ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ರಘುರಾಮ್ ನಿರ್ದೇಶನದಲ್ಲಿ ಅಭಿನಯಿಸಲಿದ್ದಾರೆ. 'ನಮಗಾಗಿ' ಸಿನಿಮಾದ ನಿರ್ದೇಶನ ಮಾಡುತ್ತಿರುವ ನಿರ್ದೇಶಕ ರಘುರಾಮ್ ತಮ್ಮ ಮುಂದಿನ ಚಿತ್ರಕ್ಕಾಗಿ ಗುರುನಂದನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಚಿತ್ರ ಕತೆ ಕೇಳಿರುವ ಗುರುನಂದನ್ ಸಹ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರಂತೆ, ನಿರ್ಮಾಪಕರು ಯಾರೆಂಬುದು ಅಂತಿಮವಾದ ನಂತರ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದೇವೆ ಎಂದು ರಘುರಾಮ್ ತಿಳಿಸಿದ್ದಾರೆ. ಇನ್ನು ಗುರುನಂದನ್ ಸ್ಮೈಲ್ ಪ್ಲೀಸ್ ಸಿನಿಮಾ ಚಿತ್ರೀಕರಣಾದಲ್ಲಿದ್ದು, ಈ ಚಿತ್ರದ ನಂತರ ಫಸ್ಟ್ ರ್ಯಾಂಕ್ ರಾಜು ನಿರ್ದೇಶಕ ನರೇಶ್ ಕುಮಾರ್ ನಿರ್ದೇಶನದಲ್ಲಿ ಮತ್ತೊಂದು ಚಿತ್ರ ಮಾಡಲಿದ್ದಾರೆ.
ರಘುರಾಮ್ ನಿರ್ದೇಶನದ ಚಿತ್ರ ತಾಯಿ-ಮಗನ ಸೆಂಟಿಮೆಂತ್ ನ ನೈಜ ಘಟನೆಯಾಧಾರಿತ ಚಿತ್ರವಾಗಿರಲಿದ್ದು, ಸ್ವಿಜರ್ಲ್ಯಾಂಡ್, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿಯಲ್ಲಿ ಚಿತ್ರೀಕರಣ ನಡೆಯಲಿದೆ.