿ ಎಲ್ ಜೆ (ದಿಲ್ವಾನೆ ದುಲ್ಹನಿಯಾ ಲೇ ಜಾಯೇಂಗೆ), ಹಮ್ ದಿಲ್ ದೇ ಚುಕೆ ಸನಮ್, ಮೈನೆ ಪ್ಯಾರ್ ಕಿಯಾ ಇಂತಹ ಸಿನೆಮಾಗಳನ್ನು ನೋಡಿ ಬೆಳೆದವಳು. ಇಂತಹ ಸಿನೆಮಾಗಳಲ್ಲಿನ ನಾಯಕಿಯ ಪಾತ್ರಗಳನ್ನು ನನಗೆ ಯಾರೂ ನೀಡುತ್ತಿಲ್ಲ ಎಂದು ಬೇಸರದಿಂದಿದ್ದೆ. ಇಂತಹ ಸಮಯದಲ್ಲಿ ಜೆಸ್ಸಿಯಲ್ಲಿ ನಟಿಸುವ ಅವಕಾಶ ಬಂತು. ನನಗೆ ಮೊದಲು ದೊಡ್ಡ ಹಿಟ್ ನೀಡಿದವರು ಪವನ್. ಗೋವಿಂದಾಯ ನಮಃದ ಮೂಲಕ" ಎನ್ನುತ್ತಾರೆ ನಟಿ.

'ಜೆಸ್ಸಿ'ಯ ಕೊನೆಯ ಹಾಡಿನ ಚಿತ್ರೀಕರಣವನ್ನು ಪರುಲ್ ಊಟಿಯಲ್ಲಿ ಇತ್ತೀಚೆಗಷ್ಟೇ ಮುಗಿಸಿದ್ದಾರೆ. "ಇಡಿ ಚಿತ್ರೀಕರಣದ ಸಮಯ ಉತ್ಸಾಹದಿಂದ ತುಂಬಿತ್ತು. ಪ್ರೇಮ ಕಥೆ, ಒಳ್ಳೆಯ ಹಾಡುಗಳಿಂದ ಕೂಡಿದ ಸಿನೆಮಾ ಇದು. ನಿರ್ದೇಶಕರ ನಿಗದಿಯಂತೆ ಚಿತ್ರೀಕರಣ ಮುಗಿದಿದೆ" ಎನ್ನುವ ನಟಿ "ನಾನು ಪವನ್ ಜೊತೆ ಜಗಳವಾಡಬೇಕಾಗಿ ಬಂತು ಏಕೆಂದರೆ ಅವರು ನನಗೆ ವಿರಮಿಸಲು ವಕಾಶ ನೀಡಲೇ ಇಲ್ಲ. ಅಲ್ಲದೆ ಈ ಮಧ್ಯೆ ವಾಸ್ತು ಪ್ರಕಾರ, ಆಟಗಾರ ಮತ್ತು ಕಿಲ್ಲಿಂಗ್ ವೀರಪ್ಪನ್ ಸಿನೆಮಾಗಳಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಕಿಲ್ಲಿಂಗ್ ವೀರಪ್ಪನ್ ಕೂಡ ಬಿಡುಗಡೆಗೆ ಸಿದ್ಧವಿದೆ. ನನಗೆ ಇದು ಅದ್ಭುತ ವರ್ಷವಾಗಿತ್ತು " ಎನ್ನುತ್ತಾರೆ ಪರುಲ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?