ಮಲಯಾಳಂ ಮೆಗಾಸ್ಟಾರ್ ಮಮ್ಮೂಟಿಯ ಕಣ್ಣೊಳಗೆ ಈಗ ಫೇರ್‌ನೆಸ್ ಸೋಪಿನ ನೊರೆ ಸೇರ್ಕೊಂಡಿದೆ!
ಫೇರ್‌ನೆಸ್ ಕ್ರೀಮ್ ಗಳ ಜಾಹೀರಾತೆಲ್ಲ ಬರೀ ಬೊಗಳೆ ಎಂದು ಕಂಗನಾ ಹೇಳಿದ ಬೆನ್ನಲ್ಲೇ ಕೇರಳದಲ್ಲೊಂದು ವಿಚಿತ್ರ ಕೇಸ್ ಬಿದ್ದಿದೆ. ಕೆ. ಚಾತು ಎಂಬಾತ, 'ಮಮ್ಮೂಟಿಯ ಇಂದುಲೇಖ ವೈಟ್‍ಸೋಪ್ ಜಾಹೀರಾತನ್ನು ನೋಡಿ ಒಂದು ವರುಷದಿಂದ ಆ ಸೋಪನ್ನು ಹಚ್ಚುತ್ತಲೇ ಇದ್ದೀನಿ. ಇನ್ನೂ ಬೆಳ್ಳಗಾಗಿಲ್ಲ. ನೈತಿಕತೆ ಇಲ್ಲದ ಕೆಲವು ಸೆಲೆಬ್ರಿಟಿಗಳು ಜಾಹೀರಾತು ನೀಡ್ತಿದ್ದಾರೆ' ಎಂದು ಕೋರ್ಟ್ ಮೆಟ್ಟಿಲೇರಿದ್ದಾನೆ.
ಇದಕ್ಕೆ ಮಮ್ಮೂಟಿ ಪರ ವಕೀಲ ವಾದಿಸಿದ್ದೇನು ಗೊತ್ತೇ? 'ಮಮ್ಮೂಟಿ ಒಬ್ಬರು ನಟ. ಜಾಹೀರಾತಿನ ಸ್ಕ್ರಿಪ್ಟ್ ರೈಟರ್ ಬರೆದುಕೊಟ್ಟಿದ್ದಾನೆ, ಮಮ್ಮೂಟಿ ನಟಿಸುತ್ತಾ ಅದನ್ನು ಓದಿದ್ದಾರಷ್ಟೇ. ಇದು ಕೇವಲ ಪ್ರೋಫೆಷನ್'. ಅಕ್ಟೋಬರ್ 12ಕ್ಕೆ ಮುಂದಿನ ವಿಚಾರಣೆಯಿದೆ. ಫೇರ್‌ನೆಸ್ ಕ್ರೀಮುಗಳಿಂದ ಶಾರೂಖ್‍ಖಾನ್, ಕತ್ರಿನಾ ಕೈಫ್, ಸೋನಂ ಕಪೂರ್, ಐಶ್ವರ್ಯಾ ರೈ ಅವರೆಲ್ಲ ಕಿರಿಕಿರಿ ಅನುಭವಿಸಿದ ಮೇಲೆ ಈಗ ಮಮ್ಮೂಟಿಯ ಸರದಿ.