'ಜಾಗ್ವಾರ್' ಸಿನೆಮಾದಲ್ಲಿ ನಿಖಿಲ್ 
ಸಿನಿಮಾ ಸುದ್ದಿ

ಯುಗಾದಿಗೆ 'ಜಾಗ್ವಾರ್' ಮೋಶನ್ ಪೋಸ್ಟರ್ ಬಿಡುಗಡೆ

ಏಪ್ರಿಲ್ ೧೧ ರಿಂದ ಮುಂದಿನ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿರುವ ನಿಖಿಲ್ ಕುಮಾರ್ ನಟನೆಯ 'ಜಾಗ್ವಾರ್' ಚಿತ್ರತಂಡ ಯುಗಾದಿಗೆ ಮೋಶನ್ ಪೋಸ್ಟರ್ ಬಿಡುಗಡೆ ಮಾಡಲಿದೆಯಂತೆ.

ಬೆಂಗಳೂರು: ಏಪ್ರಿಲ್ ೧೧ ರಿಂದ ಮುಂದಿನ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿರುವ ನಿಖಿಲ್ ಕುಮಾರ್ ನಟನೆಯ 'ಜಾಗ್ವಾರ್' ಚಿತ್ರತಂಡ ಯುಗಾದಿಗೆ ಮೋಶನ್ ಪೋಸ್ಟರ್ ಬಿಡುಗಡೆ ಮಾಡಲಿದೆಯಂತೆ. ವರದಿಗಳ ಪ್ರಕಾರ ಸಿನೆಮಾದಲ್ಲಿ ನಟನ ಮತ್ತೊಂದು ಛಾಯೆ ಈ ಪೋಸ್ಟರ್ ನಲ್ಲಿ ಕಾಣಿಸಲಿದೆಯಂತೆ.

ಇದರ ಬಗ್ಗೆ ವಿವರಿಸುವ ನಟ "ಶೀಘ್ರದಲ್ಲೇ ಫೈಟಿಂಗ್ ಚಿತ್ರೀಕರಣ ಪ್ರಾರಂಭವಾಗಲಿದೆ. ಅದಕ್ಕಾಗಿ 'ಜಾಗ್ವಾರ್' ಲುಕ್ ಹೊಂದಬೇಕಾಗುತ್ತಿದೆ. ಇಂದಿನ ತಂತ್ರಜ್ಞಾನದಲ್ಲಿ ಯಾರಾದರೂ ಅದನ್ನು ಕ್ಲಿಕಿಸಿ, ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದು ಸುಲಭ. ಅದಕ್ಕಾಗಿ ನಾವೇ ಅಧಿಕೃತವಾಗಿ ಈ ನೋಟವನ್ನು ಬಿಡುಗಡೆ ಮಾಡಲು ಸಿದ್ದರಾಗಿದ್ದೇವೆ" ಎನ್ನುತ್ತಾರೆ ನಿಖಿಲ್.

ಪಾತ್ರದ ಬಗ್ಗೆ ಹೆಚ್ಚೇನು ಗುಟ್ಟು ಬಿಟ್ಟುಕೊಡದ ನಿಖಿಲ್ "ಒಂದು ಛಾಯೆಯಲ್ಲಿ ನಾನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದರೆ ಮತ್ತೊಂದು ಶೇಡ್ ನಲ್ಲಿ ಯಾರೂ ಗುರುತಿಸದಂತ ಲುಕ್ ನಲ್ಲಿರುತ್ತೇನೆ. ಅವನು ಸೂಪರ್ ಹೀರೋ ಅಲ್ಲ, ನೈಜತೆಗೆ ಹತ್ತಿರವಾದವನೇ" ಎಂದು ತಿಳಿಸುತ್ತಾರೆ ನಿಖಿಲ್.

ತಮ್ಮ ತಾಯಿಯ ಆಸೆಯನ್ನು ಪೂರೈಸುತ್ತಿರುವುದಾಗಿ ತಮಾಷೆ ಮಾಡುವ ನಿಖಿಲ್ "ನಾನು ವೈದ್ಯ ಅಥವಾ ಎಂಜಿನಿಯರ್ ಆಗಬೇಕೆಂಬ ಕನಸು ಕಂಡಿದ್ದರು ನನ್ನ ತಾಯಿ. ಈಗ ಅಂತಹ ಪಾತ್ರ ಮಾಡಿ ಅವರ ಆಸೆ ಪೂರೈಸುತ್ತಿದ್ದೇನೆ. ಎಲ್ಲ ಪಾತ್ರಗಳನ್ನು ಮಾಡಬಹುದಾದ ಅದೃಷ್ಟವಂತರು ನಾವು ಎಂದು ಅವರಿಗೆ ಹೇಳುತ್ತಿರುತ್ತೇನೆ" ಎಂದು ನಗುತ್ತಾರೆ.

ಈ ಮಧ್ಯೆ ನಟನ ಪೋಷಕ ಪಾತ್ರಕ್ಕೆ ಶರತ್ ಕುಮಾರ್ ಮತ್ತು ಮೀನಾ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!