ರಂಗಿತರಂಗ ಭಿತ್ತಿಚಿತ್ರ 
ಸಿನಿಮಾ ಸುದ್ದಿ

'ರಂಗಿತರಂಗ'ಕ್ಕೆ ಮತ್ತೆ ಸೆನ್ಸಾರ್ ಭೂತ

ರಂಗಿತರಂಗ ಸಿನೆಮಾದಿಂದ ಸೆನ್ಸಾರ್ ಮಂಡಲಿಯ ಸೂಚನೆಯಂತೆ ಕತ್ತರಿ ಹಾಕಿದ್ದ ದೃಶ್ಯಗಳನ್ನು ಸಿನೆಮಾ ತಂಡ ಅಂತರ್ಜಾಲದಲ್ಲಿ ಬಿಡುಗಡೆ ಮಾಡಿ ಮಂಡಲಿಯ ಕೆಂಗಣ್ಣಿಗೆ

ಬೆಂಗಳೂರು: ರಂಗಿತರಂಗ ಸಿನೆಮಾದಿಂದ ಸೆನ್ಸಾರ್ ಮಂಡಲಿಯ ಸೂಚನೆಯಂತೆ ಕತ್ತರಿ ಹಾಕಿದ್ದ ದೃಶ್ಯಗಳನ್ನು ಸಿನೆಮಾ ತಂಡ ಅಂತರ್ಜಾಲದಲ್ಲಿ ಬಿಡುಗಡೆ ಮಾಡಿ ಮಂಡಲಿಯ ಕೆಂಗಣ್ಣಿಗೆ ಗುರಿಯಾಗಿದೆ. ಈ ದೃಶ್ಯಗಳನ್ನು ಖಾಸಗಿ ವಾಹಿನಿಯಲ್ಲೂ ತೋರಿಸಿದ್ದು, ಇದು ಕೇಬಲ್ ವಾಹಿನಿ ನೆಟ್ವರ್ಕ್ ಕಾಯ್ದೆಗೆ ವಿರುದ್ಧ ಎಂದು ಸೆನ್ಸಾರ್ ಮಂಡಲಿಯ ಅಧಿಕಾರಿ ನಾಗೇಂದ್ರ ಸ್ವಾಮಿ ಗುಡುಗಿದ್ದಾರೆ.

"ಅವರು ಮೊದಲು ಸೆನ್ಸಾರ್ ಮಂಡಲಿಗೆ ಸಿನೆಮಾ ತೋರಿಸಿದಾಗ ಮೂರು ಘಂಟೆಯ ಅವಧಿಯವರೆಗಿತ್ತು. ಅವುಗಳಲ್ಲಿ ಕೆಲವು ದೃಶ್ಯಗಳು ಚಲನಚಿತ್ರಕ್ಕೆ ಪೂರಕವಾಗಿರಲ್ಲಿ. ಆದುದರಿಂದ ಸಿನೆಮಾ ತಂಡಕ್ಕೆ ೩೫ ರಿಂದ ೪೦ ನಿಮಿಷ ಕಟ್ ಮಾಡುವಂತೆ ತಿಳಿಸಿದೆ. ನಂತರ ನಿರ್ದೇಶಕ ೨೯ ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕಲು ಒಪ್ಪಿಕೊಂಡರು" ಎಂದು ನಾಗೇಂದ್ರ ಸ್ವಾಮಿ ತಿಳಿಸಿದ್ದಾರೆ.

ಆ ಕಟ್ ಗಳು ನಿರ್ದೇಶಕ ಸ್ವ-ಇಚ್ಛೆಯಿಂದಲೇ ಮಾಡಿದ್ದು ಎಂದು ವಿವರಿಸುವ ಸ್ವಾಮಿ "ಆದರೆ ಕತ್ತರಿಸಿದ ದೃಶ್ಯಗಳನ್ನು ಅಂತರ್ಜಾಲದಲ್ಲಿ ಅಥವಾ ಟಿವಿಯಲ್ಲಿ ತೋರಿಸುವುದು ಸರಿಯಲ್ಲ. ಏಕೆಂದರೆ ಆ ದೃಶಗಳಿಗೆ ಸೆನ್ಸಾರ್ ಆಗಿಲ್ಲ" ಎನ್ನುತ್ತಾರೆ.

"ಸೆನ್ಸಾರ್ ಕಟ್ ಆಗಲೀ ಸ್ವ-ಇಚ್ಛೆಯ ಕಟ್ ಆಗಲೀ, ಆ ದೃಶ್ಯಗಳನ್ನು ತೋರಿಸುವುದಿಲ್ಲ ಎಂದು ಅವರು ಅಫಿಡವಿಟ್ ನೀಡಿರುತ್ತಾರೆ. ಆ ಎಲ್ಲಾ ತೆಗೆದು ಹಾಕಿದ ದೃಶ್ಯಗಳು ಸೆನ್ಸಾರ್ ಮಂಡಲಿಯ ಹಕ್ಕು. ಆದುದರಿಂದ ಚಿತ್ರತಂಡ ಒಪ್ಪಂದಕ್ಕೆ ವಿರುದ್ಧವಾದ ನಡೆ ಇಟ್ಟಿದೆ" ಎಂದು ಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!