ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡಾನ್ಸಿಂಗ್ ಸ್ಟಾರ್ ಜೂನಿಯರ್ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನಟಿ ರಮ್ಯ ತೀರ್ಪುಗಾರರಾಗಿ ಬರಲಿದ್ದಾರೆ.
ರವಿಚಂದ್ರನ್ ಹಾಗೂ ಮಯೂರಿ ಅವರೊಂದಿಗೆ ತೀರ್ಪುಗಾರರಾಗಿರುವ ಪ್ರಿಯಾಮಣಿ ಅಮೆರಿಕಾಗೆ ತೆರಳಿರುವುದರಿಂದ, ಆ ಸ್ಥಾನಕ್ಕೆ ರಮ್ಯ ಬರಲಿದ್ದಾರೆ. ಕಲರ್ಸ್ ಕನ್ನಡದ ಪ್ರೋಗ್ರಾಮಿಂಗ್ ಮುಖ್ಯಸ್ಥರಾಗಿರುವ ಪರಮೇಶ್ ಗುಂಡ್ಕಲ್ ಪ್ರಿಯಾಮಣಿ ಅವರ ಬದಲಿಗೆ ಮತ್ತೋರ್ವ ಸೂಕ್ತ ವ್ಯಕ್ತಿಯನ್ನು ಹುಡುಕುತ್ತಿದ್ದು ರಮ್ಯ ಅವರೇ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.
ತೀರ್ಪುಗಾರರಾಗಿ ಬರಲು ರಮ್ಯ ಸಹ ಒಪ್ಪಿಗೆ ಸೂಚಿಸಿದ್ದು, ಈಗಾಗಲೇ ಒಂದು ಸಂಚಿಕೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಈ ಸಂಚಿಕೆ ಶನಿವಾರದಂದು ಪ್ರಸಾರವಾಗಲಿದ್ದು ದೀರ್ಘಕಾಲದ ನಂತರ ರಮ್ಯ ಅವರನ್ನು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.