ಶರಣ್ ಅಭಿನಯದ 'ಬುಲೆಟ್ ಬಸ್ಯಾ' ಚಿತ್ರದ ನಂತರ ನಟಿ ಹರಿಪ್ರಿಯಾ ಈಗೇನು ಮಾಡ್ತಿದ್ದಾರೆ? ಸದ್ಯಕ್ಕೆ ಹೊಸ ಸಿನಿಮಾಗೆ ಹರಿಪ್ರಿಯಾ ಕಮಿಟ್ ಆಗಿದ್ದಾರೆ. ಚಿತ್ರ ಸಾಹಿತಿ ಹೃದಯಶಿವ ನಿರ್ದೇಶನದ 'ಮೊದಲ ಮಳೆ' ಚಿತ್ರಕ್ಕೆ ಹರಿಪ್ರಿಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ಹೃದಯ ಶಿವ ಅವರ ಮೊದಲ ನಿರ್ದೇಶನದ ಸಿನಿಮಾ ಎಂಬುದು ಎಲ್ಲರಿಗೂ ಗೊತ್ತಿರೋ ಸಂಗತಿ.
ನೆನಪಿರಲಿ ಪ್ರೇಮ್ ಈ ಚಿತ್ರದ ನಾಯಕ. ಇದೇ ತಿಂಗಳು ಕೊನೆಯಲ್ಲಿ ಚಿತ್ರೀಕರಣ ನಡೆಯಲಿದೆ. 'ಚಿತ್ರಕ್ಕೆ ಪ್ರೇಮ್ ನಾಯಕನಾಗಿ ಆಂಯ್ಕೆಯಾದ ಮೇಲೆ ನಾಯಕಿ ಪಾತ್ರಕ್ಕಾಗಿ ಹಲವು ನಟಿಯರನ್ನು ನೋಡಿದೆ. ಯಾರೂ ಹೊಂದಾಣಿಕೆಯಾಗಲಿಲ್ಲ. ಈಗ ನಟಿ ಹರಿಪ್ರಿಯಾ ಕಥೆಗೆ ಸೂಕ್ತವಾಗುವಂಥ ನಟಿ ಅನಿಸಿತು. ಹೀಗಾಗಿ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡೆ' ಅಂತಾರೆ ಹೃದಯಶಿವ.
ಕನ್ನಡದಿಂದಲೇ ನಟನೆ ಆರಂಭಿಸಿದ್ದರೂ ತೆಲುಗು, ತಮಿಳಿನತ್ತ ಮುಖ ಮಾಡಿದರು. ಈ ಎರಡೂ ಭಾಷೆಯಲ್ಲಿ ಕನ್ನಡಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹರಿಪ್ರಿಯಾ, ತುಂಬಾ ಗ್ಯಾಪ್ ನಂತರ 'ರನ್ನ', 'ಬುಲೆಟ್ ಬಸ್ಯಾ'ಗಳಲ್ಲಿ ಕಾಣಿಸಿಕೊಂಡರು. ರಕ್ಷಿತ್ ಶೆಟ್ಟಿ ಜತೆಗೆ 'ರಿಕ್ಕಿ' ಚಿತ್ರದಲ್ಲೂ ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಇನ್ನಷ್ಟೇ ತೆರೆ ಕಾಣಬೇಕಿದೆ.