ಸಿನಿಮಾ ಸುದ್ದಿ

'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಟೀಸರ್ ಬಿಡುಗಡೆ

Guruprasad Narayana

ನವದೆಹಲಿ: ಅತಿ ನಿರೀಕ್ಷಿತ ಸಿನೆಮಾ 'ಸಚಿನ್ ಎ ಬಿಲಿಯನ್ ಡ್ರೀಮ್ಸ್'ನ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಟ್ವಿಟ್ಟರ್ ನಲ್ಲಿ ಈ ಟೀಸರ್ ವಿಡಿಯೋ ಬಿಡುಗಡೆ ಮಾಡಿದ್ದು "ನಿಮ್ಮ ಬೆಂಬಲ ಮತ್ತು ಹಾರೈಕೆಗಳೊಂದಿಗೆ ಈ ವಿಶೇಷ ಪಯಣ ಮುಗಿಸಿದ್ದೇನೆ. ಈಗ ಟೀಸರ್ ನಿಮ್ಮ ಮುಂದೆ ಇಡುತ್ತಿದ್ದೇನೆ" ಎಂದಿದ್ದಾರೆ.

ಈ ಸಿನೆಮಾದ ಮೂಲಕ ೪೨ ವರ್ಷದ ಕ್ರಿಕೆಟ್ ತಾರೆ ಸಿನೆಮಾಗೆ ಪಾದರ್ಪಣೆ ಮಾಡಿದ್ದಾರೆ.

ಟೀಸರ್ ನಲ್ಲಿ ತೆಂಡುಲ್ಕರ್ "ನಿನ್ನ ಜೀವನದಲ್ಲಿ ಒಂದು ಅಧ್ಯಾಯವಾದ ಕ್ರಿಕೆಟ್ ಆಡುವುದಕ್ಕಾಗಿಯೇ ನಿನ್ನನ್ನು ಆಯ್ಕೆ ಮಾಡಲಾಗಿದೆ, ಆದರೆ ಅದು ನಿನ್ನ ಜೊತೆಗೆ ಎಂದಿಗೂ ಉಳಿಯುವುದು ಎಂದು ನಮ್ಮ ತಂದೆ ಹೇಳುತ್ತಿದ್ದರು" ಎಂದಿದ್ದಾರೆ.

ಜೇಮ್ಸ್ ಎಪ್ಸ್ಕಿನ್ ನಿರ್ದೇಶಿಸಿರುವ ಈ ಸಿನೆಮಾವನ್ನು ರವಿ ಭಾಗಚಂದ್ಕ ನಿರ್ಮಿಸಿದ್ದು ಎ ಆರ್ ರಹಮಾನ್ ಸಂಗೀತ ನೀಡಿದ್ದಾರೆ.

ಟೀಸರ್ ಇಲ್ಲಿದೆ ನೋಡಿ.  

SCROLL FOR NEXT