'ಬ್ಯುಸಿನೆಸ್' ಚಿತ್ರದ ಸಹನಟರ ಜೊತೆ ಫೋಟೋ ಶೂಟ್ ನಲ್ಲಿ ಮೂಗೂರು ಸುಂದರ್ 
ಸಿನಿಮಾ ಸುದ್ದಿ

'ಬ್ಯುಸಿನೆಸ್' ನಲ್ಲಿ ಪಾತ್ರ ಮಾಡಲಿರುವ ಮೂಗೂರು ಸುಂದರ್

'ಬ್ಯುಸಿನೆಸ್' ಚಿತ್ರದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಹಿಂದಿರುಗಲು ಮೂಗೂರು ಸುಂದರ್ ಸಿದ್ಧರಾಗಿದ್ದಾರೆ. ಚೊಚ್ಚಲ ಚಿತ್ರ ನಿರ್ದೇಶಿಸುತ್ತಿರುವ ಸತೀಶ್ ಕೆ ಎಂ ದಕ್ಷಿಣ ಭಾರತದ ಖ್ಯಾತ ನೃತ್ಯನಿರ್ದೇಶಕನನ್ನು

ಬೆಂಗಳೂರು: 'ಬ್ಯುಸಿನೆಸ್' ಚಿತ್ರದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಹಿಂದಿರುಗಲು ಮೂಗೂರು ಸುಂದರ್ ಸಿದ್ಧರಾಗಿದ್ದಾರೆ. ಚೊಚ್ಚಲ ಚಿತ್ರ ನಿರ್ದೇಶಿಸುತ್ತಿರುವ ಸತೀಶ್ ಕೆ ಎಂ ದಕ್ಷಿಣ ಭಾರತದ ಖ್ಯಾತ ನೃತ್ಯನಿರ್ದೇಶಕನನ್ನು ಖೈದಿಯ ಪಾತ್ರಕ್ಕೆ ಒಪ್ಪಿಸಲು ಯಶಸ್ವಿಯಾಗಿದ್ದಾರೆ.

ಸಿನೆಮಾದ ನಾಯಕ ನಟರೊಂದಿಗೆ ಮೂಗೂರು ಸುಂದರ್ ಮಂಗಳವಾರ ಫೋಟೋ ಶೂಟ್ ನಲ್ಲಿ ಭಾಗವಹಿಸಿದ್ದಾರೆ.

"ಇದು ಅವರ ಆರನೇ ಕನ್ನಡ ಚಿತ್ರ. ಐದು ವರ್ಷದ ಹಿಂದೆ ಅವರು ಕನ್ನಡದಲ್ಲಿ ನಟಿಸಿದ್ದರು. ಅವರು ನಮಗೆ ಗೊತ್ತಿದ್ದರಿಂದ ಅವರು ಪಾತ್ರವನ್ನು ಒಪ್ಪಿಕೊಂಡರು ಮತ್ತು ಆ ಪಾತ್ರ ಅವರಿಗೆ ಬಹಳ ಇಷ್ಟವಾಗಿದೆ" ಎನ್ನುತ್ತಾರೆ ಸತೀಶ್.

ಅಲ್ಲದೆ ಈ ಸಿನೆಮಾಗೆ ನೃತ್ಯ ನಿರ್ದೇಶನ ಮಾಡಲು ಕೂಡ ಮೂಗೂರು ಸುಂದರ್ ಅವರನ್ನು ಕೇಳಿಕೊಂಡಿದ್ದಾರಂತೆ ಆದರೆ ಅವರಿನ್ನೂ ಧೃಢೀಕರಿಸಿಲ್ಲ. ಈಮಧ್ಯ ಮೂಗೂರ್ ಅವರ ಪುತ್ರ ಖ್ಯಾತ ನಟ ಪ್ರಭುದೇವ ಅವರನ್ನು ಚಲನಚಿತ್ರದ ಮುಹೂರ್ತಕ್ಕೆ ಆಹ್ವಾನಿಸಲು ಚಿತ್ರತಂಡ ಮುಂದಾಗಿದೆ. "ಸದ್ಯಕ್ಕೆ ಅವರು ಈ ಯೋಜನೆಯ ಭಾಗವಲ್ಲ. ಈ ಯೋಜನೆಗೆ ಚಾಲನೆ ನೀಡಲು ಅವರು ಒಪ್ಪಿಕೊಳ್ಳುವ ಭರವಸೆಯಿದೆ" ಎನ್ನುತ್ತಾರೆ ನಿರ್ದೇಶಕ.

ನೇಸರ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯಡಿಯಲ್ಲಿ ಯತೀಶ್ ಗಂಗೂರ್ ನಿರ್ಮಿಸುತ್ತಿರುವ ಈ ಸಿನೆಮಾದಲ್ಲಿ ಬಹುತೇಕ ಎಲ್ಲರೂ ಹೊಸಬರೇ ನಟಿಸುತ್ತಿದ್ದಾರೆ. ಆರ್ಯವರ್ಧನ್, ಶ್ರವಣ್, ಐಶ್ವರ್ಯ ಮತ್ತು ಅನುಮ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!