ಮುಂಬೈ: ಭಾರತದ ಹೆಮ್ಮೆಯ ಕಿರೀಟಕ್ಕೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತೊಂದು ಗರಿ ಪೋಣಿಸಿದ್ದಾರೆ. ಆಸ್ಕರ್ ವಿಜೇತ ಲಿಯನಾರ್ಡೋ ಡಿಕ್ಯಾಪ್ರಿಯೋ, ಫೇಸ್ಬುಕ್ ಸಂಸ್ಥಾಪಕ-ಸಿಇಒ ಮಾರ್ಕ್ ಜ್ಯೂಕರ್ ಬರ್ಗ್, ಗಾಯಕ ನಿಕ್ಕಿ ಮಿನಾಜ್ ಇವರುಗಳ ಜೊತೆಗೆ ಟೈಮ್ಸ್ ವಿಶ್ವದ ೧೦೦ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಿಯಾಂಕಾ ಸ್ಥಾನ ಪಡೆದಿದ್ದಾರೆ.
ಅಮೇರಿಕಾ ಧಾರಾವಾಹಿ 'ಕ್ವಾಂಟಿಕೋ' ಧಾರಾವಾಹಿಯ ಮೂಲಕ ಜಾಗತಿಕವಾಗಿ ಬೆಳಕಿಗೆ ಬಂದಿದ್ದ ನಟಿ ಟೈಮ್ಸ್ ಪತ್ರಿಕೆಯ ಆರು ಮುಖಪುಟಗಳಲ್ಲಿ ಒಂದರಲ್ಲಿ ಸ್ಥಾನ ಕೂಡ ಪಡೆದಿದ್ದಾರೆ.
ಪ್ರಿಯಾಂಕಾ ಅಲ್ಲದೆ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಭಾರತೀಯ-ಅಮೇರಿಕ ನಿವಾಸಿ ಗೂಗಲ್ ಸಿ ಇ ಒ ಸುಂದರ್ ಪಿಚ್ಚೈ ಮತ್ತು ಆರ್ ಬಿ ಐ ಗವರ್ನರ್ ರಘುರಾಮ್ ರಾಜನ್ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ಭಾರತೀಯರು.